ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಬದನೆ : ಫೈಟೋಪ್ಲಾಸ್ಮಾ ಸಣ್ಣ ಎಲೆಗಳ ನಂಜು ರೋಗ

ಡಾ. ಹೆಚ್. ನಾರಾಯಣಸ್ವಾಮಿ
9448159375
1

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬದನೆ ಮುಖ್ಯವಾದ ತರಕಾರಿ ಬೆಳೆಯಾಗಿದೆ. ಈ ಬೆಳೆಯನ್ನು ವರ್ಷದ ಎಲ್ಲಾ ಕಾಲಗಳಲ್ಲಿ ಬೆಳೆಯಬಹುದು. ಇದಕ್ಕೆ ಹಲವಾರು ರೋಗಗಳು ಭಾದಿಸುತ್ತವೆ. ಅವುಗಳಲ್ಲಿ ಪೈಟೋಪ್ಲಾಸ್ಮಾ ರೋಗಣುವಿನಿಂದ ಬರುವ ಸಣ್ಣ ಎಲೆ ರೋಗವೂ ಒಂದು. ಈ ರೋಗವು ಹಿಷಿಮೊನಾಸ್ ಪೈಸಿಟಿಸ್ ಎಂಬ ಕೀಟದಿಂದ ಹರಡುತ್ತದೆ. ರೋಗಪೀಡಿತ ಗಿಡಗಳ ಎಲೆಗಳು ಸಣ್ಣದಾಗುತ್ತವೆ.(ಐiಣಣಟe ಟeಚಿves) ಎಲೆಗಳ ಗಾತ್ರ ಅಂಕುಡೊಂಕಾಗುತ್ತವೆ. ಗಿಡಗಳ ಗಾತ್ರ ಸಣ್ಣದಾಗಿ ಕಂಡುಬಂದು ಹೆಚ್ಚಿನ ರೆಂಬೆಗಳು ಬೆಳೆಯುತ್ತವೆ. ಕಾಂಡಗಳ ಗೆಣ್ಣುಗಳ ಅಂತರ ಕಡಿಮೆಯಾಗುವುದು. ಅಲ್ಲದೆ ಎಲೆಗಳು ಹಾಗೂ ಬೇರುಗಳ ಸಂಖ್ಯೆ ಹೆಚ್ಚಾಗುತ್ತವೆ. ಎಲೆಗಳ ತೊಟ್ಟುಗಳ ಉದ್ದ ಕಡಿಮೆಯಾಗುತ್ತದೆ. ಎಲೆಗಳು ಮತ್ತು ರೆಂಬೆಗಳು ಸಣ್ಣದಾಗಿ ಗುಂಪಾಗಿ ಬೆಳೆದು ಗುಚ್ಚದಂತೆ ಕಾಣುವುವು. ಈ ರೋಗದಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುವುದು. ಹೂಗಳು ಹಸಿರು ಬಣ್ಣಕ್ಕೆ ತಿರುಗಿ ಮುಖ್ಯ ಆಕಾರವನ್ನು ಕಳೆದುಕೊಳ್ಳುತ್ತವೆ. ರೋಗಪೀಡಿತ ಗಿಡಗಳು ಬಂಜೆಯಾಗುತ್ತವೆ. ರೋಗವು ಪ್ರಾರಂಭಿಕ ಬೆಳವಣಿಗೆ ಹಂತದಲ್ಲಿ ಬಂದಲ್ಲಿ ಹೂಗಳು ಸಹ ಬೆಳೆಯುವುದಿಲ್ಲ. ಬದನೆಕಾಯಿ ಬೆಳೆದರೂ ಸಹ ಸಣ್ಣದಾಗಿ ಗಟ್ಟಿಯಾಗಿರುತ್ತದೆ. ಇಂತಹ ಕಾಯಿಗಳನ್ನು ಬಳಸಲು ಉಪಯುಕ್ತವಾಗಿರುವುದಿಲ್ಲ

ನಿರ್ವಹಣೆ ಹೇಗೆ:

೧. ರೋಗ ಪೀಡಿತ ಗಿಡಗಳನ್ನು ಗುರುತಿಸಿ ತೆಗೆಯಬೇಕು.

೨.ರೋಗ ನಿರೋಧಕ ತಳಿಯಾದ ಪೂಸ ಪರ್ಪಲ್ ಉಪಯೋಗಿಸುವುದು.

೩.ಪ್ರತಿ ಲೀಟರ್ ನೀರಿಗೆ ೨ ಮೀ.ಲೀ.ನಂತೆ ಮೆಲಾಥಿಯನ್ ಅಥವಾ ಡೈಮಿಥೋಯೇಟ್ ೧.೭೫ ಮೀ.ಲೀ. ಕೀಟನಾಶಕವನ್ನು ಸಿಂಪಡಿಸಬೇಕು.