ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಹಕ್ಕಿ ಜ್ವರ

ಡಾ.ಸುಂದರೇಶನ್.ಎಸ್
9449178183
1

ಹಕ್ಕಿ ಜ್ವರವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇನ್ಪ್ಲೂಯೆಂಜಾ ವೈರಾಣುವಿನಿಂದ ಉಂಟಾಗುತ್ತದೆ. ಭಾರತದಲ್ಲಿ ಇನ್ಫ್ಲೂಯೆಂಜಾ ಟೈಪ್-ಎ ವೈರಾಣುವಿನ ಹೆಚ್೫ಎನ್೧ ಹಾಗೂ ಹೆಚ್೫ಎನ್೮ ಎಂಬ ಎರಡು ವಿಧದ ವೈರಾಣುಗಳಿಂದ ಹಕ್ಕಿ ಜ್ವರದ ರೋಗೋದ್ರೇಕಗಳು ಕಾಣಿಸಿಕೊಳ್ಳುತ್ತಿವೆ. ಈ ರೋಗವನ್ನು ಕೋಳಿ ಜ್ವರ, ಕೋಳಿ ಶೀತಜ್ವರ ಹಾಗೂ ಕೋಳಿ ವಿಷಮ ಜ್ವರ ಎಂಬ ಹೆಸರುಗಳಿಂದ ಹಾಗೂ ಇಂಗ್ಲಿಷ್ನಲ್ಲಿ ಬರ್ಡ್ಪ್ಲೂ ಅಥವಾ ಏವಿಯನ್ ಇನ್ಪ್ಲೂಯೆಂಜಾ ಎಂದು ಕರೆಯುವರು.

3

ಹಕ್ಕಿಜ್ವರ ಕಂಡುಬರುವ ಪ್ರಾಣಿ ಮತ್ತು ಪಕ್ಷಿಗಳು

ಹಕ್ಕಿ ಜ್ವರವು ಕೋಳಿಯ ವಿವಿಧ ಪ್ರಭೇದಗಳಾದ ಬಾತು ಕೋಳಿ, ಮಾಂಸದ ಕೋಳಿ, ಮೊಟ್ಟೆಯ ಕೋಳಿ, ಟರ್ಕಿಕೋಳಿ, ಗಿನಿಕೋಳಿ, ಚುಕ್ರ, ಬಣ್ಣದ ಹಕ್ಕಿ, ಹೆಬ್ಬಾತು ಮತ್ತು ಪಂಜರ ಪಕ್ಷಿಗಳಾದ ಮೈನಾ, ಪ್ಯಾರಾ ಕೀಟ್, ಗಿಣಿ, ಕಾಕುಟ, ಗಿಜಗ, ಹಾಕ್ ಇನ್ನಿತರ ಪಕ್ಷಿಗಳಲ್ಲಿ ಕಂಡುಬರುತ್ತದೆ.

ಹರಡುವ ವಿಧಾನ

 • ಹಕ್ಕಿ ಜ್ವರದಿಂದ ಮೃತಪಟ್ಟ ಹಕ್ಕಿಗಳ ನೇರ ಸಂಪರ್ಕದಿಂದ, ಸೋಂಕಿತ ಮಲ/ಹಿಕ್ಕೆ, ಗೊಣ್ಣೆ ಮುಂತಾದವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಪಕ್ಷಿಗಳಿಗೆ ರೋಗ ಬರುತ್ತದೆ.
 • ಇದಲ್ಲದೆ ಸೋಂಕಿತ ಕೋಳಿಗಳ ಗೂಡು, ಪಂಜರ, ಆಹಾರ, ನೀರಿನ ಪರಿಕರಗಳು, ಮೊಟ್ಟೆ, ಮಾಂಸ, ಸಾಗಣೆವಸ್ತುಗಳಲ್ಲಿ ಮತ್ತು ವಾಹನಗಳು ಹಾಗೂ ಫಾರ್ಮ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬಟ್ಟೆಗಳಿಂದಲೂ ಸಹ ರೋಗ ಹರಡಬಹುದು.
 • ಸರಿಯಾಗಿ ಬೇಯಿಸದ ರೋಗಪೀಡಿತ ಹಕ್ಕಿಗಳ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನುವುದರಿಂದ ಹರಡಬಹುದು. ಆದರೆ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ರೋಗ ಹರಡುವುದಿಲ್ಲ.
 • ರೋಗಲಕ್ಷಣಗಳು

  1112
 • ರೋಗಗ್ರಸ್ಥ ಕೋಳಿಗಳಲ್ಲಿ ಆಹಾರ ನೀರು ಸೇವನೆ ಕಡಿಮೆಯಾಗುವುದು, ಮುದುಡಿಕೊಳ್ಳುವುದು ಹಾಗು ರೆಕ್ಕೆ-ಪುಕ್ಕ ಹರಡಿಕೊಂಡಿರುವುದು.
 • ಕೆಮ್ಮು, ಸೀನು, ಗೊರಗೊರ ಶಬ್ದಮಾಡುವುದು, ಉಸಿರಾಟದ ತೊಂದರೆ, ಮೂಗು ಹಾಗೂ ಕಣ್ಣಿನಲ್ಲಿ ನೀರು ಸ್ರವಿಸುವುದು.
 • ತಲೆ, ಕಾಲು ಹಾಗೂ ಪುಕ್ಕಗಳಿಲ್ಲದ ಜಾಗ ಊದಿಕೊಂಡು ಕೆಂಪಾಗುವುದು, ನಂತರ ನೀಲಿಬಣ್ಣಕ್ಕೆ ತಿರುಗುವುದು ಭೇದಿಯಾಗುವುದು, ಕೆಲವೊಮ್ಮೆ ನರರೋಗದ ಲಕ್ಷಣಗಳು ಕಾಣಿಸಿಕೊಳ್ಳುವುವು.
 • ಮೊಟ್ಟೆ ಕೋಳಿಗಳಲ್ಲಿ ಮೊಟ್ಟೆ ಉತ್ಪಾದನೆ ಕಡಿಮೆಯಾಗುವುದು
 • ಆಹಾರ ನೀರು ಸೇವಿಸಲಾಗದೆ ನಿತ್ರಾಣಗೊಂಡು ಕೆಲವು ಗಂಟೆಗಳಲ್ಲಿ ಇಲ್ಲವೆ ೨-೩ ದಿನಗಳಲ್ಲಿ ಸಾವನ್ನಪ್ಪುವುವು
 • 18

  ಮನುಷ್ಯರಲ್ಲಿ ಹಕ್ಕಿಜ್ವರದ ಲಕ್ಷಣಗಳು

 • ಜ್ವರ, ಮೈಕೈನೋವು, ಉಸಿರಾಟದ ತೊಂದರೆ, ಕಣ್ಣುರಿ, ಗಂಟಲುಉರಿ, ಕೆಮ್ಮು ಶ್ವಾಸಕೋಶದ ತೊಂದರೆ, ನರಗಳ ದೌರ್ಬಲ್ಯ ನಂತರ ಸಾವು. ಆದರೆ ಹಕ್ಕಿಜ್ವರವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
 • ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳು

 • ಪ್ರತಿದಿನ ಕೋಳಿಗಳ ಆರೋಗ್ಯದ ಕಡೆ ನಿಗಾವಹಿಸಿ, ಹಕ್ಕಿಜ್ವರಕ್ಕೆ ಸಂಬಂಧಿಸಿದ ಲಕ್ಷಣಗಳು ಕಂಡರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಸಾವನ್ನಪ್ಪುತ್ತಿದ್ದರೆ ತಕ್ಷಣ ಸಮಿಪದ ಪಶುವೈದ್ಯರ ಗಮನಕ್ಕೆ ತರಬೇಕು.
 • ವಲಸೆಹಕ್ಕಿಗಳು ಅಥವಾ ಕಾಡುಪಕ್ಷಿಗಳು, ಸಾಕುಕೋಳಿ ಮತ್ತು ಕೋಳಿಫಾರ್ಮ್ನ ಸಂಪರ್ಕಕ್ಕೆ ಬರದಂತೆ ನಿಗಾವಹಿಸಬೇಕು.
 • 24
 • ನದಿ, ಕೆರೆ-ಕಟ್ಟೆ, ತೊರೆ ಮತ್ತು ಇತರೆ ನೀರಿನ ಜಾಗಕ್ಕೆ ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣ ಪಶುವೈದ್ಯ ಇಲಾಖೆಯ ಗಮನಕ್ಕೆ ತರಬೇಕು.
 • ಹಂದಿ ಸಾಕಾಣೆ, ಕೋಳಿ-ಬಾತುಗೀಜಗ ಟರ್ಕಿ ಕೋಳಿಗಳ ಸಾಕಣೆಯನ್ನು ಒಂದೇ ಪ್ರದೇಶದಲ್ಲಿ ಮಾಡಬಾರದು.
 • ಕೋಳಿ ಸಾಕುವ ಪ್ರದೇಶ, ಫಾರ್ಮ್ಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು.
 • 28
 • ಕೋಳಿ ಮಾಂಸಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ/ಕುದಿಸಿ ತಿನ್ನಬೇಕು.
 • ರೋಗಪೀಡಿತ ಕೋಳಿಗಳನ್ನು ಮುಟ್ಟುವ ಮೊದಲು ಸರಿಯಾದ ಪರಿಕರ ಹಾಗೂ ಬಟ್ಟೆಗಳನ್ನು ಪಶುವೈದ್ಯರ ಸಲಹೆಯಂತೆ ತೊಡಬೇಕು. ನಂತರ ಸೋಪಿನಿಂದ ಚೆನ್ನಾಗಿ ಕೈತೊಳೆದುಕೊಳ್ಳಬೇಕು.
 • ರೋಗಪೀಡಿತ ಕೋಳಿಗಳನ್ನು ಜನವಸತಿ ಪ್ರದೇಶದಿಂದ ಹಾಗು ಇತರೆ ಆರೋಗ್ಯವಂತ ಕೋಳಿಗಳಿಂದ ಬೇರ್ಪಡಿಸಿ ಕ್ರಿಮಿನಾಶಕಗಳೊಂದಿಗೆ ಆಳವಾಗಿ ಹೂಳಬೇಕು. ಹೂತುಹಾಕಿದ ಸ್ಥಳವನ್ನು ಗುರುತಿಸಿ ನಾಮಫಲಕ ಹಾಕಬೇಕು.
 • ರೋಗಪೀಡಿತ ಕೋಳಿಗಳನ್ನು ಸಾಕುತ್ತಿದ್ದ ಜಾಗ/ಕೋಳಿಫಾರ್ಮ್ನ್ನು ಸ್ವಚ್ಚಗೊಳಿಸಿ ಸೂಕ್ತ ಕ್ರಿಮಿನಾಶಕ (ಶೇ.೪ರ ಫಾರ್ಮಲಿನ್ ದ್ರಾವಣ ಅಥವಾ ಶೇ.೨ರ ಸೋಡಿಯಂ ಹೈಪೊಕ್ಲೋರೈಡ್ ದ್ರಾವಣ)ಗಳನ್ನು ಸಿಂಪಡಿಸಬೇಕು.
 • ಹಕ್ಕಿಜ್ವರ ತಡೆಗಟ್ಟುವಲ್ಲಿ ಕೋಳಿ ಸಾಕಣೆದಾರರು ಮತ್ತು ಸಾಮಾನ್ಯ ಜನರ ಪಾತ್ರ

  34
 • ಕೋಳಿಗಳು ಅಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತಿದ್ದರೆ ತಕ್ಷಣವೇ ಹತ್ತಿರದ ಪಶುವೈದ್ಯರ ಗಮನಕ್ಕೆ ತರಬೇಕಾಗುತ್ತದೆ. ಹಕ್ಕಿಜ್ವರ ಒಂದು ಅಧಿಸೂಚಿಸಬಹುದಾದ ರೋಗವಾದ್ದರಿಂದ ಪಶುವೈದ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ.
 • ಹಕ್ಕಿಜ್ವರದ ಇರುವಿಕೆಯನ್ನು ಪ್ರಯೋಗಾಲಯ ಪರೀಕ್ಷೆ ಮುಖಾಂತರ ಖಚಿತಪಡಿಸಿಕೊಂಡ ನಂತರ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವೈಜ್ಞಾನಿಕ ರೀತಿಯಲ್ಲಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ. ನಿಯಂತ್ರಣ ಕ್ರಮಗಳನ್ನು ಸರ್ಕಾರದ ವಿವಿಧ ಇಲಾಖೆಗಳ ಹಾಗು ಸ್ಥಳಿಯ ಸಂಸ್ಥೆಗಳ ಸಹಯೋಗದೊಂದಿಗೆ ಸಮಾರೋಪಾದಿಯಲ್ಲಿ ನಡೆಸಲಾಗುವುದು.