ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಅಡಿಕೆಯ ಪರ್ಯಾಯ ಬಳಕೆ

ಡಾ. ಟಿ. ಎಂ. ಸೌಮ್ಯ,
೯೯೮೬೦೪೫೭೧೨
1

ಮಲೆನಾಡಿಗೆ ಸೀಮಿತವಾಗಿದ್ದ ಪ್ಲಾಂಟೇಷನ್ ಬೆಳೆ ಅಡಿಕೆ ಕಳೆದ ದಶಕದಿಂದೀಚೆಗೆ ವಿವಿಧ ವಾತಾವರಣಗಳಲ್ಲೂ ಬೆಳೆಯಲ್ಪಡುತ್ತಿದೆ. ಹಾಗೆಯೇ ಬೆಳೆದ ರೈತರಿಗೆ ಹಣವನ್ನು ಮಾಡಿಕೊಟ್ಟಿದೆ. ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರ/ಪ್ರಕಟವಾಗುತ್ತಿರುವ ಅಡಿಕೆ ಕುರಿತಾದ ಮಾಹಿತಿಗಳಿಂದ ಅಡಿಕೆಯನ್ನು ಎಲ್ಲಿ ಸಂಪೂರ್ಣವಾಗಿ ಕೈ ಬಿಡಬೇಕಾದೀತೋ ಎಂಬ ಆತಂಕ ಕೆಲವರ ಮನದಲ್ಲಿ ಮೂಡುವುದರೊಳಗಾಗಿ ಅಡಿಕೆಯ ವಿಭಿನ್ನ ಬಳಕೆಯ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಅಡಿಕೆಯ ಪರ್ಯಾಯ ಬಳಕೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಚಂದ್ರಶೇಖರ್ ಕಾಕಲ್ ಮತ್ತು ಶ್ರೀ ನಿವೇದನ್ ನೆಂಪೆಯವರೊಡನೆ ’ನೇಗಿಲ ಮಿಡಿತ’ದ ಸಹ ಸಂಪಾದಕರಾದ ಡಾ. ಟಿ. ಎಂ.ಸೌಮ್ಯರವರು ನಡೆಸಿದ ಸಂದರ್ಶನ

ಅಡಿಕೆಯ ಮರವನ್ನು ಬಳಸಿ ಪೀಠೋಪಕರಣಗಳನ್ನು ತಯಾರಿಸುತ್ತಿರುವ ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಶ್ರೀ ಚಂದ್ರಶೇಖರ್ ಕಾಕಲ್ ಇವರನ್ನು ಸಂದರ್ಶಿಸಿದಾಗ ಅಡಿಕೆ, ಎಲ್ಲರೂ ತಿಳಿದಂತೆ ಕೇವಲ ಗುಟ್ಕಕ್ಕಾಗಿ ಬಳಸಲ್ಪಡದೇ ಅಡಿಕೆಯ ಬಿದ್ದ ಮರಗಳು, ರೋಗಪೀಡಿತ ಮರಗಳು ಪೀಠೋಪಕರಣಗಳನ್ನು ತಯಾರಿಸಲು ಉಪಯೋಗಿಸಲ್ಪಡುತ್ತವೆ ಎಂಬುದು ತಿಳಿಯಲ್ಪಟ್ಟಿತು. ಅಡಿಕೆಯ ಮರ, ಉರುವಲಿಗಾಗಿ, ಅಟ್ಟ ಕಟ್ಟಲು ಬಳಸಲ್ಪಟ್ಟರೆ, ಪೂಜೆಗೆ ಅಡಿಕೆ ಸಿಂಗಾರ ಬಹುಶ್ರೇಷ್ಠ, ಸಿಹಿ ಊಟದ ನಂತರ ನಮ್ಮ ಸಂಸ್ಕೃತಿಯಲ್ಲಿ ಅಭ್ಯಾಸವಾಗಿರುವ ಎಲೆ ಅಡಿಕೆ ಬಳಕೆ, ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆದ ಬಾಳೆಯಿಂದ ಊಟಕ್ಕಾಗಿ ಬಾಳೆ ಎಲೆಯ ಬಳಕೆ. ಇನ್ನು ಮನೆಗೆ ಹೊದಿಸಲು ಅಡಿಕೆ ಸೋಗೆ, ಬಳಸಿ ಕಾಲಾನಂತರ ಅದೇ ಸೋಗೆಯನ್ನು ಗೊಬ್ಬರವಾಗಿ ಬಳಸಬಹುದು

ಸಹ ಸಂಪಾದಕರು: ನಮಸ್ಕಾರ ಚಂದ್ರಶೇಖರ್ರವರೇ

5

ಚಂದ್ರಶೇಖರ್: ನಮಸ್ಕಾರ

ಸಹ ಸಂಪಾದಕರು: ತಮ್ಮ ಪರಿಚಯ

ಚಂದ್ರಶೇಖರ್: ನಾನು ಮೂಲತಃ ಸಾಗರ ತಾಲೂಕಿನ ಹೆಗ್ಗೋಡಿನವನಾದರೂ ನಾನು ನನ್ನ ೧೫ ನೇ ವರ್ಷಕ್ಕೆ ಊರು ಬಿಟ್ಟೆ, ಅಲ್ಲಿಂದ ವಿದ್ಯಾಭ್ಯಾಸದ ನಂತರ ಸುಮಾರು ೧೮-೨೦ ವರ್ಷಗಳ ಕಾಲ ಸಾಫ್ಟ್ವೇರ್ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ ಹಲವಾರು ದೇಶಗಳನ್ನು ಸುತ್ತಿ ಬಂದೆ.

ಸಹ ಸಂಪಾದಕರು: ದೂರದ ಬೆಂಗಳೂರಿಗೂ ಅಡಿಕೆ ಪರ್ಯಾಯ ಬಳಕೆಯ ಕುರಿತಾದ ನಿಮ್ಮ ಆಸಕ್ತಿಗೂ ಇರುವ ಲಿಂಕ್ ಹೇಗೆ?

ಚಂದ್ರಶೇಖರ್: ನನ್ನೂರು ಹೆಗ್ಗೋಡಿನಲ್ಲಿ ನನ್ನ ತೋಟವಿರುದುಂಟು. ಅಲ್ಲದೇ ನಾನು ಪ್ರಪಂಚದ ವಿವಿಧ ದೇಶಗಳನ್ನು ಸುತ್ತುವಾಗ ಕಂಡ ಕೆಲವು ವಿಷಯಗಳನ್ನು ಇಲ್ಲಿಗೆ ಹೊಂದುವಂತೆ ಬಳಸಲ್ಪಡೋದು ಹೇಗೆ ಅಂತಾ ಯೋಚಿಸ್ತಿದ್ದಾಗ, ವಿದೇಶಗಳಲ್ಲಿ ತಮ್ಮ ಹೂದೋಟಗಳಿಗೆ Piಛಿಞeಣ ಜಿeಟಿಛಿe ಮತ್ತು ಗೇಟ್ಗಳನ್ನು ಮಾಡುವಂತೆ ನಾವು ಅಡಿಕೆ ದಬ್ಬೆಯನ್ನು ಬಳಸಿ ಗೇಟ್ಗಳನ್ನು ಮಾಡುವ ಐಡಿಯಾ ಹೊಳಿತು. ಅಲ್ಲದೇ ನನಗೆ ಅಗ್ರಿ ಬೇಸ್ಡ್ ಸ್ಟಾರ್ಟ್ಅಪ್ ಮಾಡುವ ಬಯಕೆಯೂ ಇತ್ತು.

ಸಹ ಸಂಪಾದಕರು: ಆದ್ರೆ ನೀವು ಅಲ್ಲಿ.... ನಿಮ್ಮ ಕನಸು ಇಲ್ಲಿ....

ಚಂದ್ರಶೇಖರ್: ಹ್ಹ ಹ್ಹ ಹ್ಹ....... ಹೆಗ್ಗೋಡಿನಲ್ಲಿ ನನ್ನ ಹೈಸ್ಕೂಲ್ ಗೆಳೆಯನ ಮಗ ಸಂತೋಷ್ ಅಡಿಕೆಗೆ ಶೈನಿಂಗ್ ಕೊಟ್ಟು ಕೀ ಬಂಚ್ ಮಾಡಿ ಮಾರ್ತಿದ್ದ. ಅವನಿಗೆ ನನ್ನ ಕನಸಿನ ಬಗ್ಗೆ ವಿವರಿಸಿದಾಗ ಅವನೂ ಕೈಜೋಡಿಸಿ ಜವಾಬ್ದಾರಿ ತೆಗೆದುಕೊಳ್ಳಲು ಒಪ್ಪಿದಾಗ ಹೆಗ್ಗೋಡಿನಲ್ಲಿ ನಡೆಯುವ ಕೆಲಸಗಳು ಸುಲಭವಾಗಿದ್ದಲ್ಲದೇ ಸಂತೋಷನಿಗೂ ಉದ್ಯಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ತು.

ಸಹ ಸಂಪಾದಕರು: ಅಡಿಕೆ ಮರ ಗಟ್ಟಿ ಬರುತ್ತಾ? ತುಂಬಾ ಬೇಗ ಹಾಳಾಗಲ್ವಾ?

ಚಂದ್ರಶೇಖರ್: ನೋ ನೋ, ಏನೂ ಉಪಚಾರ ಮಾಡದೇ ಬಳಸಿದ್ರೆ ಕನಿಷ್ಠ ಮೂರು ವರ್ಷ, ಉಪಚರಿಸಿ ಬಳಸಿದ್ರೆ ೧೫ ವರ್ಷನಾದ್ರೂ ಬಂದೇ ಬರುತ್ತೆ. ಅಡಿಕೆ ಮರ ತುಂಬಾ ಗಟ್ಟಿ, ಪ್ಲೇನಿಂಗ್ ಮಾಡೋದು ಕಷ್ಟ. ಹೆವ್ಹಿ ಡ್ಯೂಟಿ ಮಷಿನ್ಗಳು ಬೇಕಾಗುತ್ತೆ.

ಸಹ ಸಂಪಾದಕರು: ಅಡಿಕೆಯ ಮರ ಬಳಸಿ ಪಿಕೆಟ್ ಫೆನ್ಸ್ ಮತ್ತು ಗೇಟ್ ಹೊರತುಪಡಿಸಿ ಮತ್ತೇನಾದ್ರೂ ಮಾಡಬಹುದಾ?

ಚಂದ್ರಶೇಖರ್: ಖಂಡಿತಾ. ಪಿಕೆಟ್ ಫೆನ್ಸ್ನಲ್ಲೇ ಹಲವಾರು ಬಗೆಗಳಿವೆ(ಆಟದ ಮೈದಾನ, ಉದ್ಯಾನವನ ಮತ್ತು ಒಳಾಂಗಣ ವಿನ್ಯಾಸಗಳಿಗೆ) ಅಲ್ಲದೇ, ವಾಲ್ ಪ್ಯಾನೆಲ್(ಪ್ಲೇನ್ ಮತ್ತು ಕಾರ್ವ್ಡ್), ಪೀಠೋಪಕರಣಗಳು(ಟೇಬಲ್, ಕುರ್ಚಿ, ಬೆಂಚು, ಡೈನಿಂಗ್ ಟೇಬಲ್), ಫ್ಲೋರಿಂಗ್ ಮಾಡಬಹುದು. ಜೊತೆಗೆ ಚಿತ್ರಕಲಾ ಕೆಲಸಗಳಿಗೆ ಬೇಸ್ ಮಟೀರಿಯಲ್ ಆಗಿ ಕೂಡ ಬಳಸಬಹುದು.

ಸಹ ಸಂಪಾದಕರು: ಹಾಗಾದ್ರೆ, ಮರಗಳನ್ನು ಕಡಿದು ಬಳಸುವುದು ಅಚಿತಾನಾ?

ಚಂದ್ರಶೇಖರ್: ಛೆ ಛೆ!! ಖಂಡಿತಾ ಇಲ್ಲ, ಬಿದ್ದಿರೋ ಅಡಿಕೆ ಮರ, ವಯಸ್ಸಾದ ಮರಗಳನ್ನು ಈ ಕೆಲಸಗಳಿಗೆ ಬಳಸಬಹುದು. ಹದಿನೈದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಮರಗಳು ಮರದ ಕೆಲಸಕ್ಕೆ ಒಳ್ಳೆಯದು.

ಸಹ ಸಂಪಾದಕರು: ಇವುಗಳ ಗುಣಮಟ್ಟ, ಬಾಳಿಕೆ ಬಗ್ಗೆ ಖಾತ್ರಿ.

20

ಚಂದ್ರಶೇಖರ್: ವುಡ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ಸ್ಟ್ರೆಂಥ್, ಡೆನ್ಸಿಟಿ ಕುರಿತು ಪರಶೀಲಿಸಲಾಗಿದೆ. ಹಾಗೇ ಇನ್ನು ಕೆಲವು ಸಂಶೋಧನೆಗಳಾಗಬೇಕಿದೆ. ಅದಕ್ಕೆಲ್ಲ ವಿಶ್ವವಿದ್ಯಾಲಯಗಳು/ಕ್ಯಾಂಪ್ಕೋಸ್/ಮ್ಯಾಮ್ಕೋಸ್ನವರು ಕೈಜೋಡಿಸಿದರೆ ಉತ್ತಮ

ಸಹ ಸಂಪಾದಕರು: ತುಂಬಾ ಸಂತೋಷ. ಅಡಿಕೆ ಮರದಿಂದ ವಿವಿಧ ಉತ್ಪನ್ನಗಳನ್ನು ಮಾಡುತ್ತಿರುವ ನಿಮ್ಮ ಕಾರ್ಯಕ್ಕೆ ನಮ್ಮ ಅಭಿನಂದನೆಗಳು.

ಅಡಿಕೆ ಮರದ ಪರ್ಯಾಯ ಬಳಕೆ ಕುರಿತು ಮಾಹಿತಿ ನೀಡಿದ ಶ್ರೀ ಚಂದ್ರಶೇಖರ್ ಕಾಕಲ್ರವರಿಗೆ ಅಭಿನಂದನೆ. ಹಾಗೆಯೇ ಮತ್ತೋರ್ವ ಉದ್ಯಮಿಯೊಂದಿಗೆ ಸಂದರ್ಶನ ಮುಂದುವರೆದ್ದುದರ ಆಯ್ದ ಭಾಗ.

೧.ನೇಗಿಲ ಮಿಡಿತದ ಓದುಗರಿಗಾಗಿ ತಮ್ಮ ಪರಿಚಯ: ಶ್ರೀ ನಿವೇದನ್ ನೆಂಪೆ, ಮಂಡಗದ್ದೆ, ತೀರ್ಥಹಳ್ಳಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ. ಕಲಿತದ್ದು ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ’ಬಿ ಫಾರ್ಮಾ.

೨.ಇತ್ತೀಚಿನ ದಿನಗಳಲ್ಲಿ ಅಡಿಕೆ ಕುರಿತ ಕಾರ್ಯಕ್ರಮಗಳಲ್ಲಿ ತಮ್ಮ ಅರೇಕಾ ಟೀ ಹೆಸರು ಕೇಳಿ ಬರುತ್ತದೆ... ಅದರ ಕುರಿತಾದ ಮಾಹಿತಿ: ಅಡಿಕೆ ಅಂದ್ರೆ ಕೆಟ್ಟದ್ದು, ಅಡಿಕೆಯಿಂದ ದುಷ್ಪರಿಣಾಮಗಳಿವೆ ಅನ್ನೋ ಕಾಲ ಇತ್ತು. ಆದ್ರೆ ಈಗ ಅಡಿಕೇನೂ ಆಹಾರದಂತೆ ಬಳಸಬಹುದು. ಅಡಿಕೆಯಿಂದ ಟೀ ಮಾಡಬಹುದು ಅನ್ನೋದೆ ಇದರ ವಿಶೇಷ.

೩. ತಮ್ಮ ಈ ಉತ್ಪನ್ನದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಿಲ್ಲವೆ?: ಖಂಡಿತಾ ಇಲ್ಲ. ಅಡಿಕೆ ಟೀ ಅಥವಾ ಅರೇಕಾ ಟೀ ಹಲವಾರು ರೋಗಗಳ ನಿವಾರಣೆಗಾಗಿ ಬಳಕೆ ಮಾಡಬಹುದು. ಇದರಿಂದ ಸಕ್ಕರೆ ಕಾಯಿಲೆ, ಗ್ಯಾಸ್ಟ್ರೈಟಿಸ್ಗಳನ್ನು ಹತೋಟಿಯಲ್ಲಿಡಬಹುದು. ಕೊಲೆಸ್ಟರಾಲ್ ಕೂಡ ಕಡಿಮೆ ಆಣುತ್ತೆ

೪. ಅಡಿಕೆಯಿಂದ ಟೀ ಮಾಡಬಹುದು ಅನಿಸಿದ್ದು ಯಾಕೆ? ಮತ್ತು ಯಾವಾಗ?: ನಾನು ಮೂಲತಃ ಮಲೆನಾಡಿನವನು. ಹಾಗೆಯೇ ಅಡಿಕೆ ಕೂಡ ಇಲ್ಲಿಯ ಮುಖ್ಯ ಬೆಳೆ. ಹೀಗೆ ಅಡಿಕೆಯಲ್ಲಿರಬಹುದಾದ ವೈದ್ಯಕೀಯ ಗುಣಗಳಿಗಾಗಿ ಪರೀಕ್ಷಿಸಿದಾಗ ಅರೇಕಾ ಟೀ ಮಾಡುವ ಐಡಿಯಾ ಹೊಳೆದಿದ್ದು, ಕಷಾಯ ಅಂದ್ರೆ ಉತ್ಪನ್ನ ಓಡಲ್ಲ. ಟೀ ಅಂದ್ರೆ ಎಸ್. ಎಲ್ಲರಿಗೂ ಇಷ್ಟ ಆಗುತ್ತೆ. ನಾವು ಕುಡಿಯೋ ಟೀನಲ್ಲಿರೋ ಕಂಟೆಂಟ್ಸೇ ಇದ್ರಲ್ಲೂ ಇದೆ. ಫ್ಲೇವರ್ ಮಾತ್ರ ಅಡಿಕೆದು ಬರುತ್ತೆ. ಹೆಚ್ಚು ಕಮ್ಮಿ ಮಾಮೂಲಿ ಟೀ ರೀತಿನೇ ಇರೋದ್ರಿಂದ ಅರೇಕಾ ಟೀ ಮಾಡಬೇಕಾಯ್ತು.

೫. ನಿಮ್ಮ ಈ ಹೊಸತನದ ಉತ್ಪನ್ನಕ್ಕೆ ದೊರೆತಿರುವ ಪ್ರಶಸ್ತಿ ಮತ್ತು ಪುರಸ್ಕಾರಗಳು......: ಮೇಕ್ ಇನ್ ಇಂಡಿಯಾ ಎಕ್ಸಲೆನ್ಸಿ ಅವಾರ್ಡ್, ಇನ್ನೋವೇಟಿವ್ ಪ್ರಾಡೆಕ್ಟ್ ಆಫ್ ದ ಇಯರ್ ೨೦೧೫ ಅವಾರ್ಡ್ಗಳು ಲಭಿಸಿವೆ. ರೋಟರಿ, ಲಯನ್ಸ್ನವರು ಗುರುತಿಸಿ ಸನ್ಮಾನಿಸಿದ್ದಾರೆ. ಜಿಲ್ಲಾ ಮಟ್ಟದ ಬ್ಯುಸಿನೆಸ್ ಮ್ಯಾನ್ ಆಫ್ ದ ಇಯರ್ ಪ್ರಶಸ್ತಿ ಕೂಡ ಲಭಿಸಿದೆ. ಹೀಗೆ ಹೊಸತನವನ್ನು ಪ್ರೋತ್ಸಾಹಿಸುವ ಹಲವರು ಗುರುತಿಸಿ ಸನ್ಮಾನಿಸಿದ್ದಾರೆ.

೬.ಅರೇಕಾ ಟೀ ಹೊರತುಪಡಿಸಿ ಮತ್ತೇನಾದ್ರೂ ಸಂಶೋಧನೆಗಳು: ಮಲೆನಾಡಿನಲ್ಲಿ ಮಂಗನ ಹಾವಳಿ ತಡೆಗಟ್ಟಲು, ಅಡಿಕೆ ಕೊಳೆರೋಗ ಮತ್ತು ನುಸಿ ನಿರ್ವಹಣೆ ಕುರಿತಂತೆ ಕೆಲಸ ಪ್ರಗತಿಯಲ್ಲಿದೆ. ಇನ್ನೂ ಬಿಡುಗಡೆಯಾಗಿಲ್ಲ.

೭.ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ವ್ಯವಸ್ಥೆ ಹೇಗಿದೆ?:ಅಂದಿನ ಉತ್ಪನ್ನಕ್ಕೆ ಅಂದೇ ಬೇಡಿಕೆ ಇದೆ. ಆನ್ಲೈನ್ ವ್ಯಾಪಾರ ಹೆಚ್ಚಾಗಿದೆ. ಅಮೆಜಾನ್, ಅರೇಕಾಟೀ.ಕಾಂ ಮತ್ತು ಇತರೆ ಆಯುರ್ವೇದಿಕ್ ಸೈಟ್ಗಳಲ್ಲಿಯೂ ಮಾರಾಟ ಆಗ್ತಿದೆ.