ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಮಿಡಿತ-ತುಡಿತ

image_
ರಘು ಸಂವೇದನ್
9902191549

ಕಳೆದ ತಿಂಗಳ ಧಾರವಾಡ ಕೃಷಿಮೇಳದಲ್ಲಿ ನಾನು ಚಂದಾದಾರನಾಗಿದ್ದೆ. ನಮ್ಮಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತೇವೆ. ಹಾಗಾಗಿ ನಿಮ್ಮ ಪತ್ರಿಕೆಯಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ಅಂದರೆ ಬೆಳೆ ಕೊಯ್ಲೋತ್ತರ ಬಗ್ಗೆ, ಬೀಜಗಳ ಆಯ್ಕೆ, ಸಸಿ ಸಿದ್ಧಪಡಿಸಿಕೊಳ್ಳುವ ಬಗ್ಗೆ, ಪ್ಲಾಂಟೇಶನ್ ಮಾಡಬೇಕಾದ ಸಮಯ ಮತ್ತು ಮಾಡುವ ವಿಧಾನ, ಅವುಗಳಿಗೆ ಸಿಂಪಡಿಸಬೇಕಾದ ಔಷಧಗಳು, ತಳಿಗಳ ಬಗ್ಗೆ ಮತ್ತು ಅವುಗಳಿಗೆ ಇರುವ ಎಕ್ಸ್ಪೋರ್ಟ್ ಮಾರ್ಕೆಟ್ ಬಗ್ಗೆ ಸವಿಸ್ತಾರವಾಗಿ ತಿಳಿಸಬೇಕೆಂದು ತಮ್ಮಲ್ಲಿ ಕೇಳಿಕೊಂಡಿದ್ದೆವು. ನಾನು ಈಗ ಕ್ಯಾಪ್ಸಿಕಂ, ಟೊಮಾಟೊ ಮತ್ತು ಮೆಣಸಿನಕಾಯಿ ಬೆಳೆಯುತ್ತಿರುವ ಮಾಹಿತಿಯ ಕೊರತೆಯಿಂದ ಹೆಚ್ಚು ಲಾಭ ಗಳಿಸಲು ಆಗುತ್ತಿಲ್ಲ. ನಮ್ಮ ಭಾಗದಲ್ಲಿ ಯಾವೊಂದು ಪತ್ರಿಕೆಯಲ್ಲಿ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ನಿಮ್ಮ ಈ ಹಿಂದಿನ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ನೋಡಿದ್ದು ತುಂಬಾ ಉಪಯುಕ್ತ ಮಾಹಿತಿಗಳನ್ನು ನೀಡಿರುತ್ತೀರಿ. ಅದೇ ರೀತಿ ನಮ್ಮ ಭಾಗದಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಇಲ್ಲಿನ ರೈತರಿಗೆ ತುಂಬಾ ಉಪಯೋಗವಾಗುವುದು ಎಂಬುದು ನನ್ನ ಅಭಿಪ್ರಾಯ

--ಈ. ರವೀಂದ್ರ ಗೌಡ, ಬಳ್ಳಾರಿ


ನಾನು ನೇಗಿಲ ಮಿಡಿತ ಪತ್ರಿಕೆಯ ಓದುಗನಾಗಿದ್ದು, ಪತ್ರಿಕೆ ಚೆನ್ನಾಗಿ ಬರುತ್ತಿದೆ. ತಮ್ಮ ಪತ್ರಿಕೆಯಲ್ಲಿ ಅರಿಷಿಣ ಬೆಳೆಯ ಕುರಿತು ಸಮಗ್ರ ಮಾಹಿತಿ ನೀಡಬೇಕೆಂದು ಕೋರುತ್ತೇನೆ.

--ಮಂಜುನಾಥ ಎ., ಶಿವಮೊಗ್ಗ


ರೈತರ ಹಾಗೂ ನಾಗರೀಕರ ನಾಡಿ ಮಿಡಿತಕ್ಕೆ ತಕ್ಕಂತೆ ಸ್ಪಂದಿಸುತ್ತಾ, ಅಗತ್ಯ ತಂತ್ರಜ್ಞಾನ ಮಾಹಿತಿಯನ್ನು ನೀಡುತ್ತಿರುವ ’ನೇಗಿಲ ಮಿಡಿತ’ ಮಾಸ ಪತ್ರಿಕೆ ನಮ್ಮೆಲ್ಲರ ಹೆಮ್ಮೆ. ಇಡೀ ತಂಡದ ಸದಸ್ಯರು ಅಭಿನಂದನಾರ್ಹರು. ಈ ಮಧ್ಯ ಕರ್ನಾಟಕದ ಕೃಷಿ ಸಂಬಂಧಿತ ಸಂಸ್ಥೆಗಳೆಲ್ಲೆಲ್ಲ ಎದ್ದು ಕಾಣುವಂಥ ಸಾಧನೆ, ಅತ್ಯಲ್ಪ ಸಮಯದಲ್ಲಿ, ’ನೇಗಿಲ ಮಿಡಿತ’ ದಿಂದ ಸಾಧ್ಯವಾಗಿದೆ. ಪ್ರಕಟಿತ ಚಿತ್ರಗಳು, ಬದುಕಿಗೆ ಹತ್ತಿರವಾಗುವ ವಿವರಗಳು, ನಿರಂತರ ಕಲಿಕೆ, ತಿಂಗಳಿಗೊಂದು ವಿಷಯ ಕೇಂದ್ರಿತ ಮಾಹಿತಿ, ಇವೆಲ್ಲವೂ ನೇಗಿಲ ಮಿಡಿತವನ್ನು ಸಂಗ್ರಹಯೋಗ್ಯ ಪತ್ರಿಕೆಯನ್ನಾಗಿಸಿವೆ. ಸವಾಲೆಂದರೆ, ಇಷ್ಟು ಸುಂದರ ಪತ್ರಿಕೆ ಮೂಡಿಸಿದ ತಂಡವು, ಈ ಮಟ್ಟದಿಂದ ಮೇಲೆ ಏರುವ ಅವಕಾಶ ಇಟ್ಟುಕೊಂಡು, ಕೆಳಗೆ ಇಳಿಯದಂತೆ ನೋಡಿಕೊಳ್ಳುವುದು. ನಮ್ಮೆಲ್ಲರ ಶುಭ ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುವವು.

--ಡಾ. ದೇವರಾಜ ಟಿ.ಎನ್., ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಐಸಿಎಆರ್