ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಅಡಿಕೆ ಬೆಳೆಯ ದುಂಡಾಣು ಎಲೆ ಪಟ್ಟಿ ರೋಗ

ಪುನೀತ್ಕುಮಾರ್ ಎನ್
9844525164
12

ಈ ರೋಗವು ವಾತಾವರಣದಲ್ಲಿ ಹಾಗೂ ಮಣ್ಣಿನಲ್ಲಿ ತೇವಾಂಶ ಹೆಚ್ಚಿರುವಾಗ ಬಹುಬೇಗ ಹರಡುತ್ತದೆ. ಸಾಮಾನ್ಯವಾಗಿ ಎಳೆಯ ೩-೫ ವರ್ಷದ ವಯಸ್ಸಿನ ಗಿಡಗಳು ಈ ರೋಗಕ್ಕೆ ತುತ್ತಾಗುತ್ತವೆ. ಗರಿಗಳ ಮೇಲೆ ನೀರಿನಿಂದ ಒದ್ದೆಯಾದಂತಹ ಹಳದಿಮಿಶ್ರಿತ ಕಂದು ಬಣ್ಣದ ಉದ್ದನೆಯ ಪಟ್ಟಿಗಳು ಕಂಡುಬರುತ್ತವೆ. ಅಂತಹ ಗರಿಗಳ ತಳಭಾಗದಿಂದ ನಸು ಹಳದಿ ಬಣ್ಣದ ಅಂಟು ದ್ರವ ಹೊರಬರುತ್ತದೆ. ರೋಗ ತೀವ್ರವಾದಾಗ ಸುಳಿ ಕೊಳೆಯ ಲಕ್ಷಣಗಳನ್ನು ಸಹ ಕಾಣಬಹುದು. ಅಲ್ಲದೇ ರೋಗ ಉಲ್ಬಣಗೊಂಡಾಗ ಎಲೆಗಳೆಲ್ಲಾ ಸೀಳಿ ಒಣಗುವುವು. ನಂತರ ರೋಗಪೀಡಿತ ಗಿಡಗಳು ಸಾಯುತ್ತವೆ.

ನಿರ್ವಹಣಾ ಕ್ರಮಗಳು: ರೋಗ ಪೀಡಿತ ಒಣಗಿದ ಗರಿಗಳನ್ನು ಕತ್ತರಿಸಿ ಸುಡಬೇಕು. ಇದರ ನಿಯಂತ್ರಣಕ್ಕೆ ಸಾವಯವ ಪದ್ಧತಿಗಳನ್ನು ಅನುಸರಿಸುವ ಕೃಷಿಕರು ಆಗತಾನೇ ಹಾಕಿದ ೧ ಕೆ.ಜಿ ತಾಜಾ ಸಗಣಿಯನ್ನು ೧೦ ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಎಲೆಗಳಿಗೆ ಸಿಂಪಡಿಸಬಹುದು ಅಥವಾ ಪ್ರತಿ ೧೦ ಲೀಟರ್ ನೀರಿಗೆ ೫ ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಜೊತೆಗೆ ೨೦ ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿದ ಮಿಶ್ರಣವನ್ನು ೧೫-೨೦ ದಿನಗಳಿಗೊಮ್ಮೆ ೨ ರಿಂದ ೩ ಬಾರಿ ಸಿಂಪಡಿಸಬಹುದು.