ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಕರಿಮೆಣಸು

ಹೆಚ್.ಎಸ್. ಶ್ರೀನಿವಾಸ,
9483523600
1

ಎಲ್ಲಿ ಸೂಕ್ತ: ತೋಟಗಳಲ್ಲಿ ಅಂತರ್ ಬೆಳೆ/ ಏಕಬೆಳೆಯಾಗಿ ಬೆಳೆಯಬಹುದು. ಉತ್ತಮ ಬಸಿಯುವಿಕೆ ಹಾಗೂ ೪.೫ ೬.೫ ರಸಸಾರ ಇರುವ ಮಣ್ಣು.

ತಳಿಗಳು: ಪಣಿಯೂರು ೧ ರಿಂದ ೭, ಗಿರಿಮುಂಡ, ಐ.ಐ.ಎಸ್.ಆರ್ ಮಲಬಾರ್ ಎಕ್ಸೆಲ್, ಶುಭಕರ, ಶ್ರೀಕರ ಪಂಚಮಿ, ಪೌರ್ಣಮಿ, ಐ.ಐ.ಎಸ್.ಆರ್ ಶಕ್ತಿ, ಮಲ್ಲಿಗೆ ಸರ ಮತ್ತು ಉದ್ದಗೆರೆ ಇತ್ಯಾದಿ.

ನಾಟಿ: ಮಳೆಗಾಲ ಪ್ರಾರಂಭ ಸೂಕ್ತ. ಬಿಸಿಲು ಬೀಳುವ ದಿಕ್ಕಿಗೆ ವಿರುದ್ಧವಾಗಿ ಇಳಿಜಾರು ಕಡೆ ನಾಟಿ ಮಾಡಿ ಹಬ್ಬು ಮರದಿಂದ ೧ ರಿಂದ ೧ಳಿ ದೂರದಲ್ಲಿ ೨ ಅಡಿ ಚೌಕ ಗುಂಡಿ ತೆಗೆದು ಬೇವಿನ ಹಿಂಡಿ ಟ್ರೈಕೋಡರ್ಮಾ ಹಾಕಿ ನಾಟಿ ಮಾಡಿ.

5

ನಿರ್ವಹಣೆ: ಗೊಬ್ಬರ ವಾರ್ಷಿಕ ೧೪೦: ೫೦: ೨೭೦ ಗ್ರಾಂ ಸಾರಜನಕ, ರಂಜಕ, ಪೊಟ್ಯಾಷ್ ಅನ್ನು ಕೊಟ್ಟಿಗೆ ಗೊಬ್ಬರದ ಜೊತೆ ನೀಡಬೇಕು. ಗಿಡ ವಯಸ್ಸಿಗೆ ಅನುಗುಣವಾಗಿ ಪ್ರಾರಂಭಿಕ ವರ್ಷದಲ್ಲಿ ಕಡಿಮೆ ನೀಡಿ. ಬಳ್ಳಿ ಬೆಳೆದಂತೆ ಆಶ್ರಯ ಗಿಡಕ್ಕೆ ಹಬ್ಬಲು ನೆರವು ಕೊಡಿ. ಮಣ್ಣು ಪರೀಕ್ಷೆ ಆಧರಿಸಿ ಸೂಕ್ಷ್ಮ ಪೋಷಕಾಂಶ ಕೊಡಬೇಕು.

೧.ಮಾರ್ಚ್ ೧೦-೧೫ರ ನಂತರ ೬ರಿಂದ ೭ ಲೀ. ನೀರು ಪ್ರತಿ ಬಳ್ಳಿಗೆ ಪ್ರತಿ ದಿನಕ್ಕೆ ಅಥವಾ ೫೦ ಲೀ. ನೀರು ಪ್ರತಿ ವಾರಕ್ಕೊಮ್ಮೆ ಕೊಡಬೇಕು.

೨.ಏಪ್ರಿಲ್ ಮೊದಲ ವಾರದ ಮೊದಲು ನೆರಳು ಸರಿಪಡಿಸುವುದು ಅಗತ್ಯ.

9

೩.ಮೇ ತಿಂಗಳಿನಲ್ಲಿ ಸುಣ್ಣ, ಕಾಂಪೋಸ್ಟ್, ಮೇಲುಗೊಬ್ಬರ, ಟ್ರೈಕೋಡರ್ಮ ಹಾಕಿ ಬಡದಲ್ಲಿ ನೀರು ನಿಲ್ಲದಂತೆ ಬುಡ ಮತ್ತು ಬೇರಿಗೆ ಹಾನಿಯಾಗದಂತೆ ಮಣ್ಣೇರಿಸುವುದು.

೪.ಜೂನ್ ಮತ್ತು ಆಗಸ್ಟ್ನಲ್ಲಿ ಶೇ. ೧ ಬೋರ್ಡೊ ದ್ರಾವಣ ಸಿಂಪಡಣೆ ಮಾಡಬೇಕು.

೫.ಮಳೆಯ ತೀವ್ರತೆ ಹೆಚ್ಚಾಗಿದ್ದರೆ ೩ ನೇ ಬಾರಿ ಬೋರ್ಡೊ ಸಿಂಪಡಣೆ ಮಾಡುವುದು

೬.ಮೇ ಕೊನೆ ವಾರದಲ್ಲಿ ಟ್ರೈಕೋಡರ್ಮ ಹಾಕದಿದ್ದಲ್ಲಿ ಶೇ. ೦.೨ ಕಾಪರ್ ಆಕ್ಸಿಕ್ಲೊರೈಡ್ನಿಂದ ಬುಡ ಭಾಗವನ್ನು ೩-೧೦ ಲೀಟರ್ ದ್ರಾವಣದಿಂದ ನೆನೆಸುವುದು.

14

೭.ರೋಗಗ್ರಸ್ತ ಬಳ್ಳಿಗಳನ್ನು ಆಗಿಂದಾಗ್ಗೆ ಉಪಚರಿಸಬೇಕು. ಉತ್ತಮ ಪರಿಣಾಮ ಕಂಡುಬರದಲ್ಲಿ ಅವುಗಳನ್ನು ಕಿತ್ತು, ಬೇರು/ಬಿದ್ದ ಎಲೆ ಕಾಂಡಗಳನ್ನು ಸುಡಬೇಕು.

೮.ಕಾಳು ಮೆಣಸಿನ ಫಸಲು ಪ್ರತಿ ವರ್ಷ ಪಡೆಯಲು ಕರಿಮುಂಡ ಮತ್ತು ಪನಿಯಾರ್ ತಳಿಗಳನ್ನು ಮಿಶ್ರಣ ನಾಟಿ ಮಾಡುವುದು ಸೂಕ್ತ.

೯.ಕಾಳುಮೆಣಸನ್ನು ಅಂತರ ಬೆಳೆಯಾಗಿ ಬೆಳೆಯುವಾಗ ಹವಾಮಾನಕ್ಕೆ ತಕ್ಕಂತೆ ಕೃಷಿ ಚಟುವಟಿಕೆ ಮಾಡುವುದು ಅಗತ್ಯ.

ಅಗತ್ಯ ಅರಿತು ತಜ್ಞರ ಸಲಹೆ ಮೇರೆಗೆ ಕೀಟ ರೋಗ ನಿಯಂತ್ರಿಸಿ

ಕೊಯ್ಲು: ನವೆಂಬರ್ ಜನವರಿ ಮೈದಾನ ಪ್ರದೇಶ, ಜನವರಿ ಮಾರ್ಚ್ ಗುಡ್ಡಗಾಡು ಪ್ರದೇಶ