ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ತಂಬಾಕಿನಲ್ಲಿ ಬಂಬಾಕು

ಡಾ. ಹೆಚ್. ನಾರಾಯಣಸ್ವಾಮಿ,
9448159375
1

ಬಂಬಾಕು ತಂಬಾಕಿನ ಪರಾವಲಂಬಿ ಸಸ್ಯ. ಎಲೆಗಳ ಸಂಖ್ಯೆ ಕಡಿಮೆಯಾಗುತ್ತೆ. ಪ್ರತಿಶತ ೧೦ ರಿಂದ ೬೦ ರಷ್ಟು ಇಳುವರಿ ಕಡಿಮೆಯಾಗುವುದಲ್ಲದೆ ಗುಣಮಟ್ಟ ಕಡಿಮೆಯಾಗುತ್ತದೆ. ತಂಬಾಕು ನಾಟಿ ಮಾಡಿದ ೨ನೇ ವಾರದಲ್ಲಿ ಬಂಬಾಕಿನ ಬೀಜಗಳು ಮೊಳಕೆ ಒಡೆಯುತ್ತವೆ. ಆಗ ತಂಬಾಕು ಹೊರಸೂಸುವ ರಾಸಾಯನಿಕಗಳು ಬಿಡುಗಡೆಯಾಗುವುದು. ಇದಕ್ಕೆ ಸ್ಪಂದಿಸಿ ಬಂಬಾಕಿನ ಬೀಜಗಳು ಮೊಳೆಯುತ್ತವೆ. ನಂತರ ತಂಬಾಕಿನ ಬೇರುಗಳನ್ನು ಆಶ್ರಯಿಸಿ ನೀರು ಮತ್ತು ಪೋಷಕಾಂಶಗಳನ್ನು ಹೀರಿ ಬೆಳವಣಿಗೆಯಾಗುತ್ತದೆ. ಬಂಬಾಕಿನ ಕಾಂಡಗಳಲ್ಲಿ ಕವಲುಗಳು ಇರುವುದಿಲ್ಲ. ಇದರ ಕಾಂಡ ಸಣ್ಣ ಸಣ್ಣ ಎಲೆಗಳಿಂದ ಕೂಡಿದ್ದು ಸುಮಾರು ೧ ರಿಂದ ೧.೫ ಅಡಿ ಎತ್ತರ ಬೆಳೆಯುವುದು. ಇದರ ಬಣ್ಣ ಕೆಂಪು ಮಿಶ್ರಿತ ಹಳದಿ ಅಥವಾ ಕಂದು ಬಣ್ಣ ಹೊಂದಿರುತ್ತದೆ. ಒಂದು ಗಿಡವು ೧೦-೧೦೦ ಹೂಗಳನ್ನು ಬಿಡುವುದು. ತಂಬಾಕಿನ ಗಿಡದ ಬುಡಭಾಗದಿಂದ ಸುಮಾರು ಅರ್ಧ ಅಡಿಯಿಂದ ಒಂದು ಅಡಿ ದೂರದಲ್ಲಿ ಇದು ಗೋಚರಿಸಬಹುದು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ನಾಗರಾಜು ಎಂಬುವವರರು ೬ ಎಕರೆ ಪ್ರದೇಶದಲ್ಲಿ ತಂಬಾಕು ಬೆಳೆದಿದ್ದರು. ತಂಬಾಕು ಪ್ರಾಯೋಜನೆಯ ವಿಜ್ಞಾನಿಗಳೊಂದಿಗೆ ೨೦೧೬ ಆಗಸ್ಟ್ ತಿಂಗಳಿನಲ್ಲಿ ಭೇಟಿ ಕೊಟ್ಟಾಗ ಶೇ ೫೦ ರಷ್ಟು ಇಳುವರಿ ಕಡಿಮೆಯಾಗಿರುವುದಾಗಿ ನಾವು ಅಂದಾಜು ಮಾಡಿದ್ದೆವು. ಮಳೆ ಕಡಿಮೆ ಇದ್ದಿದ್ದರಿಂದ ಇದರ ಬಾಧೆ ಹೆಚ್ಚು ಎಂದು ಆ ಊರಿನ ತಂಬಾಕು ಬೆಳೆಗಾರರು ನಮ್ಮ ವಿಜ್ಞಾನಿಗಳ ತಂಡಕ್ಕೆ ತಿಳಿಸಿದರು. ಬಂಬಾಕಿನ ಬೀಜಗಳು ೨-೧೩ ವರ್ಷಗಳ ಕಾಲ ಭೂಮಿಯಲ್ಲಿ ಸುಪ್ತಾವಸ್ಥೆಯಲ್ಲಿದ್ದು ತಂಬಾಕು ನಾಟಿ ಮಾಡಿದಾಗ ಮೊಳಕೆಯೊಡೆದು ಬೇರುಗಳನ್ನು ಆಕ್ರಮಣ ಮಾಡುತ್ತವೆ.

ಇದರ ನಿರ್ವಹಣೆ ಹೇಗೆ

  • ತಂಬಾಕು ಕಟಾವಾದ ನಂತರ ಭೂಮಿಯನ್ನು ಉಳುಮೆ ಮಾಡಿ ಬಿಸಿಲಿಗೆ ೩ ತಿಂಗಳ ಕಾಲ ಒಡ್ಡುವುದರಿಂದ ಇದರ ಮೊಳೆಯುವಿಕೆ ಕಡಿಮೆ ಮಾಡಬಹುದು.
  • ಬೀಜ ಬೆಳೆಯುವುದಕ್ಕೆ ಮೊದಲು ಕೈಯಿಂದ ಆಗಿಂದ್ದಾಗ್ಗೆ ತೆಗೆದು ನಾಶಮಾಡುವುದು.
  • 8
  • ಹೈಬ್ರಿಡ್ ಜೋಳ, ಮೆಣಸಿನ ಕಾಯಿ ಮತ್ತು ಎಳ್ಳು ಬೆಳೆ ಪರಿವರ್ತನೆ ಮಾಡುವುದು.
  • ಆಶ್ರಯದಾತ ಬೆಳೆಗಳಾದ ಟೊಮ್ಯಾಟೋ, ಆಲೂಗೆಡ್ಡೆ, ಕುಂಬಳಕಾಯಿ, ಕ್ಯಾರೆಟ್ ಬೆಳೆಗಳನ್ನು ಬಂಬಾಕು ಕಳೆ ಪೀಡಿತ ಜಾಗದಲ್ಲಿ ಬೆಳೆಯುವುದು ಸೂಕ್ತವಲ್ಲ.
  • ಕಳೆನಾಶಕವಾದ ಪೆಂಡಿಮಿಥಲಿನ್ (೧ ಞg ಚಿ i/hಚಿ) ರಾಸಾಯನಿಕವನ್ನು ಪ್ರತಿ ಹೆಕ್ಟೇರಿಗೆ ಮೂರು ಲೀಟರ್ನಂತೆ ತಂಬಾಕು ನಾಟಿ ಮಾಡುವುದಕ್ಕೆ ಐದು ದಿನ ಮುಂಚೆ ದಿಂಡುಗಳ ಮೇಲೆ ಸಿಂಪಡಿಸುವುದು. ಅಥವಾ
  • ಇದಕ್ಕೆ ಬದಲಾಗಿ ಒಂದು ಬಂಬಾಕಿನ ಕಾಂಡಕ್ಕೆ ೨-೩ ಹನಿ ಸೀಮೆ ಎಣ್ಣೆಯನ್ನು ಹಾಕುವುದು. ಆದರೆ ತಂಬಾಕಿನ ಎಲೆಗಳಿಗೆ ತಾಗದಂತೆ ಎಚ್ಚರ ವಹಿಸಬೇಕು. ಅಥವಾ

    ಜೈವಿಕ ನಾಶಕವಾದ ಪ್ಯೂಸೇರಿಯಂ ಸೊಲನಿ ಎಂಬ ಜೀವಾಣುವನ್ನು ನೀರಿನೊಂದಿಗೆ ಮಿಶ್ರಮಾಡಿ ಬಂಬಾಕಿನ ಬುಡಭಾಗಕ್ಕೆ ಹಾಕುವುದು