ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ವನೌಷಧಿ ಗುಣಧರ್ಮ

ಅಂಜೂರ

1

ಇದು ಅತಿಮಧುರವೂ, ಶೀತವೀರ್ಯವುಳ್ಳದ್ದೂ ಆಗಿದೆ. ಆದರೆ ಶ್ಲೇಷ್ಮ ಮತ್ತು ಆಮವಾತಕಾರಕವಾಗಿದೆ; ಇದು ಬಹು ರುಚಿಕರವಾದ ಫಲವಾದರೂ ಸುಲಭವಾಗಿ ಜೀರ್ಣವಾಗುವುದಿಲ್ಲ, ಇದರಲ್ಲಿ ವಾತ, ಕ್ರಿಮಿ, ಶೂಲೆ ಹೃತ್ಪೀಡೆ, ರಕ್ತಪಿತ್ತ, ರಕ್ತವಿಕಾರಗಳನ್ನು ಪರಿಹಾರ ಮಾಡತಕ್ಕ ಸಾಮರ್ಥ್ಯವಿದೆ. ಮುಖರೋಗಗಳನ್ನು ದೂರ ಮಾಡುತ್ತದೆ. ಮೂಗಿನಿಂದ ರಕ್ತ ಸುರಿಯುವುದನ್ನು ತಡೆಯುತ್ತದೆ, ಇದರಲ್ಲಿ ಇತರ ಎಲ್ಲ ವಸ್ತುಗಳಿಗಿಂತ ಅತಿ ಹೆಚ್ಚಿನ ಶರೀರ ಪೋಷಣ ದ್ರವ್ಯಗಳಿವೆ. ಮೂತ್ರದೋಷ, ಪ್ರದರರೋಗ, ಯಕೃತ್-ಪ್ಲೀಹಗಳ ವಿಕಾರಗಳನ್ನು ದೂರಗೊಳಿಸುತ್ತದೆ. ಆದರೆ ತಮ್ಮ ತಮ್ಮ ಪಚನಶಕ್ತಿಯನ್ನು ನೋಡಿಕೊಂಡು ಸೇವಿಸಬೇಕು. ಉತ್ತುತ್ತೆ, ಖರ್ಜೂರಗಳಂತೆಯೇ ಸಿಹಿಯಾದರೂ ಇದನ್ನು ಮಧುಮೇಹ ರೋಗಿಗಳು ಧಾರಾಳವಾಗಿ ತಿನ್ನಬಹುದು; ದೇಹಸ್ವಾಸ್ಯ್ಥದ ದೃಷ್ಟಿಯಿಂದ ಇದೊಂದು ಒಳ್ಳೆಯ ಆಹಾರ ವಸ್ತು

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಅಂಜೂರ/ಕಾಕೋದುಂಬರಿಕಾ/ಅಂಜೀರ್ /-/-/(Fig Tree)

ಮಂಜುಲ/ಅಂಜೀರ್/-/-/-/-