ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಸಂರಕ್ಷಿತ ವಾತಾವರಣದಲ್ಲಿ ಆಂಥೂರಿಯಂ ಬೇಸಾಯ

ಸೀಮಂತಿನಿ ಎನ್. ಎಸ್,
08263-228022
1

ಗ್ರೇಡಿಂಗ್: ಗ್ರೇಡಿಂಗ್ ಮಾಡುವ ಮೊದಲು ಯಾವುದೇ ತರನಾದ ಕಲೆ ಹೊಂದಿದ, ವಿಕಾರವಾದ ಹೂಗಳನ್ನು ತೆಗೆದುಹಾಕಬೇಕು. ಹೂಗಳು ಅಂದವಾಗಿದ್ದು ಹೊಳೆಯುತ್ತಿರಬೇಕು (ಕೋಷ್ಟಕ )

ಕೋಷ್ಟಕ ೧ ಶ್ರೇಣಿ -ಆಂಥೂರಿಯಂನಲ್ಲಿ ಶ್ರೇಣಿಕರಣ ಹೊಂಬಾಳೆಯ ಗಾತ್ರ (ಉದ್ದ+ ಅಗಲ)/೨,ಎಕ್ಸಟ್ರಾ ಲಾರ್ಜ್-೧೫ ಸೆ.ಮೀ. ಗೂ ಹೆಚ್ಚು ,ಲಾರ್ಜ್-೧೨.೫-೧೫.೦ ಸೆ.ಮೀ,ಮೀಡಿಯಮ್-೧೦-೧೨.೫ ಸೆ.ಮೀ,ಸ್ಮಾಲ್-೭.೫-೧೦ ಸೆ.ಮೀ,ಮಿನಿ-೭.೫ ಸೆ.ಮೀ. ಗಿಂತ ಕಡಿಮೆ

ಉಪಚಾರ: ಮಾರುಕಟ್ಟೆಗೆ ಕಳುಹಿಸುವ ಮೊದಲು ಕಟಾವು ಮಾಡಿದ ೧೨ ತಾಸುಗಳ ಒಳಗೆ ಸಿಲ್ವರ್ ನೈಟ್ರೇಟ್ (೧೦೦೦ ಪಿಪಿಎಮ್) ನಲ್ಲಿ ೧೦ ರಿಂದ ೬೦ ನಿಮಿಷ ಪಲ್ಸಿಂಗ್ ಉಪಚಾರಕ್ಕೊಳಪಡಿಸಿದರೆ ಹೂಗಳ ಬಾಳಿಕೆ ಶೇ. ೫೦ ರಷ್ಟು ಹೆಚ್ಚಾಗುತ್ತದೆ

ಪ್ಯಾಕಿಂಗ್: ಹತ್ತಿಯನ್ನು ನೀರಿನಲ್ಲಿ ನೆನೆಯಿಸಿ ದಂಟಿನ ತುದಿಗೆ ಕಟ್ಟಲಾಗುತ್ತದೆ. ನಂತರ ಹೂಗಳನ್ನು ರಂಧ್ರವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿ, ೧೦೨ x ೪೩ x ೨೯ ಸೆ.ಮೀ. ಅಳತೆಯ ಸಿ.ಎಫ್.ಬಿ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಇರಿಸುತ್ತಾರೆ. ಈ ಅಳತೆಯ ಪೆಟ್ಟಿಗೆಯಲ್ಲಿ ೭೦ ರಿಂದ ೧೦೦ ಹೂಗಳನ್ನು ಇರಿಸಬಹುದು

ಸಂಗ್ರಹಣೆ: ೧೩೦ ಸೆ. ಉಷ್ಣಾಂಶದಲ್ಲಿ ೩ ರಿಂದ ೫ ರವರೆಗೂ ಹೂಗಳನ್ನು ಕೆಡದಂತೆ ಇಡಬಹುದು. ಉಷ್ಣ ಇದಕ್ಕಿಂತ ಕಡಿಮೆ ಆದಲ್ಲಿ ಶೀತಗಾಯ ಆಗುತ್ತದೆ. ಸಂಗ್ರಹಣ ಅವಧಿ ಹೆಚ್ಚುವಂತೆ ಮಾಡಲು ಸೂಕ್ತ ಸಾಮರ್ಥ್ಯದ ಬೆಂಜಿಲ್ ಅಡನ್ಯೆನ್(೫೦ ಪಿಪಿಎಮ್ ದ್ರಾವಣದಲ್ಲಿ ೧೨ ತಾಸುಗಳಷ್ಟು ಸಮಯದವರೆಗೂ ಹೂಗಳನ್ನಿಟ್ಟು ಉಪಚರಿಸಿದಲ್ಲಿ ಅವುಗಳ ಸಂಗ್ರಹಣ ಗುಣ ಧೀರ್ಘಗೊಳ್ಳುತ್ತದೆ

ಮಾರಾಟ: ವಿದೇಶಗಳಿಗೆ ರಫ್ತು ಮಾಡುವುದಿದ್ದರೆ ಯುರೋಪ್, ಜಪಾನ್ ಮತ್ತು ಅಮೆರಿಕಾ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವಂತಹವು. ಅವುಗಳ ಬೆಲೆ ಗಾತ್ರ, ಗುಣಮಟ್ಟ ಹಾಗೂ ಬೇಡಿಕೆಯನ್ನು ಅನುಸರಿಸಿ ವ್ಯತ್ಯಾಸಗೊಳ್ಳುತ್ತದೆ. ನಮ್ಮಲ್ಲಿ ಒಂದು ಹೂವಿನ ಬೆಲೆ ಕನಿಷ್ಠ ೫ ರೂ. ಗಳಿಂದ ೨೦ ರೂ. ಗಳಷ್ಟು ಇರುತ್ತದೆ

ಬೇಸಾಯದ ಆರ್ಥಿಕತೆ ಮತ್ತು ಲಾಭ: ೫೬೦.ಚ.ಮೀ.ಗೆ/೧ ವರುಷಕ್ಕೆ (ಹಸಿರುಮನೆಯಲ್ಲಿ)

ವಿವರಗಳು/ಖರ್ಚು(ರೂ.ಗಳು)

ಬೇಸಾಯದ ಖರ್ಚು-೧,೬೦,೬೭೦.೭, ಹೂಗಳ ಇಳುವರಿ-೭೫,೬೦೦ (೧೩೫ಹೂಗಳು/೧ ಚ.ಮೀ./೧ ವರ್ಷಕ್ಕೆ), ಒಟ್ಟು ಹೂಗಳ ಆದಾಯ-೭,೫೬,೦೦೦ (೧೦ ರೂ./ಹೂವಿಗೆ), ಲಾಭ (ರೂ.)-೫,೯೫,೩೩೦, ಬಿ.ಸಿ ಅನುಪಾತ -೧:೩.೭

ಹೆಚ್ಚಿನ ಮಾಹಿತಿಗಾಗಿ: ತೋಟಗಾರಿಕೆ ಇಲಾಖೆ, ಶಿವಮೊಗ್ಗ ( ೦೮೧೮೨೨-೬೭೦೧೧), ತೋಟಗಾರಿಕೆ ಕಾಲೇಜು, ಮೂಡಿಗೆರೆ (೦೮೨೬೩-೨೨೮೧೫೨), ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಬೆಂಗಳೂರು (೦೮೯೮೫೧-೪೪೪೨೪)