ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಔಷಧಿ ಸಸ್ಯಗಳು

ಅಮೃತಬಳ್ಳಿ

image_
ಡಾ. ಯಶಸ್ವಿನಿ ಶಮ್ೆ
9535228694
1

ವೈಜ್ಞಾನಿಕವಾಗಿ ಟಿನೋಸ್ಪೋರಾ ಕಾರ್ಡಿಫೋಲಿಯಾ’ಎಂದು ಕರೆಯಲ್ಪಡುವ ಅಮೃತಬಳ್ಳಿಯು ಮೆನಿಸ್ಪರ್ಮೇಸಿ’ ಕುಟುಂಬ ವರ್ಗಕ್ಕೆ ಸೇರಿದೆ. ಸಂಸ್ಕೃತದಲ್ಲಿ ಗುಡುಚಿ, ಮಧುಪರ್ಣಿ, ಹಿಂದಿಯಲ್ಲಿ ’ಗಿಲೋಯ್ ಎಂದು ಕರೆಯಲ್ಪಡುವ ಇದು ಬಹುವಾರ್ಷಿಕ ಬಳ್ಳಿ ಯಾಗಿದ್ದು, ಪಶ್ಚಿಮಘಟ್ಟದ ಕಾಡುಗಳಲ್ಲಿ ದೊಡ್ಡ ಮರದ ಮೇಲೆ ಹಬ್ಬಿಕೊಂಡು ಬೆಳೆಯುತ್ತದೆ. ಅತೀ ಶೀಘ್ರದಲ್ಲಿ ಬೆಳೆಯುವ ಇದು ಹೃದಯದಾಕಾರದ ಎಲೆಯನ್ನು ಹೊಂದಿರುತ್ತದೆ. ಬಳ್ಳಿ ಅಥವಾ ಕಾಂಡವು ಟಿನೋಸ್ಪೊರಿನ್, ಟಿನೋಸ್ಪೋರೈಡ್, ’ಕಾರ್ಡಿಫಾಲ್ ಇತ್ಯಾದಿ ಸಸ್ಯಕ್ಷಾರಗಳನ್ನು ಹೊಂದಿದ್ದು ಕಹಿಯಾಗಿರುತ್ತದೆ

 • ನಿತ್ಯವೂ ಅಮೃತ ಬಳ್ಳಿಯ ಕಷಾಯ ಸೇವನೆಯಿಂದ ಮಧುಮೇಹ ಹತೋಟಿಗೆ ಬರುತ್ತದೆ.
 • ತಾಜಾ ಬಳ್ಳಿಯನ್ನು ಅಥವಾ ಕಾಂಡವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ, ಜಜ್ಜಿ ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಜ್ವರಕ್ಕೆ ರಾಮಬಾಣ.
 • ಇದರ ಕಷಾಯವನ್ನು ಹಾಲು ಸಕ್ಕರೆಯೊಂದಿಗೆ ಸೇವಿಸುವುದರಿಂದ, ದೇಹದುರ್ಬಲತೆಯನ್ನು ನಿವಾರಿಸಿ, ದೇಹಕ್ಕೆ ಶಕ್ತಿ ಕೊಡುವ ಟಾನಿಕ್ನಂತೆ ಕೆಲಸ ಮಾಡುತ್ತದೆ.
 • ಚಿಕನ್ಗುನ್ಯಾ ರೋಗದ ಚಿಕಿತ್ಸೆಯಲ್ಲಿಯೂ ಉಪಯೋಗಿಸುತ್ತಾರೆ.
 • ಸಾಮಾನ್ಯವಾಗಿ ನೆಗಡಿ, ಕೆಮ್ಮು, ಕಫಕ್ಕೆ ಅಮೃತಬಳ್ಳಿ ದಿವ್ಯೌಷಧಿ.

  8

  ಮಾರುಕಟ್ಟೆಯಲ್ಲಿ ಸಿಗುವ ಗುಡುಚಿ ಚೂರ್ಣ, ಗುಡುಚ್ಯಾದಿ ಕ್ವಾತ, ಅಮೃತಾರಿಷ್ವ, ಗುಡುಚಿ ತೈಲ, ಸಂಜೀವಿನಿ ವಟಿ ಇತ್ಯಾದಿ ಉತ್ಪನ್ನಗಳಲ್ಲಿ ಅಮೃತಬಳ್ಳಿ ಬಹುಮುಖ್ಯ ಅಂಶವಾಗಿದೆ.

  ಇದು ಬಹಳ ಗಡುಸು ಬಳ್ಳಿಯಾಗಿದ್ದು ಎಲ್ಲ ಮಣ್ಣಿನಲ್ಲಿಯೂ, ಎಲ್ಲಾ ವಾತಾವರಣದಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಬಳ್ಳಿಯ ತುಂಡುಗಳಿಂದ ಇದನ್ನು ಸುಲಭವಾಗಿ ವಂಶಾಭಿವೃದ್ಧಿ ಮಾಡಬಹುದು. ಪ್ಲಾಸ್ಟಿಕ್ ಕವರ್ನಲ್ಲಿ ೧೫ರಿಂದ ೨೦ ಸೆಂ.ಮೀ. ಉದ್ದದ ಕಾಂಡದ ತುಂಡುಗಳನ್ನು ನೆಟ್ಟು, ೪೫ ದಿನಗಳ ನಂತರ ಬೇರು ಬಿಟ್ಟಿರುವ ಸಸಿಗಳನ್ನು ೧ ಮೀ. x ೧ ಮೀ. ಅಂತರದಲ್ಲಿ ನಾಟಿ ಮಾಡಬಹುದು. ಬೇವಿನ ಮರ ಅಥವಾ ಯಾವುದೇ ಬಹುವಾರ್ಷಿಕ ಮರಕ್ಕೆ ಇದನ್ನು ಹಬ್ಬಿಸಬಹುದು. ನಾಟಿ ಮಾಡಿದ ಆರು ತಿಂಗಳಿಗೆ ಕಾಂಡವು ಕೊಯ್ಲಿಗೆ ತಯಾರಾಗುತ್ತದೆ. ಬಳ್ಳಿಯು ೨ ರಿಂದ ೩ ಸೆಂ.ಮೀ. ದಪ್ಪವಾದಾಗ ನೆಲದಿಂದ ೨ ಅಡಿ ಕಾಂಡವನ್ನು ವಂಶಾಭಿವೃದ್ಧಿಗೆ ಬಿಟ್ಟು, ಉಳಿದ ಭಾಗವನ್ನು ಕೊಯ್ಲು ಮಾಡಬಹುದು. ಹಾಗೆಯೇ ಬಿಟ್ಟರೆ ಬಳ್ಳಿ ಬೆಳೆಯುತ್ತಾ ಹೋಗುತ್ತದೆ. ಬೇಡಿಕೆ ಬಂದಾಗ ಕಟಾವು ಮಾಡಬಹುದು. ನಂತರ ಪ್ರತಿ ೬ ತಿಂಗಳಿಗೊಮ್ಮೆ ಕಟಾವು ಮಾಡಬಹುದು

  ಪ್ರತಿ ಹೆಕ್ಟೇರಿಗೆ ೧೫ರಿಂದ ೨೦ ಟನ್ ಕಾಂಡವನ್ನು ಇಳುವರಿ ಪಡೆಯಬಹುದು. ಇದರ ಕಾಂಡವನ್ನು ಬಹುಮುಖ್ಯವಾಗಿ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಆದ್ದರಿಂದ ಇದನ್ನು ಹೆಚ್ಚಾಗಿ ಕಾಡಿನಿಂದಲೇ ಸಂಗ್ರಹಿಸುತ್ತಾರೆ ಹಾಗೂ ಇದನ್ನು ಬಹು ಸುಲಭವಾಗಿ ಬೆಳೆಯಲೂಬಹುದು. ಆರ್ದ್ರತೆ ಹೆಚ್ಚಾಗಿರುವ ಪ್ರದೇಶದಲ್ಲಿ ಇದರ ಬಳ್ಳಿಯನ್ನು ಹಾಗೇ ನೆಲದ ಮೇಲಿಟ್ಟರೂ ಬಿಳಲು ಹಾಗೂ ಬೇರು ಬಿಟ್ಟುಕೊಂಡು ತಾನಾಗೇ ಬೆಳೆಯುತ್ತದೆ.