ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಮೌಲ್ಯವರ್ಧನೆ

ಹಲಸಿನ ಬೀಜದ ಕಟ್ಲೆಟ್

ಡಾ.ಅಕ್ಕಮಹಾಧೇವಿ ಡಿ ಅಗಸಿಮನಿ
9448933679
1

ಬೇಕಾದ ಸಾಮಗ್ರಿಗಳು: ಬೇಯಿಸಿದ ಹಲಸಿನ ಬೀಜ -೧ ಲೋಟ, ಬೇಯಿಸಿದ ಆಲೂಗೆಡ್ಡೆ ೧ ಲೋಟ, ಹಸಿಮೆಣಸಿನಕಾಯಿ ೧ ರಿಂದ ೨, (ಸಣ್ಣಗೆ ಕತ್ತರಿಸಿದ್ದು) ಕೊತ್ತಂಬರಿ,ಕರಿಬೇವು ೪, ಕಸ್ತೂರಿ ಮೆಂತೆ ೨ ಟೀ ಚಮಚ, ಜೀರಿಗೆ ಪುಡಿ ೧/೪ ಚಮಚ, ದನಿಯಾ ಪುಡಿ -೧/೪ ಚಮಚ, ಅರಿಶಿಣ -ಒಂದು ಚಿಟಿಕೆ, ಗರಂ ಮಸಾಲಾ - ೧/೪ ಚಮಚ, ಅಚ್ಚ ಖಾರದ ಪುಡಿ ೧/೪ ಚಮಚ,ಉಪ್ಪುರುಚಿಗೆ ತಕ್ಕಷ್ಟು,ಶುಂಠಿ ತುರಿ(ಸ್ವಲ್ಪ), ಬೆಳ್ಳುಳ್ಳಿ (೫-೬ ಎಸಳು ಸಣ್ಣಗೆ ಕತ್ತರಿಸಿದ್ದು), ಬ್ರೆಡ್ ಕ್ರಮ್ಸ್

ಮಾಡುವ ವಿಧಾನ : ಹಲಸಿನ ಬೀಜದ ಪೇಸ್ಟಿಗೆ ಬೇಯಿಸಿದ ಆಲೂಗೆಡ್ಡೆಯ ತುರಿಯನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಬೇಕು. ಒಂದು ಬಾಣಲೆಯಲ್ಲಿ ೨ ಟೀ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಹಸಿಮೆಣಸಿನಕಾಯಿ, ಕರಿಬೇವು, ಶುಂಠಿ ತುರಿ, ಬೆಳ್ಳುಳ್ಳಿ, ಕಸೂರಿ ಮೆಂತೆ, ಅಚ್ಚ ಖಾರದ ಪುಡಿ, ಅರಿಶಿಣ, ಉಪ್ಪು ಹಾಕಿ ಒಗ್ಗರಣೆ ಮಾಡಿ ಬೀಜದ ಪೇಸ್ಟ್ ಮತ್ತು ಆಲೂ ಮಿಶ್ರಣವನ್ನು ಹಾಕಿ ಸ್ವಲ್ಪ ಹೊತ್ತು (೨-೩ ನಿಮಿಷ) ಬಾಡಿಸಿ ತೆಗೆದು ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕೃತಿಯನ್ನು ಮಾಡಿ ಬ್ರೆಡ್ ಕ್ರಮ್ಸ್ ಪುಡಿಯಲ್ಲಿ ಅದ್ದಿ, ಬಾಣಲೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಬೇಕು.