ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಹಂದಿಗಳಲ್ಲಿ ಎರಿಸೆಫಲಾ ರೋಗ

ಡಾ. ಸತೀಶ .ಎಸ್.ಪಿ
೯೪೮೧೬೨೨೧೩೪
1

ಹಂದಿ ಸಾಕಾಣಿಕೆಯು ಆಧುನಿಕ ಪಶುಪಾಲನಾ ಪದ್ದತಿಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಇತ್ತೀಚಿನ ಬರಗಾಲದ ದಿನಗಳಲ್ಲಿ ಇತರೆ ಪಶುಗಳಾದ ದನ, ಕುರಿ, ಮೇಕೆ ಮುಂತಾದವುಗಳ ಸಾಕಾಣಿಕೆಯು ಅತ್ಯಂತ ದುಬಾರಿಯಾಗುತ್ತಿದ್ದು ಕೆಲ ರೈತರು ಹಾಗೂ ಇತರೆ ನಿರುದ್ಯೋಗಿ ಯುವಕರು ರಾಜ್ಯದ ಆಯ್ದ ಭಾಗಗಳ ಬೇಡಿಕೆಯ ಮೇರೆಗೆ ಹಂದಿ ಸಾಕಾಣಿಕೆಯಲ್ಲಿ ತೊಡಗುತ್ತಿದ್ದಾರೆ. ಈ ಹಂದಿ ಸಾಕಾಣಿಕೆಯು ಕಡಿಮೆ ವೆಚ್ಚದ ಸಾಕಾಣಿಕೆಯಾಗಿದ್ದರೂ ಕೆಲವೊಮ್ಮೆ ಕೆಲವು ಮಾರಕ ರೋಗಗಳ ಭೀತಿಯು ಉದ್ಯಮದಾರರಲ್ಲಿ ಕಳವಳನ್ನುಂಟುಮಾಡಿದೆ. ಆ ರೋಗಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಬರುವ ಒಂದು ಪ್ರಮುಖ ರೋಗವೆಂದರೆ ಅದು ಎರಿಸೆಫಲಾ ರೋಗ. ಈ ಲೇಖನದಲ್ಲಿ ಎರಿಸೆಫಲಾ ರೋಗದ ಕೆಲವು ಮುಖ್ಯ ಅಂಶಗಳು ಹಾಗು ನಿವಾರಣೋಪಾಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ಎರಿಸೆಫಲಾ ಕಾಯಿಲೆಯು ಬ್ಯಾಕ್ಟೀರಿಯಾಗಳಿಂದ ಬರುವ ಒಂದು ಸಾಂಕ್ರಾಮಿಕ ರೋಗವಾಗಿದ್ದು ಎರಿಸಿಪೆಲೋತ್ರಿಕ್ಸ ರೊಸಿಯೋಪತಿ (ಇಡಿಥಿsiಠಿeಟoಣhಡಿix ಡಿhusioಠಿಚಿಣhiಚಿe) ಎಂಬ ಬ್ಯಾಕ್ಟೀರಿಯಾಗಳಿಂದ ಬರುತ್ತದೆ. ಸಾಮಾನ್ಯವಾಗಿ ಮೂರು ತಿಂಗಳ ಮರಿಗಳಿಂದ ಮೂರು ವರ್ಷದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ರೋಗದ ಪ್ರಮಾಣವು ಕೆಲವೊಮ್ಮೆ ತೀವ್ರತರವಾಗಿದ್ದು ಇನ್ನು ಕೆಲವೊಮ್ಮೆ ನಿಧಾನಗತಿಯಲ್ಲಿರುತ್ತದೆ. ಈ ರೋಗವು ಒಂದು ಹಂದಿಯಿಂದ ಮತ್ತೊಂದು ಹಂದಿಗೆ ನೇರವಾಗಿ ಹರಡುತ್ತದೆ

3

ರೋಗದ ಲಕ್ಷಣಗಳು: ಮೊದಮೊದಲು ತೀವ್ರತರವಾದ ಜ್ವರ (೧೦೫-೧೦೬೦ಈ), ಕೆಲವೊಮ್ಮೆ ಹಂದಿಗಳು ರೋಗದ ಯಾವುದೇ ಲಕ್ಷಣಗಳನ್ನು ತೋರಿಸದೇ ತಕ್ಷಣ ಸಾಯುವುದು, ನಡೆದಾಡಲು ಹಿಂಜರಿಯುವುದು, ಆಹಾರ ತ್ಯಜಿಸುವುದು ಹಾಗೂ ಬಾಯಾರಿಕೆ ಸಾಮಾನ್ಯ. ಚರ್ಮದ ಬಣ್ಣ ಕೆಲವೊಂದು ಭಾಗಗಳಲ್ಲಿ ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ. ಅತಿಮುಖ್ಯವಾಗಿ ಕಿವಿ, ಮೂಗು ಹಾಗೂ ಹೊಟ್ಟೆಯ ಭಾಗಗಳಲ್ಲಿ ಈ ರೀತಿ ಚರ್ಮದ ಬಣ್ಣ ಬದಲಾಗುತ್ತದೆ. ಈ ರೀತಿಯ ಬಣ್ಣ ಬದಲುವಿಕೆಯ ಭಾಗವು ವಜ್ರದಾಕಾರವನ್ನು ಹೋಲುತ್ತದೆ ಆದುದರಿಂದ ಈ ರೋಗವನ್ನು ಡೈಮಂಡ್ ಸ್ಕಿನ್ ಕಾಯಿಲೆ (ವಜ್ರಾಕಾರದ ಚರ್ಮದ ಕಾಯಿಲೆ) ಅಂತಲೂ ಕರೆಯುತ್ತಾರೆ. ಇದಲ್ಲದೆ ಹಂದಿಯಲ್ಲಿ ಕೀಲುಗಳ ಉರಿಯೂತ ಹಾಗೂ ಹೃದಯ ಸಮಸ್ಯೆಗಳು ಕಂಡುಬರುತ್ತವೆ. ಹಂದಿಗಳು ರೋಗಬಂದ ಆರು ದಿನಗಳಲ್ಲಿ ಸಾಯುವ ಸಂಭವ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಗರ್ಭಧರಿಸಿದ ಹೆಣ್ಣು ಹಂದಿಗಳಲ್ಲಿ ಗರ್ಭಪಾತದ ಘಟನೆಗಳು ಜರುಗುವುದುಂಟು. ರೋಗದ ತೀವ್ರತರದ ಲಕ್ಷಣಗಳಿಗಿಂತ, ನಿಧಾನ ಗತಿಯ ಲಕ್ಷಣಗಳಾದ ಕೀಲುಗಳ ಉರಿಯೂತ, ಕುಂಟುವುದು ಹಾಗೂ ಹೃದಯ ಸಮಸ್ಯೆಗಳು (ಎಂಡೋ ಕಾರ್ಡೈಟಿಸ್) ಹೆಚ್ಚಾಗಿ ಕಂಡುಬರುತ್ತವೆ. ಈ ರೋಗಕ್ಕೆ ಚಿಕಿತ್ಸೆ ಲಭ್ಯವಿದ್ದು, ರೋಗಬಂದ ತಕ್ಷಣ ಪಶುವೈದ್ಯರಿಂದ ಚಿಕಿತ್ಸೆ ನೀಡಿಸಿದಲ್ಲಿ, ಹಂದಿಗಳು ರೋಗದಿಂದ ಗುಣಮುಖವಾಗುತ್ತವೆ. ಪೆನಿಸಿಲಿನ್ ಜೀವನಿರೋಧಕ ಔಷಧಿಯು ಈ ರೋಗಕ್ಕೆ ಸೂಕ್ತ ಮದ್ದಾಗಿರುತ್ತದೆ

5

ರೋಗನಿಯಂತ್ರಣ ಕ್ರಮಗಳು: ವಿದೇಶಗಳಲ್ಲಿ ಈ ರೋಗಕ್ಕೆ ಸೂಕ್ತ ಲಸಿಕೆಗಳು ಲಭ್ಯವಿದ್ದು, ನಮ್ಮ ದೇಶದಲ್ಲಿ ಇನ್ನೂ ಲಸಿಕೆಗಳ ಲಭ್ಯತೆ ಇರುವುದಿಲ್ಲ. ಲಸಿಕೆಗಳು ಲಭ್ಯವಿದ್ದಲ್ಲಿ ಅಥವಾ ದೊರೆತಲ್ಲಿ ೩ ವಾರಗಳಿಗೂ ಮೇಲ್ಪಟ್ಟ ಹಂದಿಗಳಿಗೆ ಲಸಿಕೆಗಳನ್ನು ಪಶುವೈದ್ಯರಿಂದ ಮಾಡಿಸುವುದು ಹಾಗೂ ವರ್ಷಕ್ಕೆ ಎರಡು ಬಾರಿ ಲಸಿಕೆಗಳನ್ನು ಹಾಕಿಸುವುದು ಉತ್ತಮ ಮತ್ತು ಈ ಕೆಳಕಂಡ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಸೂಕ್ತ

  • ರೋಗಗ್ರಸ್ತ ಹಂದಿಗಳನ್ನು ಇತರೆ ಆರೋಗ್ಯ ವಂತ ಹಂದಿಗಳಿಂದ ಬೇರ್ಪಡಿಸಿ ಚಿಕಿತ್ಸೆ ನೀಡಿಸುವುದು
  • ಹಂದಿ ಮನೆಗಳ ಸ್ವಚ್ಛತೆ ಕಾಪಾಡುವುದು
  • ಬೇರೆಡೆಯಿಂದ ಖರೀದಿಸಿ ತಂದ ಹಂದಿಗಳನ್ನು ಇತರೆ ಹಂದಿಗಳ ಜೊತೆ ಬೆರೆಸುವುದಕ್ಕಿಂತ ಮೊದಲು ಸ್ವಲ್ಪದಿನ ಅಂದರೆ ಒಂದು ವಾರದ ಕಾಲ ಬೇರ್ಪಡಿಸಿ ನಂತರ ಯಾವುದೇ ರೋಗ ಲಕ್ಷಣಗಳು ಕಂಡುಬರದಿದ್ದರೆ ಗುಂಪಿನಲ್ಲಿ ಸೇರಿಸಿಕೊಳ್ಳುವುದು
  •