ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಚಿತ್ರ ಲೇಖನ

ಬದನೆ ಬೆಳೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳು

image_
ಡಾ.ಎಸ್.ಟಿ. ಪ್ರಭು,
9448182225
1

ಲ್ಯೂಸಿನೋಡ್ಸ್ ಒರ್ಬೋಿನಾಲಿಸ್ (ಐeuಛಿiಟಿoಜes oಡಿboಟಿಚಿಟi) ಎಂಬ ಬದನೆಯ ಕುಡಿ ಮತ್ತು ಕಾಯಿ ಕೊರೆಯುವ ಹುಳು, ಪತಂಗಗಳ ಗಣಕ್ಕೆ ಸೇರಿದ ಕೀಟವಾಗಿದ್ದು ಬದನೆ ಇಳುವರಿಯಲ್ಲಿ ಗಮನಾರ್ಹ ನಷ್ಟವನ್ನುಂಟು ಮಾಡುತ್ತದೆ. ಈ ಕೀಟ, ಆಲೂಗೆಡ್ಡೆ ಮತ್ತು ಹಾಗಲ ಬೆಳೆಯನ್ನೂ ಬಾಧಿಸುತ್ತದೆ. ಬೆಳೆಯ ಪ್ರಾರಂಭ ಹಂತದಲ್ಲಿ, ಮರಿಹುಳುಗಳು ಎಲೆಯ ದೇಟು ಹಾಗೂ ಮಧ್ಯನರಗಳನ್ನು ಕೊರೆದು ತಿನ್ನುತ್ತವೆ. ಕೊರೆದ ಭಾಗದಲ್ಲಿ ಸಣ್ಣ ರಂಧ್ರವುಂಟಾಗಿ ಕುಡಿಗಳು ಜೋತು ಬಿದ್ದು ಒಣಗುತ್ತವೆ. ಕಾಯಿಗಳು ಪ್ರಾರಂಭವಾದ ನಂತರ ಮರಿಹುಳುಗಳು ಕಾಯಿಗಳನ್ನು ಕೊರೆದು, ಕಾಯಿಯ ಒಳಸೇರಿ ತಿನ್ನುತ್ತವೆ. ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು. ಕೆಲವೊಮ್ಮೆ, ಹೂ ಮೊಗ್ಗುಗಳನ್ನು ಕೊರೆದು ತಿನ್ನುವುದರಿಂದ ಮೊಗ್ಗುಗಳು ಕೆಳಗೆ ಬೀಳುತ್ತವೆ. ಈ ರೀತಿಯ ಹಾನಿಯಿಂದ ಬದನೆ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ

34

ನಿರ್ವಹಣೆ:

  • ಪ್ರತೀ ಹೆಕ್ಟೇರಿಗೆ ೨೫೦ ಕಿ. ಗ್ರಾಂ ಬೇವಿನ ಹಿಂಡಿಯನ್ನು ಸಸಿ ನಾಟಿ ಮಾಡುವ ಸಮಯದಲ್ಲಿ, ನಂತರ ಪ್ರತಿ ತಿಂಗಳಿಗೊಮ್ಮೆ ಎರಡು ಬಾರಿ ಮಣ್ಣಿನಲ್ಲಿ ಬೆರೆಸಬೇಕು
  • ಹಾನಿಗೊಳಗಾದ ಕುಡಿಗಳನ್ನು ಮತ್ತು ಕಾಯಿಗಳನ್ನು ಕಿತ್ತು ನಾಶಮಾಡಬೇಕು.
  • ಪದೇ ಪದೇ ಬದನೆ ಮತ್ತು ಆಲೂಗೆಡ್ಡೆ ಬೆಳೆಗಳನ್ನು ನಿರಂತರ ಒಂದೇ ಜಮೀನಿನಲ್ಲಿ ಬೆಳೆಯುವುದರಿಂದ ಈ ಕೀಟದ ಹಾನಿ ಹೆಚ್ಚಾಗುತ್ತದೆ. ಆದ್ದರಿಂದ, ಸೂಕ್ತವಾದ ಬೆಳೆ ಪರಿವರ್ತನೆ ಮಾಡಬೇಕು.
  • 910
  • ಕುಡಿ ಮತ್ತು ಕಾಯಿ ಕೊರೆಯುವ ಹುಳಕ್ಕೆ ನಿರೋಧಕ ಶಕ್ತಿಯುಳ್ಳ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಪ್ರತಿ ಎಕರೆಗೆ ನಾಲ್ಕು ಮೋಹಕ ಬಲೆಗಳನ್ನು ಬಳಸಿ ಪತಂಗಗಳನ್ನು ಆಕರ್ಷಿಸಿ ಕೊಲ್ಲಬಹುದು.
  • ಕೀಟನಾಶಕಗಳ ಬಳಕೆಯಾಗಿ, ಕಾಯಿ ಬಿಡುವ ಸಮಯದಲ್ಲಿ ೧೫ ದಿವಸಗಳ ಅಂತರದಲ್ಲಿ ೨-೩ ಬಾರಿ ೪ ಗ್ರಾಂ ಕಾರ್ಬರಿಲ್ ಶೇ. ೫೦ ಡಬ್ಲ್ಯೂ. ಪಿ. ಅಥವಾ ೨. ಮಿ. ಲೀ. ಮೇಲಾಥಿಯಾನ್ ೫೦ ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
  • ಸೂಚನೆ: ಕೀಟನಾಶಕಗಳ ನಿರಂತರ ಬಳಕೆ ಮಾಡಿದಾಗ, ಮೈಟ್ ನುಶಿಗಳು ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ, ಬದನೆ ಬೆಳೆಗೆ ಒಂದು ಬಾರಿ ನುಶಿನಾಶಕವಾಗಿ ಡೈಕೋಫಾಲ್ನ್ನು ಪ್ರತಿ ಲೀಟರ್ ನೀರಿಗೆ ೨.೫ ಮಿ.ಲಿ. ಬೆರೆಸಿ ಬೆಳೆಗೆ ಸಿಂಪಡಿಸಬೇಕು.