ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ವಾನೌಷಧಿ

ಕಚೋರ

1

ಕಹಿರಸವುಳ್ಳದ್ದಾಗಿ, ಉಷ್ಣವೀರ್ಯವುಳ್ಳ ಕಚೋರವು ವಿಪಾಕದಲ್ಲಿ ಲಘುವೂ, ತೀಕ್ಷ್ಣವೂ ಆಗಿರುತ್ತದೆ. ಇದು ಪಾಚಕವೂ, ರುಚಿಕಾರಕವೂ, ಹೃದಯಕ್ಕೆ ಶಕ್ತಿ ನೀಡುವಂತಹುದೂ ಆಗಿದ್ದು ಮುಖಕ್ಕೆ ಕಾಂತಿಯನ್ನುಂಟು ಮಾಡಿಸುತ್ತದೆ. ಇದರಿಂದ ಕಫ, ವಾತ ಪ್ಲೀಹ, ಗುಲ್ಮ ಮೂಲವ್ಯಾಧಿ ಕುಷ್ಠ, ಕಾಸಶ್ವಾಸ, ಕ್ರಿಮಿರೋಗ, ಬಿಕ್ಕಳಿಕೆ, ವಾತಜ್ವರ, ಅಜೀರ್ಣ, ಅಪಸ್ಮಾರ, ಗಂಡಮಾಲೆ, ಗಲಗಂಡ ಮೊದಲಾದವುಗಳು ನಿವಾರಣೆಯಾಗುತ್ತವೆ. ಇದನ್ನು ಶುಂಠಿ, ಹಿಪ್ಪಲಿ, ಮೆಣಸು, ತುಪ್ಪ ಅಥವಾ ನೀರಿನಲ್ಲಿ ೧೦ರಿಂದ ೧೫ ಗುಂಜಿಯವರೆಗೆ ಕೊಡುವ ಕ್ರಮವಿದೆ.

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ಕಚೋರ/ಕರ್ಚೂರ್,ವೇಧಮುಖ್ಯ/ಕಚೂರ್/ -/ಗಂಠಲಾ ಕಚೋರಮು

-/ಕಲ್ಪಕ, ಶಟೀ/ಕಾಲೀಹಲ್ದಿ/-/ಕಚೋರಾಲು/Curcuma Zedoaria