ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಆ್ಯಪ ಲೋಕ

ಆ್ಯಪ ಲೋಕ : ಕೃಷಿ ಶಬ್ದಕೋಶ ಕಿರುತಂತ್ರಾಂಶ (Agriculture Dictionary)

image_
ಪ್ರದೀಪ್ ಕುಮಾರ್
9538125130

ಈ ಆಪ್ವು ಕೃಷಿ, ಬೇಸಾಯ, ಪಶು ಸಂಗೋಪನೆ, ಬೆಳೆಗಳು, ಹಣ್ಣುಗಳು, ಜಾನುವಾರುಗಳು, ಕೃಷಿ ಉತ್ಪನ್ನಗಳು, ಕೃಷಿ ಸಂಬಂಧಿತ ಯಂತ್ರಗಳು, ಕೃಷಿ ತಂತ್ರಜ್ಞಾನ, ಕೃಷಿ ಕಾರ್ಯನೀತಿ, ಹವಾಮಾನ, ಪರಿಸರ, ಹಣಕಾಸು ಮತ್ತು ಮಾಹಿತಿ ಸಂವಹನ ತಾಂತ್ರಿಕತೆಗಳಿಗೆ ಸಂಬಂಧಪಟ್ಟ ಸುಮಾರು ೬೦೦೦ ಕ್ಕೂ ಹೆಚ್ಚು ಪದಗಳ ಅರ್ಥ/ವಿವರಣೆಯನ್ನು ನೀಡುತ್ತದೆ. ಇದು ಆಂಗ್ಲಭಾಷೆಯಲ್ಲಿ ಪದದ ಬೆರಳಚ್ಚನ್ನು ಪಡೆದು ನಂತರ ಆಂಗ್ಲಭಾಷೆಯಲ್ಲೇ ಅ ಪದದ ಅರ್ಥ/ವಿವರಣೆಯನ್ನು ನೀಡುತ್ತದೆ. ಉದಾಹರಣೆಗೆ farmers market ಎಂದು ಆಂಗ್ಲಭಾಷೆಯಲ್ಲಿ ಬೆರಳಚ್ಚು ಮಾಡಿದರೆ ಆಪ್ವು a market where farmers sell their produce directly to consumers ಎಂದು ವಿವರಣೆಯನ್ನು ನೀಡುತ್ತದೆ. ಈ ಆಪ್ನಿಂದ ಬೆರಳಚ್ಚು ಮಾಡಿದ ಪದದ ಅರ್ಥ/ವಿವರಣೆಯನ್ನು ಪಡೆಯುವುದಕ್ಕೆ ಮುಂಚೆ ಮೊಬೈಲ್ಅನ್ನು ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿರಬೇಕು ಏಕೆಂದರೆ ಈ ಆಫ್ವು ಅಂತರ್ಜಾಲದ ಸಹಾಯದಿಂದ ಪದಗಳ ಅರ್ಥ/ವಿವರಣೆಯನ್ನು ನೀಡುತ್ತದೆ

Agriculture Dictionary on Google Play