ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ತಂಬಾಕು-ಕಪ್ಪು ಕಣ್ಣಿನ ಎಲೆ ಚುಕ್ಕೆ ರೋಗ ನಿರ್ವಹಣೆ

ರಾಜು ಜೆ.,
984452164
1

ಈ ರೋಗವು ಸೆರ್ಕೊಸ್ಪೋರ ನಿಕೋಶಿಯಾನ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ ಹಾಗೂ ಈ ಶಿಲೀಂಧ್ರದ ಬೀಜಾಣುಗಳು ಗಾಳಿಯ ಮುಖಾಂತರ ಹರಡುತ್ತದೆ.

ಲಕ್ಷಣಗಳು:

  • ಎಲೆಗಳ ಮೇಲೆ ಚುಕ್ಕೆಗಳು ಮೊದಲು ಕೆಳಭಾಗದಲ್ಲಿ ಕಾಣಿಸಿಕೊಂಡು ಮೇಲ್ಭಾಗಕ್ಕೆ ಹರಡುತ್ತವೆ.
  • ವೃತ್ತಾಕಾರದ ಖಾಕಿ ಬಣ್ಣದ ಚುಕ್ಕಿಗಳ ಮಧ್ಯದಲ್ಲಿ ಕಪ್ಪು ಚಿಕ್ಕ ಚುಕ್ಕೆಗಳಿರುತ್ತವೆ.
  • ಚುಕ್ಕೆಗಳು ದೂರದಿಂದ ಕಪ್ಪೆ ಕಣ್ಣಿನಂತೆ ಗೋಚರಿಸುತ್ತವೆ.
  • ರೋಗದ ತೀವ್ರತೆ ಹೆಚ್ಚಾದಾಗ ಈ ಚುಕ್ಕೆಗಳು ಕೂಡಿಕೊಂಡು ಎಲೆಗಳೂ ಒಣಗುತ್ತವೆ. ಇದರಿಂದಾಗಿ ಗುಣಮಟ್ಟ ಕೆಡುತ್ತದೆ.
  • ನಿರ್ವಹಣೆ:

  • ನಾಟಿ ಮಾಡುವ ಮೊದಲು ರೋಗಪೀಡಿತ ಎಲೆಗಳನ್ನು ಕಿತ್ತು ನಾಶಪಡಿಸಬೇಕು.
  • ಶೇ. ೦.೧ರ ಕಾರ್ಬೆಂಡೈಜಿಂ ಅಥವಾ ಶೇ.೦.೨ರ ಕ್ಲೋರೋಥಲೋನಿಲ್ನ್ನು ರೋಗ ಕಂಡ ತಕ್ಷಣ ಸಿಂಪಡಣೆ ಮಾಡಬೇಕು. ರೋಗದ ತೀವ್ರತೆಯನ್ನು ನೋಡಿಕೊಂಡು ೨ರಿಂದ ೩ ಬಾರಿ ಸಿಂಪರಣೆ ಮಾಡುವುದು ಒಳ್ಳೆಯದು.
  •