ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಮಲೆನಾಡು ಪ್ರದೇಶಗಳಲ್ಲಿ ಜಾನುವಾರುಗಳಲ್ಲಿ ಕಂಡುಬರುವ ವಿಷಬಾಧೆಗಳು

ಡಾ. ಪ್ರಕಾಶ್ ನಡೂರ್
ಪಶು ಮಹಾವಿದ್ಯಾಲಯ, ಶಿವಮೊಗ್ಗ

ಸಂಚಿಕೆ 10 ರ ಮುಂದುವರೆದ ಭಾಗ............

2

ಇದು ಮಲೆನಾಡಿನ ಜಿಲ್ಲೆಗಳಾದ ಉತ್ತರ ಕನ್ನಡ, ಶಿವಮೊಗ್ಗದ(ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ) ಹಲವು ತಾಲ್ಲೂಕುಗಳಲ್ಲಿ ಮಳೆಗಾಲ ಹತ್ತಿರ ಬಂದಾಗ ಅಥವಾ ಇತರ ಋತುಗಳಲ್ಲಿಯೂ ಸಹ ವಿಶೇಷವಾಗಿ ಎಮ್ಮೆಗಳು ಹಾಗೂ ಮಲೆನಾಡ ಗಿಡ್ಡ ತಳಿಯ ಜಾನುವಾರುಗಳನ್ನು ಬಾಧಿಸುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಜ್ವರದ ಲಕ್ಷಣಗಳು ಇರಬಹುದಾಗಿದ್ದು ಗುದದ್ವಾರ, ಯೋನಿಯ ಭಾಗದಲ್ಲಿ ಹಾಗೂ ತೊಡೆಯ ಮೇಲ್ಭಾಗದಲ್ಲಿ ಊತ ಪ್ರಾರಂಭವಾಗುತ್ತಿದ್ದು, ಈ ಹಂತದಲ್ಲಿ ಜಾನುವಾರು ಮೇವು ತಿನ್ನುವುದನ್ನು ಬಿಡುತ್ತದೆ. ನಂತರದ ಹಂತದಲ್ಲಿ ಜಾನುವಾರಿನ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಾಗಿ ಜಾನುವಾರು ಮೇಲಕ್ಕೆ ಏಳಲು ಆಗುವುದಿಲ್ಲ, ಈ ಸಸ್ಯದಲ್ಲಿ ಹಲವು ವಿಷಕಾರಕಗಳಿದ್ದು, ಜಾನುವಾರುಗಳಲ್ಲಿ ಬಹು ಅಂಗಾಂಗಗಳಿಗೆ ತೀಕ್ಷ್ಣ ಪ್ರಮಾಣದ ಹಾನಿಯನ್ನು ಉಂಟುಮಾಡಿ, ಸಾವನ್ನುಂಟು ಮಾಡುತ್ತವೆ.

4

ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಮರಗಳಾದ ಭಾಗೆ ಅಥವಾ ಹೊಂಬಾ(ಆಲ್ಭೀಜಿಯಾ), ಪೇಲ್ಟೋಪೋರಮ್. ಹೇರೆ ತಂಗಡಿ, ಸೆಸೆಮೆ ಮರ, ಆಸ್ಟ್ರೇಲಿಯನ್ ಬ್ಲಾಕ್ಹುಡ್, ಕೆಂಪು ತುರಬಿ ಮುಂತಾದಗಳನ್ನು ಯೇಥೆಚ್ಚವಾಗಿ ಜಾನುವಾರುಗಳಿಗೆ ನೀಡಿದಾಗ ಸಂಭವನೀಯ ವಿಷಬಾಧೆಯನ್ನು ಉಂಟುಮಡುತ್ತವೆ. ಮಲೆನಾಡಿನಲ್ಲಿ ತಂಪು ವಾತಾವಾರಣದಲ್ಲಿ ಬೆಳೆದಿರುವ ಕೆಲವು ಗಿಡಗಂಟೆಗಳಾದ ಹಾವು ಮಕ್ಕಿ, ಮುಕ್ತಿ ಬಳ್ಳಿ ಮತ್ತು ಗೋಕ್ಷುರಗಳನ್ನು ಮಿಶ್ರತಳಿ ಹಸುಗಳು ಅತೀಯಾಗಿ ತಿಂದಾಗ ವಿಷಬಾಧೆಗೆ ಒಳಪಟ್ಟು ಸಾವನ್ನಪುವುದನ್ನು ಕಾಣಬಹುದು

6

ಶಿಲೀಂಧ್ರ ವಿಷಬಾಧೆ:

ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಕೊರತೆ, ಆಕಾಲಿಕ ಮಳೆ, ಬದಲಾದ ವ್ಯವಸಾಯ ಪದ್ದತಿ, ಅವೈಜ್ಞಾನಿಕ ಜಾನುವಾರು ಮೇವು ಶೇಖರಣಾ ವಿಧಾನಗಳು, ಅವುಗಳನ್ನು ಹೇಗೆ ಮೇವನ್ನು ಶೇಖರಿಸಿಡಬೇಕೆಂಬ ಸಾಮಾನ್ಯ ಜ್ಞಾನ ಹೊಂದಿಲ್ಲದೇ ಇರುವುದು, ವವ್ಯಸಾಯದಲ್ಲಿ ಉತ್ಪತ್ತಿಯೇ ಗುರಿಯಾಗಿಸಿಕೊಂಡಿರುವುದು ಮತ್ತು ವಾತಾವಾರಣದಲ್ಲಿನ ಹವಾಮಾನ ವೈಪರೀತ್ಯಗಳು, ರೈತರು ಸರಿಯಾಗಿ ಶೇಖರಣೆಮಾಡಿರದ ಮೇಕ್ಕೆ ಜೋಳ/ ಜೋಳದ ದಂಟು, ಭತ್ತದ ಹುಲ್ಲು, ಶೇಂಗಾ ಗಿಡಗಳಲ್ಲಿ ಶಿಲೀಂಧ್ರ ಬೆಳೆಯುವುದನ್ನು ನಾವು ಕಾಣಬಹುದು. ಪುಜೋರಿಯಮ್, ಪೆನ್ಸಿಲಿಯಂ ಎಂಬ ಶಿಲೀಂಧ್ರಗಳು ಪಶು ಆಹಾgದಲ್ಲಿ ಸೋಂಕನ್ನು ಉಂಟುಮಾಡುತ್ತವೆ. ಪೂಜೋರಿಯಮ್ ಒಂದರಲ್ಲೇ ಸರಿ ಸುಮಾರು ೨೦ ಕ್ಕೂ ಹೆಚ್ಚು ಶಿಲೀಂಧ್ರ ಜನ್ಯ ವಸ್ತುಗಳನ್ನು ಉಂಟುಮಾಡಿ, ಮಾರಣಾಂತಿಕವಾಗಿ ವಿಷಬಾಧೆಯನ್ನು ಉಂಟುಮಾಡುತ್ತವೆ. ಮುಖ್ಯವಾಗಿ ಇಂತಹ ಶೀಲಿಂಧ್ರ ಬಾಧಿತ ಮೇವನ್ನು ೨-೩ ತಿಂಗ ಕಾಲ ಜಾನುವಾರುಗಳು ತಿಂದಾಗ ವಿಷಬಾಧೆಗೆ ಒಳಾಗಾಗುತ್ತವೆ. ತದ ನಂತರದಲ್ಲಿ ಜಾನುವಾರುಗಳಲ್ಲಿ ರೋಗ ನೀರೊಧಕ ಶಕ್ತಿ ಕಡಿಮೆಯಾಗಿ, ಹಲವು ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತವೆ ಹಾಗೂ ಜಾನುವಾರಗಳ ಉತ್ಪತ್ತಿ ಮತ್ತು ಸಂತನೋತ್ಪತ್ತಿ ಮೇಲೆಯು ಸಹ ಪರಿಣಾಮ ಬೀರಿ, ಗರ್ಭಧರಿಸಿರುವ ರಾಸುಗಳು ಕಂದುಹಾಕುವುದು, ದಿನದಿಂದ ದಿನಕ್ಕೆ ದೇಹದ ಸ್ಥಿತಿ ಗಂಭೀರವಾಗುತ್ತ ಹೋಗಿ, ಮೇವು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತವೆ. ವಿಷಬಾಧೆಯಿಂದ ಬಳಲುವ ಜಾನುವಾರಗಳ ಚರ್ಮಗಳ ಕೆಳಗೆ ರಕ್ತ ಹೆಪ್ಪು ಗಟ್ಟುವುದು ಸಹ ಸಾಮಾನ್ಯವಾದ ಸಂಗತಿ. ಇದಲ್ಲದೇ ಬಾಲದ ಕೂದಲು ಪ್ರಾರಂಭದಲ್ಲಿ ಉದುರಲು ಪ್ರಾರಂಭವಾಗಿ ನಂತರ ಬಾಲವು ಒರಟಾಗುತ್ತಾ ಬರುತ್ತದೆ. ನಂತರ ಬಾಲ ಮತ್ತು ಕಿವಿಯ ತುದಿಯಿಂದ ಚರ್ಮವು ಒಣಗಲು ಪ್ರಾರಂಭವಾಗಿ ಒಂದು ಹಂತದಲ್ಲಿ ಬಾಲ ಮತ್ತು ಕಿವಿಯ ಒಂದು ಭಾಗವೇ ಉದುರಿ ಹೋಗುವ ಸಂಭವವಿರುತ್ತದೆ.

9

ಅಸಂಪ್ರಾದಾಯಕ ಮೇವುಗಳು:

ಬರಗಾಲದ ಸಂದರ್ಭಗಳಲ್ಲಿ ಇಲ್ಲವೇ ಅನಾವೃಷ್ಠಿಯ ಸಮಯದಲ್ಲಿ ಅಸಂಪ್ರಾದಾಯಕ ಮೇವುಗಳಾದ ಹೊಂಗೆ ಹಿಂಡಿ, ಜಟ್ರೋಪ ಹಿಂಡಿ, ಬೇವಿನ ಬೀಜದ ಹಿಂಡಿ, ರಬ್ಬರ್ ಬೀಜದ ಹಿಂಡಿ, ಹಲಸಿನ ಹಣ್ಣಿನ ಸಿಪ್ಪೆ, ಅಡಿಕೆ ಎಲೆ, ಕಾಫಿ ಹೊಟ್ಟು ಮತ್ತು ಹಲಸಿನ ಹಣ್ಣಿನ ಸಿಪ್ಪೆ ಗಳನ್ನು ಶೇ. ೪ ಕ್ಕಿಂತ ಹೆಚ್ಚು ಕೊಟ್ಟಾಗ ವಿಷಬಾಧೆಯನ್ನು ಉಂಟುಮಾಡುತ್ತವೆ. ಆದಷ್ಟು ಈ ಆಹಾರಗಳನ್ನು ಹಾಲು ಕರೆಯುವ ಮತ್ತು ಗರ್ಭದರಿಸಿರುವ ರಾಸುಗಳಿಗೆ ಕೊಡಬಾರದು, ಕೊಡಬೇಕಾದ ಸಂದರ್ಭ ಬಂದಲ್ಲಿ ಶೇ. ೧-೨ ರ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ರಾತಿಯಿಡಿ ನೆನೆಸಿ, ನೀರನ್ನು ಚೆಲ್ಲಿ, ಉಳಿದ ಆಹಾರವನ್ನು ಕೊಡಬೇಕು, ಹತ್ತಿ ಬೀಜದ ಹಿಂಡಿಯನ್ನು ನೀರಿನಲ್ಲಿ ನೆನೆಸಿ, ನೀರನ್ನು ಚೆಲ್ಲಿ ಉಳಿದಿದ್ದನ್ನು ರಾಸುಗಳಿಗೆ ಕೊಡಬಹುದು. ಹತ್ತಿ ಹಿಂಡಿಯನ್ನು ಬೀಜದ ಹೋರಿಗಳಿಗೆ ಹಾಕಬಾರದು, ಹಾಗೇನಾದರೂ ಹಾಕಬೇಕಾದ ಪಕ್ಷದಲ್ಲಿ ಬೀಜದ ಹೋರಿಗಳಿಗೆ ಹತ್ತಿ ಹಿಂಡಿಯ ಜೊತೆಯಲ್ಲಿ ಕಬ್ಬಿಣದ ಅಂಶವನ್ನು ಆಹಾರದಲ್ಲಿ ಸೇರಿಸಬೇಕು. ಭತ್ತದ ಹುಲ್ಲಿನಲ್ಲಿರುವ ಆಗ್ಸಾಲೇಟ್ಸ್(ಔxಚಿಟಚಿಣes)ಗಳು ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಮಾಡುವುದರಿಂದ, ಭತ್ತದ ಹುಲ್ಲನ್ನು ನೀರಿನಲ್ಲಿ ನೆನೆಸಿ ಕೊಡಬೇಕು ಹಾಗೂ ಹಾಲು ಕರೆಯುವ ಗರ್ಭದ ರಾಸುಗಳಿಗೆ ದಿನಂಪ್ರತಿ ಸುಣ್ಣದ ತಿಳಿ ನೀರನ್ನು ಕೊಡಬೇಕು. ಈ ತೆರನಾದ ಉಪಚಾರವನ್ನು ಜಾನುವಾರಗಳಿಗೆ ಕೈಗೊಳ್ಳುವಾಗ ಪಶುವೈದ್ಯರ ಸಲಹೆ ಮತ್ತು ಸೂಚನೆಗಳನ್ನು ಪಡೆದು ಬಳಸತಕ್ಕದ್ದು.