ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಕೃಷಿ ಮತ್ತು GST (ಸರಕು ಸೇವೆ)

ಡಾ. ಕಿರಣ್ ಕುಮಾರ್ ಆರ್. ಪಾಟೀಲ್
9482207140
1

ಒಂದು ದೇಶ, ಒಂದು ಮಾರುಕಟ್ಟೆ, ಒಂದು ತೆರಿಗೆ ವ್ಯವಸ್ಥೆಯು ನಮ್ಮ ದೇಶದಲ್ಲಿ ಜಾರಿಗೆ ಬಂದಿದೆ. ಇದೊಂದು ಪರೋಕ್ಷ ತೆರಿಗೆಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ. ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದ ಕೇಂದ್ರದ ಅಬಕಾರಿ ಸುಂಕ, ಸೀಮಾ ಸುಂಕ, ಸೇವಾ ತೆರಿಗೆ ಹಾಗೂ ಇತರೆ ಉಪಕರಗಳು (ಸೆಸ್+ಸರ್ಚಾರ್ಜು) ಹಾಗೂ ರಾಜ್ಯಗಳ ಮೌಲ್ಯವರ್ಧಿತ ತೆರಿಗೆ, ಪ್ರವೇಶ ತೆರಿಗೆ, ಮನೋರಂಜನೆ ತೆರಿಗೆ, ಜಾಹೀರಾತು ತೆರಿಗೆ ಮತ್ತು ರಾಜ್ಯದ ಇತರೆ ಉಪಕರಗಳು ಇದೀಗ ಒಂದೇ ವ್ಯವಸ್ಥೆಯಲ್ಲಿ ವಿಲೀನಗೊಂಡಿವೆ. ಹಿಂದಿನ ತೆರಿಗೆ ಪದ್ಧತಿಯಲ್ಲಿ ಉತ್ಪಾದನ ಮೂಲ ಸ್ಥಳದಲ್ಲಿ ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು. ಈಗಿನ ಪದ್ಧತಿಯಲ್ಲಿ ತೆರಿಗೆಯನ್ನು ಉತ್ಪನ್ನ ಬಳಕೆ ಸ್ಥಾನ (ಗಮ್ಯ)ದಲ್ಲಿ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ ಪಂಜಾಬಿ ಮೂಲದ ಸರಕುಗಳನ್ನು ಕರ್ನಾಟಕ ರಾಜ್ಯದಲ್ಲಿ ಬಳಸುವುದಾದರೆ GST ಯ ಸಂಗ್ರಹವು ಕರ್ನಾಟಕದಲ್ಲಿ ಆಗುತ್ತದೆ. ಪಂಜಾಬ್ ರಾಜ್ಯವು ಕೇವಲ ಉತ್ಪಾದನೆ ಹಾಗೂ ಶೇಖರಣೆ ಹಂತದಲ್ಲಿ ಆದಾಯವನ್ನು ಪಡೆಯುತ್ತದೆ. ಉತ್ಪನ್ನವು ಪಂಜಾಬ್ ರಾಜ್ಯದಿಂದ ಚಲಿಸಿ ಕರ್ನಾಟಕದಲ್ಲಿ ಕೊನೆಯ ಗ್ರಾಹಕರನ್ನು ತಲುಪಿದಾಗ ತೆರಿಗೆ ಆದಾಯವನ್ನು ಕಳೆದುಕೊಳ್ಳುತ್ತದೆ. ಇದರ ಅರ್ಥ ಕರ್ನಾಟಕವು ಅಂತಿಮ ಮಾರಾಟದಲ್ಲಿ ತೆರಿಗೆ ಆದಾಯವನ್ನು ಗಳಿಸುತ್ತದೆ, ಏಕೆಂದರೆ ಇದು ಬಳಕೆಯ ಸ್ಥಾನ

GST ತೆರಿಗೆ ಆಧಾರದ ಮೇಲೆ ಹೂಡುವಳಿ ತೆರಿಗೆ ಪಾವತಿಯ (Input tax credit-ITC) ಸಂಪೂರ್ಣ ಮೌಲ್ಯ ಸೇರ್ಪಡೆಯ ಸರಪಳಿಯೊಂದಿಗೆ ತಡೆರಹಿತ ಹರಿವು ಉತ್ಪಾದನಾ ಪ್ರಕ್ರಿಯೆಯ ಪ್ರತಿ ಹಂತದಲ್ಲಿ, ಹಿಂದಿನ ವಹಿವಾಟಿನಲ್ಲಿ ಈಗಾಗಲೇ ಪಾವತಿಸಿದ ತೆರಿಗೆಯನ್ನು ಪಡೆಯಲು ವ್ಯವಹಾರಗಳ ಆಯ್ಕೆಯನ್ನು ಹೊಂದಿರುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಹೂಡುವಳಿ ತೆರಿಗೆ ಪಾವತಿ (ITC) ಅನ್ನು ಅರ್ಥ ಮಾಡಿಕೊಳ್ಳಬೇಕು. GST ಆಧಾರದ ಮೇಲೆ ಹೂಡುವಳಿ ತೆರಿಗೆ ಪಾವತಿ (ITC) ಸಂಪೂರ್ಣ ಮೌಲ್ಯ ಸೇರ್ಪಡೆಯ ಸರಪಳಿಯೊಂದಿಗೆ ತಡೆರಹಿತವಾಗಿ ಹರಿದುಬರುತ್ತದೆ. ಉತ್ಪಾದನಾ ಪ್ರಕ್ರಿಯೆಯ ಪ್ರತಿ ಹಂತದಲ್ಲಿ, ಹಿಂದಿನ ವಹಿವಾಟಿನಲ್ಲಿ ಈಗಾಗಲೇ ಪಾವತಿಸಿದ ತೆರಿಗೆಯನ್ನು ಪಡೆಯಲು ವ್ಯವಹಾರಗಳ ಆಯ್ಕೆಯನ್ನು ಹೊಂದಿರುತ್ತವೆ. GST ಯ ಕಾರ್ಯ ವೈಖರಿಯನ್ನು ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ. ಇದನ್ನು ಪರಿಶೀಲಿಸಿದರೆ ವ್ಯಾಪಾರಿಗಳು ಪಾವತಿಸಿದ ತೆರಿಗೆಯನ್ನು ಮರುಪಡೆಯುವ ವ್ಯವಸ್ಥೆ GST ಯಲ್ಲಿ ಅಡಕವಾಗಿದೆ. ಮೂರು ಬಗೆಯ ವ್ಯಾಪಾರಿಗಳನ್ನು (ತಯಾರಕರು, ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿ) ಒಳಗೊಂಡ ಮಾರಾಟ ಪ್ರಕ್ರಿಯೆಯನ್ನು ಉದಾಹರಣೆ ಯಾಗಿಟ್ಟುಕೊಂಡು ಈ ಕೆಳಗಿನ ಪಟ್ಟಿಯನ್ನು ಉSಖಿರಹಿತ ಹಿಂದಿನ ಪದ್ಧತಿ ಹಾಗೂ ಉSಖಿಸಹಿತವಾಗಿ ತಯಾರಿಸಲಾಗಿದೆ

4

ತಯಾರಕರು ೧೦೦೦ ರೂಪಾಯಿಯನ್ನು ವೆಚ್ಚ ಮಾಡಿ ಕಚ್ಚಾ ವಸ್ತುವನ್ನು ಖರೀದಿಸಿ ಮೌಲ್ಯವರ್ಧನೆಗೊಳಿಸಿ ೨೦೦ ರೂಪಾಯಿ ಲಾಭವನ್ನು ಇಟ್ಟುಕೊಂಡು ಸಗಟು ವ್ಯಾಪಾರಿಗೆ ಮಾರುತ್ತಾನೆ. ಈ ಹಂತದಲ್ಲಿ ತಯಾರಕನು ೧೪೪ ರೂಪಾಯಿಯನ್ನು (ಶೇ. ೧೨ ರಷ್ಟು) ಕೇಂದ್ರದ ಅಬಕಾರಿ ಸುಂಕವಾಗಿ ಅಂತಿಮ ಉತ್ಪನ್ನದ ಬೆಲೆಯ ಮೇಲೆ (೧೨೦೦ ರೂ.) ಭರಿಸುತ್ತಾನೆ. ತಯಾರಕನು ಸಗಟು ವ್ಯಾಪಾರಿಗೆ ವಸ್ತುವನ್ನು ೧೩೪೪ ರೂ.ಗಳಿಗೆ ಮಾರುತ್ತಾನೆ. ಸಗಟು ವ್ಯಾಪಾರಿಯು ಉತ್ಪನ್ನದ ಮೇಲೆ ವಿವಿಧ ರೀತಿಯ ಖರ್ಚು(ಸಾರಿಗೆ, ಶೇಖರಣೆ, ಕೂಲಿ) ಹಾಗೂ ತನ್ನ ಲಾಭವನ್ನೊಳಗೊಂಡು ೨೬೯ ರೂಪಾಯಿಯನ್ನು ಭರಿಸುತ್ತಾನೆ. ಸಗಟು ವ್ಯಾಪಾರಿಯು ಉತ್ಪನ್ನವನ್ನು ಚಿಲ್ಲರೆ ವ್ಯಾಪಾರಿಗೆ ಮಾರುತ್ತಾನೆ, ಮಾರುವಾಗ ಮೌಲ್ಯವರ್ಧಿತ ತೆರಿಗೆ ೮೧ ರೂ.ನಷ್ಟು (ಶೇ.೩) ಭರಿಸುತ್ತಾನೆ. ಚಿಲ್ಲರೆ ವ್ಯಾಪಾರಿಯು ಉತ್ಪನ್ನವನ್ನು ಸಗಟು ವ್ಯಾಪಾರಿಯಿಂದ (೧೩೪೪+೨೬೯+೮೧) ರೂ. ೧೬೯೩ ಕ್ಕೆ ಖರೀದಿಸುತ್ತಾನೆ. ಖರೀದಿಸಿದ ಉತ್ಪನ್ನದ ಮೇಲೆ ವಿವಿಧ ಖರ್ಚು ಹಾಗೂ ತನ್ನ ಲಾಭವನ್ನು ಅಂದರೆ (೧೬೯೩+೩೩೯)=೨೦೩೨ ರೂ. ಗೆ ಗ್ರಾಹಕರಿಗೆ ಮಾರುತ್ತಾನೆ. ಮಾರುವ ಹಂತದಲ್ಲಿ ಚಿಲ್ಲರೆ ವ್ಯಾಪಾರಿಯ ಉತ್ಪಾದನಾ ಮೌಲ್ಯದ ಮೇಲೆ (೨೦೩೨ ರೂ.) ಶೇ.೮ ರಷ್ಟು ತೆರಿಗೆಯನ್ನು ವಿಧಿಸಿ ೨೧೩೪ ರೂಪಾಯಿಗೆ ಮಾರುತ್ತಾನೆ. ಗಮನಿಸಬೇಕಾದ ಅಂಶವೆಂದರೆ ವಿವಿಧ ಹಂತದಲ್ಲಿ ಭರಿಸಿದ ತೆರಿಗೆಯ ಮೇಲೆ ಮರು ತೆರಿಗೆಯನ್ನು ವಿಧಿಸುವುದರ ಮೂಲಕ ಗ್ರಾಹಕ ವಸ್ತುವಿನ ಬೆಲೆಯಲ್ಲಿ ಏರಿಕೆಯಾಗಿರುತ್ತದೆ. ಇದನ್ನು ’ಮೇಲ್ತೆರಿಗೆ ಪರಿಣಾಮ’ಎಂದು ಕರೆಯುತ್ತಾರೆ.

6

ತಯಾರಕರು ೧೦೦೦ ರೂಪಾಯಿಯನ್ನು ವೆಚ್ಚ ಮಾಡಿ ಕಚ್ಚಾ ವಸ್ತುವನ್ನು ಖರೀದಿಸಿ ಮೌಲ್ಯವರ್ಧನೆಗೊಳಿಸಿ ೨೦೦ ರೂಪಾಯಿ ಲಾಭವನ್ನಿಟ್ಟುಕೊಂಡು ಸಗಟು ವ್ಯಾಪಾರಿಗೆ ಮಾರುತ್ತಾನೆ. ಮಾರುವಾಗ ಶೇ.೧೮ ರಷ್ಟು GST ಯನ್ನು ಅಂದರೆ ೨೧೬ ರೂಪಾಯಿಯನ್ನು ಭರಿಸಿ, ೧೪೧೬ ರೂಪಾಯಿಗೆ ಸಗಟು ವ್ಯಾಪಾರಿಗೆ ಮಾರುತ್ತಾನೆ. ಸಗಟು ವ್ಯಾಪಾರಿಗೆ ಮಾರುವುದರ ಮೂಲಕ ತಯಾರಕನು ತಾನು ಭರಿಸಿದ ತೆರಿಗೆ ೨೧೬ ರೂಪಾಯಿಯನ್ನು ಹೂಡುವಳಿ ತೆರಿಗೆ ಪಾವತಿಯಾಗಿ ಮರು ಪಡೆಯುತ್ತಾನೆ. ಮುಂದಿನ ಹಂತದಲ್ಲಿ ಸಗಟು ವ್ಯಾಪಾರಿಯು ವಾಸ್ತವಿಕವಾಗಿ ೧೨೦೦ ರೂಪಾಯಿ ಭರಿಸಿ ಖರೀದಿಸಿದ ಉತ್ಪನ್ನದ ಮೇಲೆ ವಿವಿಧ ಖರ್ಚು ಹಾಗೂ ಲಾಭವನ್ನೊಳಗೊಂಡು ೧೪೪೦ ರೂ.ಗೆ ಚಿಲ್ಲರೆ ವ್ಯಾಪಾರಿಗೆ ಮಾರುತ್ತಾನೆ. ಮಾರುವ ಹಂತದಲ್ಲಿ ೨೫೯ ರೂ. GST (ಶೇ.೧೮)ಯನ್ನು ೧೪೪೦ ರೂ. ಮೌಲ್ಯದ ವಸ್ತುವಿನ ಮೇಲೆ ಭರಿಸುತ್ತಾನೆ. ಭರಿಸಿರುವ ೨೫೯ ರೂಪಾಯಿಯಲ್ಲಿ ೨೧೬ ರೂಪಾಯಿಯನ್ನು ಹೂಡುವಳಿ ತೆರಿಗೆ ಪಾವತಿ ರೂಪದಲ್ಲಿ ಚಿಲ್ಲರೆ ವ್ಯಾಪಾರಿಯಿಂದ ಹಿಂಪಡೆಯುತ್ತಾನೆ. ಅಂದರೆ ಅವನು ಭರಿಸುವ ಒಟ್ಟು ತೆರಿಗೆಯು ಕೇವಲ ರೂ. ೪೩ ಆಗಿರುತ್ತದೆ. ಇದೇ ರೀತಿಯಲ್ಲಿ ಚಿಲ್ಲರೆ ವ್ಯಾಪಾರಿಯು ತನ್ನ ಖರ್ಚು ಹಾಗೂ ಲಾಭವನ್ನು ಇಟ್ಟುಕೊಂಡು (೧೪೪೦+೨೮೮) ೧೭೨೮ ರೂ.ಗೆ ಗ್ರಾಹಕರಿಗೆ ಮಾರುತ್ತಾನೆ. ಮಾರುವ ಹಂತದಲ್ಲಿ GST ರೂ. ೩೧೧ ರಷ್ಟು ಭರಿಸುತ್ತಾನೆ. ಈ ಮೊತ್ತದಲ್ಲಿ ೨೫೯ ರೂ. ಅವನಿಗೆ ಹೂಡುವಳಿ ತೆರಿಗೆ ಪಾವತಿ ರೂಪದಲ್ಲಿ ಮರುಪಾವತಿಯಾಗುತ್ತದೆ. ಕೇವಲ ೫೨ ರೂಪಾಯಿಯಷ್ಟು ತೆರಿಗೆಯನ್ನು ಸರ್ಕಾರಕ್ಕೆ ಸಂದಾಯ ಮಾಡುತ್ತಾನೆ. ಅಂತಿಮವಾಗಿ ಗ್ರಾಹಕರು ರೂ.೨೦೩೯ ಅನ್ನು ಕೊಟ್ಟು ವಸ್ತುವನ್ನು ಖರೀದಿಸುತ್ತಾರೆ. ಸರ್ಕಾರಕ್ಕೆ ೨೧೬ + ೪೩ + ೫೨ = ರೂ.೩೦೮ ರಷ್ಟು ತೆರಿಗೆ ಸಂಗ್ರಹವಾಗುತ್ತದೆ. ಹಿಂದಿನ ಪದ್ಧತಿಗೆ ಹೋಲಿಸಿದರೆ ಗ್ರಾಹಕರು ಕೊಳ್ಳುವ ಬೆಲೆಯಲ್ಲಿ ೨೧೩೪-೨೦೩೯=೯೫ರಷ್ಟು ಕಡಿತಗೊಂಡಿರುತ್ತದೆ.

8

ಮೇಲಿನ ಪಟ್ಟಿಯಲ್ಲಿ ನಮೂದಿಸಿದಂತೆ ಪರಿಕರಗಳ ಮೇಲೆ ಉSಖಿ ಪರಿಣಾಮವಾಗಿ ತೆರಿಗೆ ದರ ಮೊದಲಿಗಿಂತಲೂ ಕಡಿಮೆಯೇ ಆಗಿರುವುದನ್ನು ಗಮನಿಸಬಹುದು. ಆದ ಕಾರಣ ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನಾ ವೆಚ್ಚ ಕಡಿಮೆಯಾಗುವ ಸಾಧ್ಯತೆಯಿಂದ ಆಶಾದಾಯಕವಾಗಿದೆ ಮತ್ತು ಕೃಷಿ ಉತ್ಪನ್ನಗಳ ಸಗಟು ಹಾಗೂ ಚಿಲ್ಲರೆ ಬೆಲೆ ಕಡಿಮೆಯಾಗುವ ಸಂಭವವಿದೆ. ಇದರಿಂದಾಗಿ ಕೃಷಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯನ್ನು ಭವಿಷ್ಯದಲ್ಲಿ ಕಾಣಬಹುದು.

ಪ್ರಯೋಜನಗಳು

  • ನೋಂದಣಿ, ಆದಾಯ, ಪಾವತಿಗಳಿಗೆ, ಸರಳೀಕೃತ ಮತ್ತು ಸ್ವಯಂಚಾಲಿತ ಕಾರ್ಯ ವಿಧಾನವನ್ನು ಹೊಂದಿದೆ
  • ಎಲ್ಲಾ ರಾಜ್ಯಗಳಲ್ಲಿ ವಿಧಿಸಲಾದ ಉSಖಿ ದರವು ಒಂದೇ ಆದ್ದರಿಂದ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯ ರಚನೆ ಆಗುವುದು ಹಾಗೂ ವಿದೇಶಿ ಬಂಡವಾಳವು ಅತಿ ಹೆಚ್ಚಾಗಿ ಹರಿದುಬರುವುದು
  • ಪೂರೈಕೆಯ ಪ್ರತಿ ಹಂತದಲ್ಲಿ ಹೂಡುವಳಿ ತೆರಿಗೆ ಪಾವತಿ ವ್ಯಾಪಾರಿಗಳಿಗೆ ಲಭ್ಯವಾಗುವುದರಿಂದ ತೆರಿಗೆಗಳ ಮೇಲ್ತೆರಿಗೆಯನ್ನು ತಡೆಯಬಹುದು. ಇದರಿಂದಾಗಿ ಉತ್ಪನ್ನವು ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವಂತಾಗುತ್ತದೆ. ಉತ್ಪನ್ನವು ಅಗ್ಗವಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರುತ್ತದೆ
  • ತೆರಿಗೆಗೆ ಸಂಬಂಧಿಸಿದ ಕಾನೂನು, ಕಾರ್ಯವಿಧಾನ ಹಾಗೂ ದರಗಳು ಸಮನ್ವಯಗೊಂಡಿವೆ
  • ಸರಳ ತೆರಿಗೆಯಾಗಿ ಹೊರಹೊಮ್ಮಿದೆ

    GST ಯಿಂದ ತೆರಿಗೆ ವ್ಯವಸ್ಥೆಯಲ್ಲಿನ ಅನುಸರಣೆ ವೆಚ್ಚ ಕಡಿತಗೊಂಡಿದೆ

    17