ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಬಿಳಿ ನೊಣದ ಬಾಧೆಯಿಂದ ಬಳಲುತ್ತಿರುವ ಕಬ್ಬು

ರೂಪಾ ಎಸ್ ಪಾಟೀಲ್,
9448933679
1

ಕಬ್ಬು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಒಂದು ಪ್ರಮುಖ ಕೈಗಾರಿಕಾ ಬೆಳೆ. ಪ್ರಸಕ್ತ ಸುಮಾರು ೫೪೦೦ ಹೆಕ್ಡೇರ್ ಕ್ಷೇತ್ರದಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದ್ದು, ಬೆಳೆ ೬ ರಿಂದ ೮ ತಿಂಗಳ ಅವಧಿಯಲ್ಲಿದೆ. ಕಬ್ಬಿನಲ್ಲಿ ಕಾಂಡ ಮತ್ತು ಸುಳಿ ಕೊರಕಗಳು, ಗೊಣ್ಣೆ ಹುಳು, ಗೆದ್ದಲು, ಬಿಳಿ ಉಣ್ಣೆ ಹೇನು ಪ್ರಮುಖವಾದ ಕೀಟಗಳು ಆದರೆ, ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಬಿಳಿ ನೊಣ ಎಂಬ ಅಪ್ರಧಾನ ಕೀಟವೂ ಕೂಡ ಹಳಿಯಾಳ ತಾಲೂಕಿನ ಕರ್ಲವಾಡ, ಗುಂಡೊಳ್ಳಿ, ಕಾಳಗಿನಕೊಪ್ಪ, ನೀಲವಾಣಿ, ಜನಗಾ ಮತ್ತಿತರ ಗ್ರಾಮಗಳಲ್ಲಿ ಉಲ್ಭಣಗೊಂಡು ಪ್ರಮುಖ ತೊಡಕಾಗಿ ಪರಿಣಮಿಸಿದೆ. ಈ ರಸ ಹೀರುವ ಕೀಟದ ವೈಜ್ಞಾನಿಕ ಹೆಸರು ಅಲಿರೋಲೋಬಸ್ ಬರೋಡೆನ್ಸಿಸ್ ಎಂದು ಹೊಮೋಪ್ಟೆರಾ ಗಣ ಹಾಗೂ ಅಲಿರೋಡಿಡೆ ಕುಟುಂಬಕ್ಕೆ ಸೇರಿದೆ.

3

ಹಾನಿಯ ಲಕ್ಷಣಗಳು : ಈ ಕೀಟದ ಮರಿಹುಳುಗಳು ಎಲೆಯ ಕೆಳಭಾಗದಿಂದ ರಸವನ್ನು ಹೀರುತ್ತವೆ. ಇದರಿಂದ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ. ಬಾಧೆ ತೀವ್ರವಾದಾಗ ಕಂದು ಮಿಶ್ರಿತ ಕೆಂಪು/ನೇರಳೆ ವರ್ಣಕ್ಕೆ ತಿರುಗಿ ಕ್ರಮೇಣ ಒಣಗಿ ಹೋಗುತ್ತದೆ. ಬಾಧೆ ಹೆಚ್ಚಾದಾಗ ಎಲೆಗಳ ಮೇಲೆ ಕಪ್ಪು ಬೂಸ್ಟು ಬೆಳೆಯುತ್ತದೆ. ಇದು ಕಬ್ಬಿನಲ್ಲಿ ಸಕ್ಕರೆ ಪ್ರಮಾಣ ಮತ್ತು ಕಬ್ಬಿನ ಇಳುವರಿ ಮೇಲೆ ನೇರ ಪರಿಣಾಮ ಬೀರುತ್ತದೆ.

ನಿರ್ವಹಣಾ ಕ್ರಮಗಳು:

  • ಅತೀ ಹೆಚ್ಚಿನ ಪ್ರಮಾಣದಲ್ಲಿಬಾಧಿತ ಎಲೆ ಗಳನ್ನು ಸಾಧ್ಯವಾದರೆ ಕಿತ್ತು ನಾಶ ಮಾಡಬೇಕು.
  • 7
  • ಬೆಳೆ ಹಂತಕ್ಕನುಗುಣವಾಗಿ ಯುರಿಯಾ ಮೇಲು ಗೊಬ್ಬರವನ್ನು ಕೊಟ್ಟು ನೀರು ಹಾಯಿಸಬೇಕು. (೨೦ ಕೆಜಿ ಪ್ರತಿ ಎಕರೆಗೆ)
  • 9

    ೧.೫ ಮಿಲಿ ಟ್ರೈಅಜೋಫಾಸ್ ಅಥವಾ ೦.೩ ಮಿ.ಲೀ. ಇಮಿಡಾ ಕ್ಲೋಪ್ರಿಡ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಶೇ. ೨ ರ ಯೂರಿಯ ದ್ರಾವಣದೊಂದಿಗೆ ಸಿಂಪಡಿಸ ಬೇಕು. ಸಿಂಪರಣೆ ಸಾಧ್ಯವಾಗದಿದ್ದಲ್ಲಿ ಫೋರೇಟ್ ೧೦ ಜಿ ಯನ್ನು ಪ್ರತಿ ಎಕರೆಗೆ ೫ ಕೆಜಿಯಂತೆ ಹಸಿ ಮರಳಿನೊಟ್ಟಿಗೆ ಎರಚಬೇಕು.