ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಕಮ್ಯುನಿಸ್ಟ್ ಕಳೆ ಮತ್ತು ಅದರ ಸದ್ಬಳಕೆ

ಮೋಹನ್ ಕುಮಾರ್ ಆರ್
8970884475
1

ಕಮ್ಯುನಿಸ್ಟ್ ಕಳೆಯನ್ನು ವಿಶ್ವದ ಕಳೆಯ ಗುಂಪಿನ ಅನಿಷ್ಠ ಸಸ್ಯವೆಂದು ಕರೆಯಲಾಗುತ್ತಿದ್ದು ಹಲವಾರು ವರ್ಷಗಳ ಸುದೀರ್ಘ ಸಂಶೋಧನೆಯ ನಂತರವೂ ಸಹ ಇದರ ಪರಿಣಾಮಕಾರಿ ನಿರ್ವಹಣೆ ಕಷ್ಟವಾಗಿದೆ. ಕಾರಣಗಳು ಹಲವಾರು, ಅವುಗಳಲ್ಲಿ ಅತಿ ಮುಖ್ಯವಾದುದೆಂದರೆ ಈ ಸಸ್ಯದ ಬೀಜೋತ್ಪದನಾ ಮತ್ತು ಅದರ ಪ್ರಸರಣ ಸಾಮರ್ಥ್ಯ. ಈ ಗಿಡವು ತೇವಾಂಶವಿದ್ದ ಪ್ರದೇಶದಲ್ಲಿ ವರ್ಷವಿಡಿ ಬೆಳೆದು ಲಕ್ಷಾಂತರ ಬೀಜಗಳನ್ನು ಉತ್ಪಾದಿಸುವುದಲ್ಲದೆ ಉತ್ಪಾದಿತ ಬೀಜಗಳ ಮೊಳಕೆಯೊಡೆಯುವ ಸಾಮರ್ಥ್ಯವು ತುಂಬಾ ಅಧಿಕವಾಗಿರುತ್ತದೆ, ಪ್ರಸ್ತುತ ಕಮ್ಯುನಿಸ್ಟ್ ಸಸ್ಯ(ಕಳೆಯ) ಪಾಶ್ಚಾತ್ಯ ರಾಷ್ಟ್ರಗಳಿಂದ ಭಾರತಕ್ಕೆ ಪ್ರವೇಶಿಸಿದ್ದು ಇದರ ಹೊಂದಾಣಿಕೆ ಸಾಮರ್ಥ್ಯದಿಂದಾಗಿ ದೇಶದ ಉದ್ದಗಲಕ್ಕೂ ಹರಡಿ ದೇಶದ ಜೈವಿಕ ಅಸಮತೋಲನದಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂತಹ ಸ್ಥಿತಿಯಲ್ಲಿ ಪೂರ್ಣಪ್ರಮಾಣದ ನಿರ್ವಹಣೆಯು ಸಾಧ್ಯವಾಗದೆಂದು ಮನಗಂಡ ವಿಷಯ. ಅಂತಹ ಸಂದರ್ಭದಲ್ಲಿ ಇದರ ಗರಿಷ್ಠ ಉಪಯೋಗವನ್ನಾದರೂ ಪಡೆದುಕೊಳ್ಳುವುದರ ಜೊತೆಗೆ ಸಾಧ್ಯವಾದಷ್ಟು ಇದನ್ನು ನಿರ್ವಹಣೆ ಮಾಡುವುದು ಎಲ್ಲರ ಜವಾಬ್ದಾರಿ.

ಕಮ್ಯುನಿಸ್ಟ್ ಕಳೆಯಿಂದಾಗುವ ದುಷ್ಪರಿಣಾಮಗಳು

೨.ಈ ಸಸ್ಯವನ್ನು ಸಾಕುಪ್ರಾಣಿಗಳು ತಿನ್ನದಿರುವುದರಿಂದ ಕೃಷಿ ಕ್ಷೇತ್ರಗಳಲ್ಲದೆ ಕೃಷಿಯೇತರ ವಲಯಗಳಲ್ಲೂ ಹರಡಿ ಕೃಷಿ ಮತ್ತು ಕೃಷಿಯೇತರ ವಲಯಗಳನ್ನು ಉಪಯೋಗಕ್ಕೆ ಬಾರದಂತೆ ಮಾರ್ಪಡಿಸಿದೆ.

೩.ಅತ್ಯಧಿಕ ಜೈವಿಕ ರಾಶಿಯ ಉತ್ಪಾದನೆಯಿಂದಾಗಿ ಸಮರ್ಪಕ ನಿರ್ವಹಣೆಯಾಗದ ಸಂದರ್ಭದಲ್ಲಿ ಅತಿ ಹೆಚ್ಚು ಪೋಷಕಾಂಶಗಳನ್ನು ಹೀರಿ ಭೂಮಿಯ ಫಲವತ್ತತೆಯನ್ನು ಕುಗ್ಗಿಸುತ್ತದೆ.

೩.ಅತ್ಯಧಿಕ ಜೈವಿಕ ರಾಶಿಯ ಉತ್ಪಾದನೆಯಿಂದಾಗಿ ಸಮರ್ಪಕ ನಿರ್ವಹಣೆಯಾಗದ ಸಂದರ್ಭದಲ್ಲಿ ಅತಿ ಹೆಚ್ಚು ಪೋಷಕಾಂಶಗಳನ್ನು ಹೀರಿ ಭೂಮಿಯ ಫಲವತ್ತತೆಯನ್ನು ಕುಗ್ಗಿಸುತ್ತದೆ.

೪.ಪ್ರಸ್ತುತ ಕಳೆಯು ಸೂರ್ಯಕಾಂತಿ ಪ್ರಭೇದಕ್ಕೆ ಸೇರಿದ್ದು, ಸೂರ್ಯಕಾಂತಿ ಸೇರಿದಂತೆ ಈ ಪ್ರಭೇಧಕ್ಕೆ ಸೇರಿದ ಇನ್ನಿತರ ಬೆಳೆಗಳಾದ ಕುಸುಬೆ, ಮತ್ತಿತರ ಬೆಳೆಗಳಿಗೆ ಹರಡುವ ರೋಗ ಮತ್ತು ಕೀಟಗಳಿಗೆ ಆಶ್ರಯ ತಾಣವಾಗುತ್ತದೆ.

೫.ಈ ಕಳೆಯು ಶಾರೀರಿಕವಾಗಿ ಹಲವಾರು ವ್ಯತಿರಿಕ್ತ ರಾಸಾಯನಿಕಗಳಿಂದ ಕೂಡಿದ್ದು ಇದರ ನೇರ ಸಂಪರ್ಕದಿಂದಾಗಿ ಮಣ್ಣಿನ ಸೂಕ್ಷ್ಮ ಜೀವಿಗಳ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

೬.ಈ ಕಳೆಯು ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಸರ್ವೇಸಾಮಾನ್ಯವಾಗಿದ್ದು ಸಂಪೂರ್ಣವಾಗಿ ಆವರಿಸಿಕೊಂಡಿ ರುವುದರಿಂದ ದಟ್ಟವಾದ ಹರಡುವಿಕೆಯಿಂದ ಅರಣ್ಯ ಮರ ಪ್ರಭೇದಗಳ ಸ್ವಯಂ ಅಭಿವೃದ್ಧಿಯು ಕುಂಠಿತವಾಗುತ್ತದೆ.

ಸದುಪಯೋಗಗಳು : ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಈ ಕಳೆಯನ್ನು ಉಪಯುಕ್ತ ರೀತಿಯಲ್ಲಿ ಬಳಕೆ ಮಾಡುವುದು ಜಾಣ್ಮೆಯ ವಿಷಯ.ಹೂ ಕಟ್ಟುವ ಮೊದಲು ಹಸಿರೆಲೆ ಗೊಬ್ಬರವಾಗಿ, ಕಾಂಪೋಸ್ಟ್ ತಯಾರಿಕೆಯಲ್ಲಿ, ದನಕರುಗಳ ಕೊಟ್ಟಿಗೆಯಲ್ಲಿ ಗೊಬ್ಬರ ತಯಾರಿಕೆಯ ಪೂರಕ ವಸ್ತುವಾಗಿ ಮತ್ತು ಗಿಡವನ್ನು ಕತ್ತರಿಸಿ ಸಾವಯವ ಹೊದಿಕೆಯಾಗಿ ಉಪಯೋಗಿಸುವುದು.