ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಚಿತ್ರ ಲೇಖನ

ನಿಂಬೆಯ ಚಿಟ್ಟೆ (Citrus Butterfly)

image_
ಡಾ.ಎಸ್.ಟಿ. ಪ್ರಭು
೯೪೪೮೧೮೨೨೨೫
1

ಹೆಸರೇ ಹೇಳುವಂತೆ ಈ ಕೀಟ ಒಂದು ಆಕರ್ಷಕ ಚಿಟ್ಟೆಯಾಗಿದ್ದು (ಪಾತರಗಿತ್ತಿ) ನಿಂಬೆ ಜಾತಿಗೆ ಸೇರಿದ ನಿಂಬೆ, ಕಿತ್ತಳೆ, ಮೋಸಂಬಿ ಮುಂತಾದ ಬೆಳೆಗಳನ್ನು ಆಶ್ರಯಿಸಿ ರೈತರಿಗೆ ನಷ್ಟವನ್ನುಂಟು ಮಾಡುತ್ತದೆ. ಈ ಕೀಟವು ಮುಖ್ಯವಾಗಿ ನಿಂಬೆ ಬೆಳೆಯ ಸಸಿ ಹಂತದಲ್ಲಿ ಬಹಳ ಹಾನಿಕಾರಕವಾಗಿರುತ್ತದೆ. ಪ್ಯಾಪಿಲಿಯೋ ಡಿಮೋಲಿಯಸ್ (Pಚಿಠಿiಟio ಜemoಟeus) ಎಂಬ ವೈಜ್ಞಾನಿಕ ಹೆಸರಿನ ಈ ಚಿಟ್ಟೆಯು ನೋಡಲು ತುಂಬಾ ಆಕರ್ಷಕವಾಗಿದ್ದು ೫ ರಿಂದ ೬ ಸೆಂ.ಮೀ. ಉದ್ದದ ರೆಕ್ಕೆಗಳಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಆಕೃತಿಗಳನ್ನು ಹೊಂದಿರುತ್ತವೆ. ಹಿಂಭಾಗದ ರೆಕ್ಕೆಗಳ ಮೇಲೆ ಕೆಂಪು ಬಣ್ಣದ ಎರಡು ಚುಕ್ಕೆಗಳನ್ನು ಕಾಣಬಹುದು. ನಿಂಬೆ ಚಿಟ್ಟೆಯು ಕರಿಬೇವಿನ ಗಿಡಗಳನ್ನು ಸಹ ಹಾನಿ ಮಾಡುವುದರಿಂದ ಈ ಕೆಳಗೆ ವಿವರಿಸಿದ ಹಾನಿಯ ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳು ಕರಿಬೇವು ಬೆಳೆಗೂ ಸಹ ಅನ್ವಯಿಸುವುದು

34

ಹಾನಿಯ ಲಕ್ಷಣಗಳು ಪ್ರೌಢ ಚಿಟ್ಟೆಗಳು ಬೆಳೆಯನ್ನು ಹಾನಿ ಮಾಡುವುದಿಲ್ಲ. ತಾಯಿ ಚಿಟ್ಟೆಯು ನಿಂಬೆ ಗಿಡದ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಎಲೆಗಳ ಮೇಲೆಯೇ ಇದ್ದು ಕಪ್ಪಾದ ಕಂದು ಬಣ್ಣದಿಂದ ಕೂಡಿರುತ್ತವೆ. ದೇಹದ ಮೇಲೆ ವಿವಿಧ ವೃತ್ತಾಕಾರದ ಬಿಳಿ ಬಣ್ಣದ ಗುರುತುಗಳು ಇರುತ್ತವೆ. ಇವು ನೋಡಿದ ತಕ್ಷಣ ಯಾವುದೋ ಪಕ್ಷಿಯ ಹಿಕ್ಕೆ (ಮಲ) ತರಹ ಕಾಣುತ್ತವೆ. ಈ ಮರಿಹುಳುಗಳು ಎಳೆಯ ಎಳೆಗಳನ್ನು ಸಂಪೂರ್ಣ ತಿಂದು ಮಧ್ಯದ ದೇಟನ್ನು ಮಾತ್ರ ಉಳಿಸುತ್ತವೆ. ಮರಿಹುಳುಗಳು ಬೆಳೆದಂತೆಲ್ಲಾ ದೇಹದ ಬಣ್ಣವು ಬದಲಾಗುತ್ತಾ ಬಲಿತ ಮರಿಹುಳುಗಳು ಕಡು ಹಸಿರಿನಿಂದ ಕೂಡಿರುತ್ತವೆ. ಇವು ೪ ರಿಂದ ೫ ಸೆಂ.ಮೀ. ಉದ್ದವಿರುತ್ತವೆ. ಈ ಮರಿಹುಳುಗಳಿಗೆ ಶತ್ರುವಿನ ಆತಂಕ ಬಂದಾಗ (ಅಥವಾ ತೊಂದರೆಪಡಿಸಿದಾಗ) ಶತ್ರುಗಳನ್ನು ಓಡಿಸಲು ತಮ್ಮ ಬೆನ್ನಿನ ಮೇಲೆ ಎರಡು ಕೋಡಿನಾಕಾರದ ಕೊಂಬುಗಳನ್ನು ಹೊರಹಾಕಿ ಕೆಟ್ಟ ವಾಸನೆ ಬೀರುತ್ತವೆ

6

ನಿರ್ವಹಣಾ ಕ್ರಮಗಳು: ನಿಂಬೆ ತೋಟ ಸಣ್ಣದಿದ್ದಲ್ಲಿ ಮರಿಹುಳುಗಳನ್ನು ಗುರುತಿಸಿ ಕೈಯಿಂದ ಆರಿಸಿ ತೆಗೆದು ನಾಶಮಾಡಬೇಕು. ಗಿಡದಲ್ಲಿ ಹೊಸ ಎಲೆಗಳು ಬಂದಾಗ ೪ ಗ್ರಾಂ ಕಾರ್ಬರಿಲ್ ೫೦ ಡಬ್ಲ್ಯೂ.ಪಿ. ಅಥವಾ ೧ ಮಿ.ಲೀ., ಬಿ.ಟಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಈ ಕೀಟ ಬಾಧೆಯನ್ನು ತಡೆಗಟ್ಟಬಹುದು. ಶೇ. ೫ರ ಬೇವಿನ ಬೀಜದ ಕಷಾಯ ಅಥವಾ ೦.೫ ಮಿ.ಲೀ. ಸೈಫರ್ಮೆಥ್ರಿನ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.