ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಬೀನ್ಸ್ ತುಕ್ಕು ರೋಗ

image_
ಜಯಲಕ್ಷ್ಮಿ ಕೆ
೯೭೪೧೮೪೭೨೨೩

ಬೀನ್ಸ್ ಇದೊಂದು ದ್ವಿದಳ ಧಾನ್ಯ ಸಸ್ಯಕುಟುಂಬದ ಮುಖ್ಯವಾದ ಅಲ್ಪಾವಧಿ ತರಕಾರಿ ಬೆಳೆಯಾಗಿದ್ದು ಹಲವಾರು ರೋಗಗಳಿಗೆ ತುತ್ತಾಗುತ್ತಿದೆ. ಅವುಗಳಲ್ಲಿ ತುಕ್ಕು ರೋಗವು ಯೂರೋಮೈಸಿಸ್ ಫ್ಯಾಸಿಯೋಲಿ ಎಂಬ ಶಿಲೀಂಧ್ರದಿಂದ ಉಂಟಾಗುವ ರೋಗವಾಗಿದ್ದು, ಇದರ ಇಳುವರಿಯಲ್ಲಿ ಹೆಚ್ಚಿನ ನಷ್ಟವನ್ನುಂಟು ಮಾಡುತ್ತದೆ. ಈ ಶಿಲೀಂಧ್ರದ ಬೀಜಾಣುಗಳು ಗಾಳಿಯ ಮುಖಾಂತರ ಹರಡುತ್ತದೆ. ಹಾನಿಗೊಳಗಾದ ಎಲೆಯ ಕೆಳಭಾಗದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣದ ಗುಳ್ಳೆಗಳ ರೂಪದಲ್ಲಿ ರೋಗದ ಲಕ್ಷಣಗಳು ಕಂಡು ಬಂದು, ಎಲೆಯ ಎಲ್ಲಾ ಭಾಗಗಳಿಗೂ ಆವರಿಸಿ ತೀವ್ರ ಬಾಧೆಯ ಸಂದರ್ಭದಲ್ಲಿ ಬೆಳೆ ಸುಟ್ಟಂತೆ ಆಗುವುದು. ಹಾಗೂ ಎಲೆಯ ಮೇಲ್ಭಾಗದಲ್ಲಿ ಹಳದಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ

ಈ ರೋಗ ಕಂಡುಬಂದಲ್ಲಿ ೨ ಗ್ರಾಂ ಜೈನೆಬ್ ಅಥವಾ ಮ್ಯಾಂಕೋಜೆಬ್ ಅಥವಾ ೧ ಮಿ.ಲೀ. ಪ್ರೋಪಿಕೊನಾಜೋಲ್ ಅಥವಾ ಹೆಕ್ಸಾಕೊನಾಜೋಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ೧೫ ದಿನಕ್ಕೊಮ್ಮೆ ಮೂರು ಸಲ ಸಿಂಪಡಿಸಬೇಕು