ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ

ಸುರೇಶ ಚ.ಅಳಗುಂಡಗಿ,
9731652967
1

ಎಲೆ ಕೆಂಪಾಗುವಿಕೆಗೆ ಪ್ರಮುಖ ಹಾಗೂ ನಿಖರವಾದ ಕಾರಣಗಳು ತಿಳಿದಿಲ್ಲವಾದರೂ ಅನೇಕ ಸಂಶೋಧನೆಗಳ ಪ್ರಕಾರ ಇದು ಸಸ್ಯಶರೀರ ಕ್ರಿಯೆಗೆ ಸಂಬಂಧಿಸಿದ್ದು, ಸೆಪ್ಟಂಬರ್ನಿಂದ ಡಿಸೆಂಬರ್ ತಿಂಗಳವರೆಗೂ ಹಗಲು ಮತ್ತು ರಾತ್ರಿ ಉಷ್ಣಾಂಶದಲ್ಲಿ ಹೆಚ್ಚಿನ ವ್ಯತ್ಯಾಸವಾದಾಗ (೧೫೦ಅ ಗಿಂತ ಕಡಿಮೆ) ಎಲೆಗಳಲ್ಲಿ ಪತ್ರ ಹರಿತ್ತು ಉತ್ಪಾದನೆ ಕಡಿಮೆಗೊಂಡು ಎಲೆಗಳಲ್ಲಿ ’ಅಂಥೋಸೈನಿನ್’ ಎಂಬ ಕೆಂಪು ಬಣ್ಣದ ದ್ರವ್ಯ ಹೆಚ್ಚು ಉತ್ಪಾದನೆಯಾಗಿ ಎಲೆಯು ಕೆಂಪಾಗುತ್ತದೆ. ಮಳೆಯಾಶ್ರಿತ ಬೆಳೆಯಲ್ಲಿ ಇದರ ಭಾದೆ ಹೆಚ್ಚಾಗಿ ಕಂಡು ಬರುವುದು. ಸಂಶೋಧನೆಗಳ ಪ್ರಕಾರ ಈ ಹಂತದಲ್ಲಿ ಎಲೆಗಳಲ್ಲಿ ಸಾರಜನಕದ ಪ್ರಮಾಣವು ಶೇ.೨ಕ್ಕಿಂತ ಕಡಿಮೆಯಾಗುವುದು. ಜಿಂಕ್, ಕ್ಯಾಲ್ಸಿಯಂ ಮತ್ತು ಮೆಗ್ನೇಷಿಯಂ ಪೋಷಕಾಂಶಗಳ ತೀವ್ರ ಕೊರತೆ, ಪಶ್ಚಿಮಾಭಿಮುಖವಾಗಿ ಬೀಸುವ ಗಾಳಿ ಇವೆಲ್ಲ ಕಾರಣಗಳಿಂದಾಗಿ ಎಲೆ ಕೆಂಪಾಗುವಿಕೆ ಒಂದು ಕ್ಲಿಷ್ಟವಾದ ಸಂಕೀರ್ಣ ಸಸ್ಯ ಶರೀರ ನ್ಯೂನ್ಯತೆ ಎಂದು ತಿಳಿಯಬಹುದು.

ಲಕ್ಷಣಗಳು

ಪ್ರಾರಂಭದಲ್ಲಿ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಗಿಡದ ಟೊಂಗೆ, ಹೂ ಮತ್ತು ಕಾಯಿಗಳು ಕೆಂಪಾಗುತ್ತವೆ. ಭಾದೆಯು ಉಲ್ಬಣಗೊಂಡಾಗ ಸಸ್ಯಗಳ ಬೆಳವಣಿಗೆ ಕುಂಠಿತಗೊಂಡು ಹೂ, ಕಾಯಿ, ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರಿ ಇಳುವರಿ ಕಡಿಮೆಗೊಳ್ಳಲು ಕಾರಣವಾಗುತ್ತದೆ.

ನಿರ್ವಹಣಾ ಕ್ರಮಗಳು

೧.ಮುಂಚಿತವಾಗಿ ಬಿತ್ತನೆ ಅಂದರೆ ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡುವುದರಿಂದ ಬೆಳೆಯ ಹೂ, ಕಾಯಿ, ಬೀಜ ಹಂತದಲ್ಲಿ ಕನಿಷ್ಠ ರಾತ್ರಿ ಹಾಗೂ ಗರಿಷ್ಠ ಹಗಲು ಉಷ್ಣತೆ ಅವಧಿಯನ್ನು ತಪ್ಪಿಸಬಹುದು.

೨.ಸಾಕಷ್ಟು ಪ್ರಮಾಣದ ಸಾವಯವ ಗೊಬ್ಬರಗಳನ್ನು ಒದಗಿಸಿ ಇದರ ಜೊತೆಗೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಪೋಷಕಾಂಶಗಳ ಸಮತೋಲನ ಗೊಬ್ಬರ ಒದಗಿಸುವುದು.

೩.ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ, ಲಘು ಪೋಷಕಾಂಶಗಳ ಕೊರತೆ ಇರುವ ಮಣ್ಣಿನಲ್ಲಿ ಬಿತ್ತನೆಗೆ ಮುಂಚಿತವಾಗಿ ಪ್ರತಿ ಹೆಕ್ಟೇರಿಗೆ ೨೫ ಕಿ.ಗ್ರಾಂ ಮೆಗ್ನೇಷಿಯಂ ಸಲ್ಫೇಟ್ ಜೊತೆಗೆ ತಲಾ ೧೦ ಕಿ.ಗ್ರಾಂ ಜಿಂಕ್ ಸಲ್ಫೇಟ್ ಹಾಗೂ ಕಬ್ಬಿಣದ ಸಲ್ಫೇಟ್ನ್ನು ಒದಗಿಸುವುದರಿಂದ ಈ ನ್ಯೂನ್ಯತೆಯನ್ನು ಕಡಿಮೆ ಮಾಡಬಹುದು

9

೫. ಮುಂಜಾಗ್ರತಾ ಕ್ರಮವಾಗಿ ಬೆಳೆಯ ೭೦, ೮೦ ಮತ್ತು ೧೦೦ ದಿನಗಳಲ್ಲಿ ಪ್ರತಿ ಲೀಟರ ನೀರಿಗೆ ೨೦ ಗ್ರಾಂ ಯೂರಿಯಾ ಅಥವಾ ೧೦ ಗ್ರಾಂ ೧೯:೧೯:೧೯ ರಸಗೊಬ್ಬರವನ್ನು ಸಿಂಪಡಿಸಬೇಕು. ಇದರ ಜೊತೆಗೆ ೧೦ ಗ್ರಾಂ ಮೆಗ್ನೇಷಿಯಂ ಸಲ್ಫೇಟ್ನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸುವುದರಿಂದ ಎಲೆ ಕೆಂಪಾಗುವಿಕೆಯನ್ನು ಕಡಿಮೆಗೊಳಿಸಬಹುದು.

೬.ಬಿತ್ತನೆಯಾದ ೬೦ ದಿನಗಳ ನಂತರ ಹಾಗೂ ಚಳಿಗಾಲ ಪ್ರಾರಂಭದ ಮುಂಚಿತವಾಗಿ ಪ್ರತಿ ೧೫ ದಿನಗಳಿಗೊಮ್ಮೆ ಪ್ರತಿ ಲೀಟರ್ ನೀರಿಗೆ ೨೦ಗ್ರಾಂ ಯೂರಿಯಾ ಅಥವಾ ೨೦ಗ್ರಾಂ ಡಿ.ಎ.ಪಿ. ಜೊತೆಗೆ ಪ್ರತಿ ಲೀಟರ್ ನೀರಿಗೆ ೨೦ಗ್ರಾಂ ಪೋಟ್ಯಾಸಿಯಂ ನೈಟ್ರೇಟ್ ಅಥವಾ ೧೦ಗ್ರಾಂ ಎಮ್.ಓ.ಪಿ. ಇವುಗಳನ್ನು ೨ ರಿಂದ ೩ ಬಾರಿ ಎಲೆಗಳ ಮೇಲೆ ಚೆನ್ನಾಗಿ ಸಿಂಪರಣೆ ಮಾಡಬೇಕು. ಈ ಸಿಂಪರಣೆಯನ್ನು ಯಾವುದೇ ಕೀಟನಾಶಕದೊಂದಿಗೆ ಮಿಶ್ರಣ ಮಾಡಬಹುದು.

೭.ಮಣ್ಣಿನ ತೇವಾಂಶ ಕಡಿಮೆಯಾಗದಂತೆ ಕಾಪಾಡಿಕೊಳ್ಳಲು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ತೆಳುವಾಗಿ ನೀರು ಹಾಯಿಸಬೇಕು.

೮.ಈ ನ್ಯೂನತೆಯ ಲಕ್ಷಣ ಕಂಡಕೂಡಲೇ ಶೇ.೧ರ (೧೦ಗ್ರಾಂ ಪ್ರತಿ ಲೀಟರ್ ನೀರಿಗೆ) ಮ್ಯಾಗ್ನೇಷಿಯಂ ಸಲ್ಫೇಟ್ ಮತ್ತು ಕಬ್ಬಿಣ ಸಲ್ಫೇಟ್ ದ್ರಾವಣವನ್ನು ಸಿಂಪಡಿಸುವುದು.

೯.ರಸ ಹೀರುವ ಕೀಟ ಬಾಧೆ ಕಂಡುಬಂದಲ್ಲಿ ಸೂಕ್ತ ಕೀಟನಾಶಕಗಳನ್ನು ಸಿಂಪಡಿಸಬೇಕು.

೧೦.ಬಿತ್ತನೆಯಾದ ೯೦ ದಿನಗಳ ನಂತರ ಶೇ.೦.೫ (೫ಗ್ರಾಂ ಪ್ರತಿ ಲೀಟರ್ ನೀರಿಗೆ) ಜಿಂಕ್ ಸಲ್ಫೇಟ್ ದ್ರಾವಣವನ್ನು ಸಿಂಪಡಿಸಬೇಕು.

ಒಟ್ಟಾರೆಯಾಗಿ ಎಲೆ ಕೆಂಪಾಗುವಿಕೆ ಒಂದು ಕ್ಲಿಷ್ಟಕರವಾದ ಸಸ್ಯ ಶರೀರ ನ್ಯೂನ್ಯತೆಯಾಗಿರುವುದರಿಂದ, ಬೆಳೆಯಲ್ಲಿ ಇದರ ಭಾದೆ ಕಂಡುಬಂದ ನಂತರ ಹತೋಟಿ ಕ್ರಮಗಳನ್ನು ಕೈಗೊಂಡರೆ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಇದರ ಲಕ್ಷಣಗಳು ಕಂಡುಬರುವುದಕ್ಕಿಂತ ಮೊದಲೇ ನಿರ್ವಹಣಾ ಕ್ರಮಗಳನ್ನು ಬೆಳೆಯ ಬೆಳವಣಿಗೆಯ ಹಂತಗಳಲ್ಲಿ ಅನುಸರಿಸಿದರೆ ಹತ್ತಿಯ ಎಲೆ ಕೆಂಪಾಗುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು ಸಾಧ್ಯ.