ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಉತ್ತರ ಕರ್ನಾಟಕದ ಭಕ್ಷ್ಯ - ಸುರಳೀ ಹೋಳಿಗೆ

ಅನಸೂಯ ಪಾಟೀಲ
1

ಯಾವ ಯಾವ ಹಬ್ಬಕ್ಕೆ ಯಾವ ತರಹದ ಅಡಿಗೆ ಮಾಡಿ ಉಣಬಡಿಸಿದರೆ ಮನೆಮಂದಿಯನ್ನೆಲ್ಲಾ ಸಂತೃಪ್ತ ಪಡಿಸಬಹುದು ಎನ್ನುವ ಕಲೆಯನ್ನು ಈಗಿನ ಪೀಳಿಗೆ ಉಡುಗೊರೆಯಾಗಿ ಪಡೆದದ್ದು ಹಿರಿಯರಿಂದ. ರುಚಿಯಾದ ಅಡುಗೆಯನ್ನು ತಯಾರಿಸುವದಲ್ಲದೇ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ನಮ್ಮ ಹಿರಿಯರು ಅರಿತಿರುವ ವಿಷಯ ನಮ್ಮ ತವರಿನ ಅಡುಗೆಗಳಲ್ಲೊಂದಾದ ಸರಳವಾಗಿ ತಯಾರಿಸಲ್ಪಡುವ ಸುರಳೀ ಹೋಳಿಗೆಯನ್ನು ಮಾಡಿ ನಮ್ಮ ಬಾಯಿ ಚಪಲವನ್ನು ನೀಗಿಸಿಕೊಳ್ಳಬಹುದಾಗಿದೆ. ಇಂತಹ ಇಷ್ಟವಾದ ತಿಂಡಿಯನ್ನು ಮಾಡಲು ತಿಳಿಯದೇ ಬವಣೆ ಪಡುವವರಿಗೆ ಈ ಲೇಖನ ಅವರವರ ಕುಟುಂಬಕ್ಕೆ ಸಾಕಾಗುವಷ್ಟು ಅಡಿಗೆ ಸಾಮಾನುಗಳನ್ನು ಸಂಗ್ರಹಿಸಿಟ್ಟುಕೊಂಡು ಸುರಳೀ ಹೋಳಿಗೆ ಮಾಡಬಹುದಾಗಿದೆ.

ಸುರಳೀ ಹೋಳಿಗೆ ಮಾಡುವ ಪದ್ಧತಿ:

ಬೇಕಾಗುವ ಪದಾರ್ಥಗಳು:

ಮೈದಾ-ಳಿ ಕೆ.ಜಿ, ಸಣ್ಣ ರವೆ/ಬಾಂಬೆ ರವೆ- ೧೫೦ ಗ್ರಾಂ, ಬೆಲ್ಲ- ಳಿ ಕೆ.ಜಿ, ಪುಟಾಣಿ ಹಿಟ್ಟು- ೨೫೦ ಗ್ರಾಂ, ಒಣ ಕೊಬ್ಬರಿ-ಒಂದು ಹೋಳಿನ ತುರಿ, ಏಲಕ್ಕಿ ಪುಡಿ-೧ ಚಮಚ, ಲವಂಗ ಪುಡಿ-ಳಿ ಚಮಚ, ಜಾಜಿಕಾಯಿ ಪುಡಿ- ಚಿಟಿಕೆಯಷ್ಟು, ಗಸಗಸೆ- ೪ ಚಮಚ, ಎಣ್ಣೆ- ೨ ಚಮಚ, ಉಪ್ಪು- ಚಿಟಿಕೆಯಷ್ಟು, (ಒಟ್ಟು ಉತ್ಪನ್ನ ೩೦ ಹೋಳಿಗೆಗಳು)

ಮಾಡುವ ವಿಧಾನ:

೧. ಬೆಲ್ಲವನ್ನು ಸಣ್ಣಗೆ ಪುಡಿ ಮಾಡಿಕೊಳ್ಳಬೇಕು.

೨. ಕೊಬ್ಬರಿ ತುರಿಯನ್ನು ಮಿಕ್ಸಿಗೆ ಹಾಕಿ ಸಣ್ಣ ಪುಡಿ ಮಾಡಿಕೊಳ್ಳಬೇಕು

ಸೂಸಲ ತಯಾರಿಕೆ:

ಬೆಲ್ಲದ ಪುಡಿ, ಕೊಬ್ಬರಿ ತುರಿಯ ಪುಡಿ, ಪುಟಾಣಿ ಹಿಟ್ಟು, ಏಲಕ್ಕಿ ಪುಡಿ, ಜಾಜಿಕಾಯಿ ಚಿಟಿಕೆಯಷ್ಟು, ಲವಂಗದ ಪುಡಿ ಸೇರಿಸಿ ಜೊತೆಯಲ್ಲಿ ಗಸಗಸೆ ಸ್ವಲ್ಪ ಬೆಚ್ಚಗೆ ಮಾಡಿ ಸೇರಿಸಿ ಸೂಸಲ ಮಾಡಿಟ್ಟುಕೊಳ್ಳಬೇಕು

ಮೈದಾ ಮತ್ತು ರವೆಯನ್ನು ಸೇರಿಸಿ ಜರಡಿಯಾಡಿ, ಚಿಟಿಕೆ ಉಪ್ಪು, ೨ ಚಮಚ ಬೆಚ್ಚಗೆ ಮಾಡಿದ ಎಣ್ಣೆ ಹಾಗೂ ನೀರು ಸೇರಿಸಿ ಗಟ್ಟಿಯಾಗಿ ಕಣಕ ಕಲೆಸಿ ಒಂದು ಗಂಟೆ ನೆನೆಯಲು ಬಿಡಿ.

12

ನಾದಿದ ಕಣಕದ ಚೂರನ್ನು ಸಣ್ಣ ಉಂಡೆ ಮಾಡಿ ಹಪ್ಪಳದ ಹಾಗೆ ತೆಳ್ಳಗೆ ಮೈದಾ ಹಿಟ್ಟನ್ನು ಉದುರಿಸಿ ಚಪಾತಿ ಆಕಾರದಲ್ಲಿ ಲಟ್ಟಿಸಬೇಕು. ಕಾದ ಕಾವಲಿನ ಮೇಲೆ ಒಂದು ಬದಿ ಬೇಯಿಸಬೇಕು. ನಂತರ ಮಧ್ಯದಲ್ಲಿ ಸೂಸಲ ಹರಡಿ ಎರಡೂ ಕಡೆಗೂ ತುದಿಯನ್ನು ಹಿಡಿದು ಆಯತಾಕಾರದಲ್ಲಿ ಸ್ವಲ್ಪ ಮಡಚಿ(ಚಿತ್ರದಲ್ಲಿ ತೋರಿಸಿದಂತೆ) ತದನಂತರ ಮತ್ತೊಂದು ಮಡಿಕೆ ಮಡಚಿ ಹತ್ತಿ ಬಟ್ಟೆಯಿಂದ ಸ್ವಲ್ಪ ಒತ್ತಿ ಕಾವಲಿಯ ಮೇಲೆ ಬೇಯಿಸಬೇಕು. ಆಯತಾಕಾರದ ಸುರಳೀ ಹೋಳಿಗೆಗಳನ್ನು ಒಂದು ತಿಂಗಳವರೆಗೆ ಡಬ್ಬದಲ್ಲಿ ಇಡಬಹುದು.

ಸುರಳೀ ಹೋಳಿಗೆಯನ್ನು ಉಣಬಡಿಸುವಾಗ ತುಪ್ಪ ಮತ್ತು ಗಟ್ಟಿಯಾದ ಹಾಲನ್ನು ಸೇರಿಸಿ ಬಡಿಸಬೇಕು. ನಮ್ಮ ಹಿರಿಯರು ಮದುವೆ ಸಮಾರಂಭಗಳಲ್ಲಿ ಒಂದು ಸಂದೂಕಿನ ತುಂಬ ಮಾಡಿ. ಬೀಗರಿಗೆ ಬಡಿಸುವುದಲ್ಲದೇ ಮಗಳು ಗಂಡನ ಮನೆಗೆ ಮೊದಲ ಸಲ ಹೋದಾಗ ಊರಿನ ಜನರೆಲ್ಲರಿಗೂ ಸಿಹಿ ಹಂಚಲು ಈ ಸುರಳೀ ಹೋಳಿಗೆಯನ್ನು ಬಳಸುತ್ತಿದ್ದರು. ಈ ಖಾದ್ಯ ಒಂದು ತಿಂಗಳು ಇಟ್ಟರೂ ಕೆಡುವುದಿಲ್ಲ. ಈ ಖಾದ್ಯವು ಎಣ್ಣೆ ರಹಿತ ಪದಾರ್ಥವಾದ್ದರಿಂದ ಎಲ್ಲಾ ವಯಸ್ಸಿನವರಿಗೂ ಆರೋಗ್ಯಕರ ತಿಂಡಿಯಾಗಿದೆ.