ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ವಿಭಿನ್ನ ಚಿಂತನೆ

ಹೊಸ ಆಯಾಮಕ್ಕೆ ನಾಂದಿ

image_
ಬಿ. ಎಮ್. ಚಿತ್ತಾಪೂರ,
೯೪೪೮೮೨೧೭೫೫

ಸೆಪ್ಟೆಂಬರ ೨೬ರ ’ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಹಾವೇರಿ ಭಾಗದ ರೈತರು ತಮ್ಮ ಹಸುಗಳಿಗೆ ಸುಣ್ಣದ ತಿಳಿ ನೀರನ್ನು (ಒಂದು ಕಿ.ಗ್ರಾಂ ಸುಟ್ಟ ಸುಣ್ಣವನ್ನು ೨೦ ಲೀಟರ್ ನೀರಿನಲ್ಲಿ ಕರಗಿಸಿ ಮೇಲಿನ ಒಂದು ಲೀಟರ್ ತಿಳಿ ನೀರನ್ನು ಬಳಸಲು ಉಪಯೋಗಿಸಿ ಮತ್ತೆ ಒಂದು ಲೀಟರ್ ತಾಜಾ ನೀರನ್ನು ಮಿಶ್ರಣಕ್ಕೆ ಹಾಕಬೇಕು. ಇಪ್ಪತ್ತು ದಿನಗಳ ನಂತರ ಮತ್ತೆ ಹೊಸದಾಗಿ ದ್ರಾವಣ ತಯಾರಿಸಿಕೊಳ್ಳಬೇಕು) ಪ್ರತಿ ದಿನ ನೀಡುವ ದಾಣಿಯೊಡನೆ ಬೆರೆಸಿ ಹಸುಗಳಿಗೆ ನೀಡಿದಾಗ ರುಚಿಕರವಾದ ಮತ್ತು ಕಾಲ್ಸಿಯಮ್ಯುಕ್ತ ಪೋಷಕದಿಂದಾಗಿ ಹಾಲಿನ ಇಳುವರಿ ಒಂದು ಲೀಟರಿಗೂ ಮಿಕ್ಕಿ ಹೆಚ್ಚಾದುದು ಕಂಡುಬಂದು ಇದೊಂದು ದೈನಂದಿನ ಕ್ರಮವಾಗಿ ಬೆಳೆಯ ಹತ್ತಿರುವುದೆಂದು ವರದಿಯಾಗಿದೆ. ಇದು ಕೂಡ ವಿಭಿನ್ನ ಚಿಂತನೆಯ ಫಲವಲ್ಲವೇ? ಹೀಗೆ ಪ್ರತಿ ಯಶಸ್ವಿ ರೈತರ ಹಿಂದೆ ಅವರದೆಯಾದ ವಿಭಿನ್ನ ಚಿಂತನೆ ಕಂಡುಬರುತ್ತದೆ. ರೈತರು ತೆರೆದ ಕಣ್ಣವರಾಗಿ ಜ್ಞಾನಾಸಕ್ತರಾದರೆ ಎನೆಲ್ಲ ವಿಷಯಗಳು ತಿಳಿಯುತ್ತವೆ ಮತ್ತು ಇಂತಹ ಚಿಂತನೆಗಳು ಕೃಷಿಯ ಈ ಹಂತದ ಬೆಳವಣಿಗೆಗೆ ಕಾರಣವಾಗಿರುವುದಲ್ಲದೆ ಹೊಸ ಅನ್ವೇಷಣೆಗೆ, ಅವಿಷ್ಕಾರಗಳಿಗೆ ನಾಂದಿಯಾಗುತ್ತವೆ, ಸಮಸ್ಯೆಗಳಿಗೆ ಸಮರ್ಪಕ ಪರ್ಯಾಯಗಳನ್ನು ನೀಡುವಲ್ಲಿ ಸಹಾಯವಾಗುತ್ತವೆ. ಹೀಗೆ ವಿಭಿನ್ನ ಚಿಂತನೆಯ ಸಾಕಾರತೆಯು ನಿರಂತರ ಕೃಷಿ ಪ್ರಗತಿಗೆ ಕಾರಣವಾಗುತ್ತವೆಯೆಂದು ಬೇರೆ ಹೇಳಬೇಕಿಲ್ಲ