ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಅರಿವೆ ಗುರು

ಕಡಿಮೆ ವೋಲ್ಟೇಜ್ನಿಂದ ಇದ್ದೂ ಇಲ್ಲದಂತಾಗುವ ವಿದ್ಯುತ್

image_
ಅನಿಲ್ ಕುಮಾರ್
9449837309
1

ಬೇಸಿಗೆ ಬಂತೆಂದರೆ ಪವರ್ಕಟ್ನೊಂದಿಗೆ, ಅದರ ಹಿಂದೆ ಬರುವ ಸಮಸ್ಯೆ ಕಡಿಮೆ ವೋಲ್ಟೇಜ್ನದ್ದು. ಇದ್ದು ಇಲ್ಲದಂತಾಗುವ ವಿದ್ಯುತ್ನಿಂದ ಟ್ಯೂಬ್, ಟಿ.ವಿ., ಪಂಪ್ ಯಾವುದೂ ಕೆಲಸ ಮಾಡಲಾರದು. ಇದ್ದಿದ್ದರಲ್ಲಿ ೧೦೦ ವ್ಯಾಟ್ ಬುರುಡೆ ಬಲ್ಬು ಮಾತ್ರ ೨೫ ವ್ಯಾಟ್ನಂತೆ ಉರಿಯುತ್ತೆ ಅಂತ ರಂಗಣ್ಣನವರ ಮಾತು. ೬೦ ವ್ಯಾಟ್ ಬಲ್ಬನ್ನು ೨೦೦ ವ್ಯಾಟ್ಗೆ ಬದಲಾಯಿಸಿ ಇನ್ನಷ್ಟು ಸಮಸ್ಯೆ ಹೆಚ್ಚಲು ಕಾರಣರಾಗಿದ್ದಾರೆ ಗಣೇಶಪ್ಪನವರು. ಎಷ್ಟು ಒಳ್ಳೇ ಕಂಪೆನಿ ಸ್ಟೆಬಿಲೈಸರ್ ತಂದ್ರೂ ಕೆಲಸ ಮಾಡಲ್ಲ ಎಂಬುದು ಇಲ್ಲಿ ಸಮಸ್ಯೆಯ ಮೂಲ ಅಸಮರ್ಪಕ ಆಯ್ಕೆ. ಸಮಸ್ಯೆಯ ಮೂಲ: ಬೇಸಿಗೆ ಬಂತೆಂದರೆ ಕೃಷಿ ಪಂಪ್ಗಳ ಹೊರೆ ಹೆಚ್ಚುತ್ತದೆ. ದೂರದವರೆಗೆ ಇರುವ ಲೈನುಗಳು, ಪುರಾತನವಾದ, ಹಾಳಾದ ಲೈನುಗಳು, ಇವುಗಳಿಂದ ವೋಲ್ಟೇಜ್ ಕುಸಿದು, ಟ್ರಾನ್ಸ್ಫಾರ್ಮರ್ನಿಂದ ದೂರವಿರುವ ಪಂಪ್ ಹಾಗೂ ಮನೆಗಳಿಗೆ ಸಮಸ್ಯೆ ಹೆಚ್ಚು. ಸಾಧಾರಣವಾಗಿ ೨೨೦ ವ್ಯಾಟ್ ಇರಬೇಕಾದ್ದು ೧೦೦-೧೫೦ ವ್ಯಾಟ್ಗಳಿಗೆ ಕುಸಿಯುತ್ತದೆ. ಈ ಕಡಿಮೆ ವೋಲ್ಟೇಜ್ನಲ್ಲಿ ಸಾಧಾರಣ ಸ್ಟೆಬಿಲೈಸರ್ ಕೆಲಸ ಮಾಡುವುದಿಲ್ಲ. ಇದಕ್ಕೆ ಕನಿಷ್ಠ ೧೭೦ ವ್ಯಾಟ್ ವಿದ್ಯುತ್ ಬೇಕು. ಕಡಿಮೆ ವೋಲ್ಟೇಜ್ ವಿದ್ಯುತ್ನಿಂದಾಗಿ ಉಪಕರಣಗಳು ಹಾಳಾಗುವುದು, ಬ್ಯಾಟರಿಗಳು ಸರಿಯಾಗಿ ಚಾರ್ಜ್ ಆಗದೆ ಅವುಗಳ ಜೀವಿತಾವಧಿ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳೂ ಇವೆ. ಸಮಸ್ಯೆ ಇದೆ ಎಂದ ಮೇಲೆ ಪರಿಹಾರವೂ ಹುಡುಕಲೇಬೇಕಲ್ಲ?

3

ಎಲೆಕ್ಟ್ರಿಸಿಟಿಯವರಿಗೆ ದೂರು ಕೊಟ್ಟು ಪ್ರಯತ್ನಿಸಬಹುದಾದರೂ, ತಮ್ಮದೇ ನೂರಾರು ಪ್ರಮುಖ ಸಮಸ್ಯೆಗಳಲ್ಲಿ ಮುಳುಗಿದವರು ಸ್ಪಂದಿಸುವುದು ಕಷ್ಟವೇ. ಅಲ್ಲದೇ ಕೆಲವೊಮ್ಮೆ ತಾಂತ್ರಿಕ ಹಾಗೂ ಆರ್ಥಿಕ ಕಾರಣಗಳಿಂದ ಸರಿಪಡಿಸುವುದು ಸುಲಭದ ಮಾತೇನಲ್ಲ. ಇಂತಹ ಹಲವು ಸಮಸ್ಯೆಗಳಿಗೆ ಸರ್ವೋ ಸ್ಟೆಬಿಲೈಸರ್ ಪರಿಹಾರ ಒದಗಿಸಬಲ್ಲದು. ಇಲ್ಲಿ ಸರ್ವೋ ಎಂಬುದು ಕಂಪೆನಿಯ ಹೆಸರಲ್ಲ. ತಂತ್ರಜ್ಞಾನದ ಹೆಸರು. ಸರ್ವೋ ಸ್ಟೆಬಿಲೈಸರ್ಗಳು ’ಮೋಟಾರ್’ ಹೊಂದಿದ್ದು, ಇದು ವೋಲ್ಟೇಜ್ ಏರಿಳಿತ ಸಂದರ್ಭದಲ್ಲಿ, ತಿರುಗಿ ಸಮನಾದ ವೋಲ್ಟೇಜ್ ಹೊರಬರುವಂತೆ ನೋಡಿಕೊಳ್ಳುತ್ತದೆ. ಇತರ ಸಾಮಾನ್ಯ ಸ್ಟೆಬಿಲೈಸರ್ಗಳು ಹಂತ-ಹಂತವಾಗಿ ವೋಲ್ಟೇಜ್ ನಿಯಂತ್ರಿಸಿದರೆ ಸರ್ವೋ ಸ್ಟೆಬಿಲೈಸರ್ ಸರಾಗವಾಗಿ ನಿಯಂತ್ರಿಸುತ್ತದೆ. ಸರ್ವೋ ಸ್ಟೆಬಿಲೈಸರ್ಗಳು ವಿವಿಧ ಸಾಮರ್ಥ್ಯದಲ್ಲಿ ಲಭ್ಯವಿದ್ದು, ನಮ್ಮ ವಿದ್ಯುತ್ ಹೊರೆ ಹಾಗೂ ವಿದ್ಯುತ್ ಏರಿಳಿತಗಳನ್ನು ಗಮನಿಸಿ ಆಯ್ಕೆ ಮಾಡಿಕೊಳ್ಳಬೇಕು.

5

ಇವುಗಳಲ್ಲಿ ೧೦೦-೨೭೦ ವ್ಯಾಟ್, ೧೭೦-೨೭೦ ವ್ಯಾಟ್ವರೆಗೆ ಕಾರ್ಯನಿರ್ವಹಿಸುವ ರೀತಿ ವಿವಿಧ ಸ್ಟೆಬಿಲೈಸರ್ಗಳು ಲಭ್ಯ. ಒಂದು ಮನೆಯ ಲೈಟಿಂಗ್ಗೆ ಸಾಧಾರಣ ೨ ಅಥವಾ ೩ ಕೆವಿಎ ಅಗತ್ಯವಿರುತ್ತದೆ. ಸರ್ವೋ ಸ್ಟೆಬಿಲೈಸರ್ ದರ ೧೦,೦೦೦/-ಕ್ಕೂ ಮೇಲ್ಪಟ್ಟು ಇರುವುದರಿಂದ ಇದರ ಆಯ್ಕೆ ಹಾಗೂ ಅಳವಡಿಕೆಗೆ ನುರಿತ ತಂತ್ರಜ್ಞರ ಸಂಪರ್ಕಿಸುವುದು ಅವಶ್ಯ. ಸರ್ವೋ ಸ್ಟೆಬಿಲೈಸರ್ಗಳು ಕಡಿಮೆ ವೋಲ್ಟೇಜ್ ಸಮಸ್ಯೆ ಮಾತ್ರವಲ್ಲದೇ, ಅಧಿಕ ವೋಲ್ಟೇಜ್ ಹಾಗೂ ಅಧಿಕ ಹೊರೆಯಿಂದ ರಕ್ಷಿಸುವ ವ್ಯವಸ್ಥೆ ಹೊಂದಿದೆ. ೨೩೦ ವ್ಯಾಟ್ಗೂ ಹೆಚ್ಚಿನ ವಿದ್ಯುತ್ ಇರುವಲ್ಲಿ ಇದನ್ನು ಬಳಸಿದರೆ ಉಪಕರಣಗಳು ಸುಟ್ಟು ಹೋಗುವುದನ್ನು ತಡೆಗಟ್ಟಬಹುದಲ್ಲದೇ ವಿದ್ಯುತ್ ಉಳಿತಾಯ ಕೂಡಾ ಸಾಧ್ಯವಿದೆ. ಮೂರು ಫೇಸ್ನ ಸ್ಟೆಬಿಲೈಸರ್ಗಳೂ ಲಭ್ಯವಿದೆ. ಇದನ್ನು ಮೋಟಾರ್ ಸೇರಿದಂತೆ ಅನೇಕ ವಿದ್ಯುತ್ ಉಪಕರಣಗಳಿಗೆ ಉಪಯೋಗಿಸಬಹುದು

7

ಸರ್ವೋ ಸ್ಟೆಬಿಲೈಸರ್ಗಳನ್ನು ಕೊಳ್ಳುವಾಗ ಕೆಳಗಿನ ಅಂಶಗಳನ್ನು ಗಮನಿಸಿ: ಸುರಕ್ಷಾ ಮಾನದಂಡಗಳು, ಕಾರ್ಯ ನಿರ್ವಹಿಸುವ ವೋಲ್ಟೇಜ್ ರೇಂಜ್, ಕಂಪನಿ ಹಾಗೂ ಸೇವೆ.

ಅಳವಡಿಸುವ ಸ್ಥಳದಲ್ಲಿ ಗಮನಿಸಬೇಕಾದ ಅಂಶಗಳು: ವೋಲ್ಟೇಜ್ ಏರಿಳಿತ ಎಷ್ಟಿದೆ?, ವಿದ್ಯುತ್ ಹೊರೆ(ಲೋಡ್), ಉಪಯೋಗಿಸುವ ಉಪಕರಣಗಳು, ವಿದ್ಯುತ್ ಲೈನ್ನ ಸ್ಥಿತಿ, ತರಂಗಾಂತರ (frequency)

ಆಯ್ಕೆ ಮತ್ತು ಉಪಯೋಗಿಸುವ ವಿಧಾನ, ನಿರ್ವಹಣೆಯಲ್ಲಿ ತೋರುವ ಕಾಳಜಿಯಿಂದಾಗಿ ವರ್ಷಗಟ್ಟಲೇ ಸಮಸ್ಯೆ ರಹಿತವಾಗಿ ಕಾರ್ಯ ನಿರ್ವಹಿಸಬಲ್ಲದು