ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಒಂದು ಬೆಳೆಯಿಂದ ಹತ್ತು ಲಕ್ಷಕ್ಕಿಂತ ಹತ್ತು ಬೆಳೆಯಿಂದ ಹತ್ತು ಲಕ್ಷ ಲೇಸು

1

ರಾಯಚೂರಿನಿಂದ ಬೆಳಿಗ್ಗೆ ೫ ಗಂಟೆಗೆ ಬಿಟ್ಟು ಕವಿತಾಳಕ್ಕೆ ತಲುಪಿದಾಗ ಬೆಳಗಿನ ೬ ಗಂಟೆ, ಇನ್ನು ನಮ್ಮ ವಾಹನ ಕವಿತಾ ಮಿಶ್ರಾ ಅವರ ತೋಟದ ಅಂಚಿಗೆ ಹೋಗುತ್ತಿದ್ದಂತೆ ಆತ್ಮೀಯ ಸ್ವಾಗತ. ಅಲ್ಲಿಂದಲೇ ತೋಟ ಪರಿಚಯಿಸತೊಡಗಿದ ಉಮಾಶಂಕರ ಮಿಶ್ರಾ ತಮ್ಮ ಪತ್ನಿಯ ಸಾಧನೆಗಳನ್ನು ಹೆಮ್ಮೆಯಿಂದ ಪಟ್ಟಿ ಮಾಡಿದರು. ನ್ಯಾಷನಲ್ ಇನ್ನೋವೇಟಿವ್ ಫಾರ್ಮರ್ ಪ್ರಶಸ್ತಿ(ರಾಷ್ಟ್ರೀಯ ಅನ್ವೇಷಣೆ ರೈತ ಪ್ರಶಸ್ತಿ), ಕೃಷಿ ವಿಶ್ವವಿದ್ಯಾಲಯ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ, ಹೈದರಾಬಾದ್-ಇಕ್ರಿಸ್ಯಾಟ್ನ ಗೋಲ್ಡ್ ಅವಾರ್ಡ್ ಪುರಸ್ಕೃತ ಹಾಗೂ ಉತ್ತಮ ಕೃಷಿಯನ್ನು ದೇಶದೆಲ್ಲೆಡೆ ಪರಿಚಯಿಸಲು ಕರ್ನಾಟಕ ತಂಡದಿಂದ ಆಯ್ಕೆಯಾಗಿ ನಾಳೆ ದೆಹಲಿಗೆ ಪ್ರಯಾಣದ ಸಿದ್ಧತೆಯಲ್ಲಿದ್ದವರು ಮಿಶ್ರಾ. ಬಹಳ ಬಿಜಿ ನನ್ನ ಹೆಂಡತಿ ಎನ್ನುತ್ತಿದ್ದಂತೆ ಮನೆಯಿಂದ ಹೊರಬಂದ ಕವಿತಾ ಮಿಶ್ರಾ. ಅವರೊಂದಿಗೆ ಅವರ ಕೃಷಿ ಪಯಣದ ಹರಟೆಯಲ್ಲಿ ಹೊತ್ತು ಹೋದದ್ದೇ ತಿಳಿಯಲಿಲ್ಲ.

3

ಮೂಲತಃ ಕೃಷಿ ಕುಟುಂಬದವಳೇ. ಆದರೆ, ಒಕ್ಕಲುತನದ ಅರಿವಿರಲಿಲ್ಲ. ಹುಬ್ಬಳ್ಳಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಅಂತಿಮ ವರ್ಷದಲ್ಲಿ ಇನ್ಫೋಸಿಸ್ಗೆ, ಕ್ಯಾಂಪಸ್ ಆಯ್ಕೆ ಆಗಿ ನೌಕರಿ ಕನಸು ಕಾಣುತ್ತಿದ್ದ ನನಗೆ ಮದುವೆ ಮಾಡಿದರು. ಉಮಾಶಂಕರ ಮಿಶ್ರಾ ನೌಕರಿ ಮಾಡುತ್ತಿದ್ದರು. ನೋಡು ಕೆಲಸ ಗಿಲಸ ಏನೂ ಬ್ಯಾಡ ಇಲ್ಲೆ ಜಮೀನು ನೋಡಿಕೊಂಡಿರು ಅಂದ್ರು. ಬೆಂಗಳೂರಲ್ಲಿ ಜೀವನ ನಡೆಸುವ ಕನಸು ಕಂಡ ನನಗೆ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಖಿನ್ನಳಾದೆ. ಆ ಬೇಸರದ ಮಧ್ಯೆಯೇ ಧಾರವಾಡದಲ್ಲಿ ಉಳಿದು ಬಿ.ಎ., ಅರ್ಥಶಾಸ್ತ್ರ, ಎಂ.ಎ., ಮನಃಶಾಸ್ತ್ರ ಅಧ್ಯಯನ ಮಾಡಿ ಮಧ್ಯ ಮೂರು ಮಕ್ಕಳ ಬೆಳವಣಿಗೆ ನೋಡಿಕೊಂಡು ಅಲ್ಪ ಸ್ವಲ್ಪ ಕೃಷಿ ಅರ್ಥಮಾಡಿಕೊಂಡೆ ನಂತರ ಗಂಡ ಬೆಳೆಯುತ್ತಿದ್ದ ಸಜ್ಜೆಗೆ ವಿದಾಯ ಹೇಳಿ ತೋಟದ ಬೆಳೆಗಳಿಗೆ ಕಾಲಿಟ್ಟು ಕೃಷಿ ವಿಜ್ಞಾನ ಕೇಂದ್ರ ರಾಯಚೂರಿನ ಸಲಹೆ ಪಡೆದೆ. ನನ್ನ ಪ್ರಯತ್ನ ಪತಿಯ ಸಹಕಾರ ಹಲವು ವಿಜ್ಞಾನಿಗಳ ನೆರವು ನನ್ನ ಈ ಹಂತಕ್ಕೆ ತಲುಪಿಸಿದೆ ಎಂದು ಮಂತ್ರ ಮುಗ್ಧವಾಗುವಂತೆ ನುಡಿದರು.

5

ಅವರು ತಿಳಿಸಿದ ವಿಶೇಷಗಳು

 • ಐವತ್ತು ಎಕರೆ ಜಮೀನಿದೆ. ನಾನೇ ನಿಂತು ಮಾಡುತ್ತಿರುವುದು ೮ ಎಕರೆ. ಉಳಿದ ೪೨ ಎಕರೆ ಯಲ್ಲಿ ಭತ್ತ, ರಾಗಿ, ಸಜ್ಜೆ ಬೆಳೆಯುತ್ತಿದ್ದೇವೆ.
 • ಬೆಳೆಗಳ ಜೊತೆ ಹಸು, ಕುರಿ, ಕೋಳಿ ಸಾಕಣೆ
 • ಫೈಟರ್ ಕೋಳಿ ಸಾಕಣೆ. ನೂರು ಕೋಳಿ ಸಾಕಣೆ. ಕನಿಷ್ಠ ವರ್ಷಕ್ಕೆ ೨೫ ಮಾರಾಟ. ವಿಶೇಷ ಕಾಳಜಿ ಇಲ್ಲ. ಅವು ತೋಟ ಸುತ್ತಿ ಬದುಕುತ್ತವೆ. ಒಂದು ಕೋಳಿ ೫೦೦೦ ರವರೆಗೆ ಮಾರಾಟ. ವಾರ್ಷಿಕ ಒಂದರಿಂದ ಎರಡು ಲಕ್ಷ ಆದಾಯ.ಇಪ್ಪತ್ತೈದು ಕುರಿ ಮರಿ, ೨೫೦೦ ಯಿಂದ ೩೦೦೦ ಸಾವಿರಕ್ಕೆ ತಂದು ನಾಲ್ಕೈದು ತಿಂಗಳು ಸಾಕಿ ೬ ರಿಂದ ೮ ಸಾವಿರಕ್ಕೆ ಮಾರಾಟ. ೧ರಿಂದ ೧.೫ ಲಕ್ಷ ಆದಾಯ.
 • 10
 • ಇಷ್ಟೆಲ್ಲಕ್ಕೂ ೨ಳಿ ಇಂಚು ನೀರು ಇರುವ ಬೋರ್ವೆಲ್ ಆಧಾರ.
 • ಹೊಲದಲ್ಲಿ ಬಿದ್ದ ಹನಿ ನೀರು ಹೊರ ಹೋಗುವುದಿಲ್ಲ.
 • ಸ್ಥಳೀಯ ತೋಟದಲ್ಲಿಯೇ ಮಾರಾಟ
 • ಶ್ರೀಗಂಧ ಸಸಿ ಮಾಡಿ ಮಾರಾಟ. ಮಾವು, ರಕ್ತ ಚಂದನ ಸಸಿ ತರಿಸಿ ಮಾರಾಟ.
 • ಶ್ರೀಗಂಧ ಸಸಿ ಮಾಡಲು ಮೊದಲು ಹುರುಳಿ ನಂತರ ತೊಗರಿ ಆಶ್ರಯ ಸಸ್ಯವಾಗಿ ಬಳಕೆ.
 • ಶ್ರೀಗಂಧ ಮರದ ಬೀಜ ಸಂಗ್ರಹಿಸಿ ಮಾರಾಟ. ಕೆ.ಜಿ. ಬೀಜಕ್ಕೆ ಸಾವಿರ ರೂಪಾಯಿ ವರ್ಷಕ್ಕೆ ಎರಡರಿಂದ ಮೂರು ಲಕ್ಷ ಆದಾಯ.
 • 1718
 • ೧೭ ಟನ್ ದಾಳಿಂಬೆ ರಫ್ತು.
 • ನಿಂಬೆ ೧೦೦ಕ್ಕೆ ೧೯೦ರಿಂದ ೨೦೦ ರೂ. ಇದರಿಂದ ವರ್ಷಕ್ಕೆ ಒಂದು ಲಕ್ಷ ಆದಾಯ.
 • ಗಣಪತಿ ಹಬ್ಬಕ್ಕೆ ಸೀತಾಫಲದಿಂದಾಗಿ ೨ ಲಕ್ಷ ಆದಾಯ
 • ಪ್ರತಿ ಯುಗಾದಿಗೆ ಲೆಕ್ಕಾಚಾರ. ದೊರೆಯುವ ನಿವ್ವಳ ಲಾಭ ಸರಾಸರಿ ೧೨ ಲಕ್ಷ.
 • ಅಬ್ಬಾ ಇವರ ವಿಶೇಷ ಸಾಧನೆಗಳು, ಎಂತವರಿಗೂ ಅಚ್ಚರಿ ಹುಟ್ಟಿಸುತ್ತದೆ. ಇವರು ಹೇಳುವುದೇನೆಂದರೆ, ಒಂದು ಬೆಳೆಯಿಂದ ೧೦ ಲಕ್ಷ ತೆಗೆಯುವ ಬದಲು ಹತ್ತು ಬೆಳೆಯಿಂದ ಹತ್ತು ಲಕ್ಷ ತೆಗೆಯುವುದು ಜಾಣತನ. ಅವರ ಸಾಧನೆಯನ್ನು ಅವರ ಧ್ವನಿಯಲ್ಲಿಯೇ ಕೇಳುವುದೇ ಒಂದು ವಿಶೇಷ ಅನುಭವ.
 •