ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಬಾಲವನ

ಖರಬೂಜ

image_
ಶಶಿಕಲಾ ಎಸ್.ಜಿ
9945082141
1

ಜಪಾನ್ ದೇಶದಲ್ಲಿ ಖರಬೂಜ ಹಣ್ಣನ್ನು ದುಬಾರಿ ಉಡುಗೊರೆಯಾಗಿ ನೀಡಲಾಗುತ್ತದೆ ಮತ್ತು ಪೆಟ್ಟಿಗೆಗಳಲ್ಲಿ ವಿವಿಧ ಆಕಾರಗಳಲ್ಲಿ ಹಣ್ಣುಗಳನ್ನು ಸಹ ಬೆಳೆಸುತ್ತಾರೆ. ಬೇಸಿಗೆಯ ಹಣ್ಣು ಖರಬೂಜ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಅನೇಕ ಒಳ್ಳೆಯ ಪರಿಣಾಮಗಳಾಗುತ್ತವೆ. ಸಾಕಷ್ಟು ಔಷಧೀಯ ಗುಣಗಳನ್ನು ಈ ಹಣ್ಣು ಹೊಂದಿದೆ. ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಖರಬೂಜ ಹಣ್ಣು ವರದಾನವಾಗಿದೆ. ವಿಟಮಿನ್ ಎ ಮತ್ತು ಸಿ ಯನ್ನು ಅಧಿಕವಾಗಿ ಹೊಂದಿರುವುದರಿಂದ ಈ ಹಣ್ಣು ತಿನ್ನುವುದರಿಂದ ಹೊಳೆಯುವ ಚರ್ಮ ಹೊಂದಬಹುದು. ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ಈ ಹಣ್ಣು ತಿನ್ನುವುದರಿಂದ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಏಕೆಂದರೆ ಖರಬೂಜ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದೆ. ನಮ್ಮ ದೇಹದಲ್ಲಿನ ಕಲ್ಮಷಗಳನ್ನು ಹೊರಹಾಕಿ ಈ ಹಣ್ಣು ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಡೆಗಟ್ಟುತ್ತದೆ. ಗರ್ಭಿಣಿ ಸ್ತ್ರೀಯರು ಖರಬೂಜ ಹಣ್ಣು ತಿನ್ನುವುದರಿಂದ ಭ್ರೂಣದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯದ ಆರೋಗ್ಯ, ಕಣ್ಣಿನ ಆರೋಗ್ಯಕ್ಕೆ ಸಹ ಖರಬೂಜ ಹಣ್ಣು ಸೇವನೆ ಉತ್ತಮ. ಕರಬೂಜ ಹಣ್ಣಿನ ಬೀಜದಲ್ಲಿ ಸಹ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿವೆ