ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಪೇರಲ ಬೆಳೆಯಲ್ಲಿ ಹಣ್ಣಿನ ನೊಣದ ನಿರ್ವಹಣಾ ಕ್ರಮಗಳು

ಡಾ. ಸುಜಯ ಹುರಳಿ
೮೧೦೫೪೨೭೭೭೫
1

ಬಡವರ ಸೇಬು ಎಂದೇ ಕರೆಯುವ ಪೇರಲ ಹಣ್ಣನ್ನು ಭಾರತದಲ್ಲಿ ಸುಮಾರು ೧.೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಯು ಹಲವಾರು ಕೀಟಗಳ ಬಾಧೆಗೆ ತುತ್ತಾಗುತ್ತಿದ್ದು, ಅವುಗಳಲ್ಲಿ ಹಣ್ಣಿನ ನೊಣದ ಬಾಧೆಯು ಜಗತ್ತಿನಾದ್ಯಂತ ಕಂಡುಬರುತ್ತಿದ್ದು, ಹಲವು ಪ್ರದೇಶಗಳಲ್ಲಿ ಶೇ. ೧೦೦ರಷ್ಟು ಹಾನಿಯನ್ನು ಮಾಡುತ್ತಿದೆ. ಇತ್ತೀಚೆಗೆ ಸಂಶೋಧಕರು ಕೈಗೊಂಡಂತಹ ಪ್ರಾರಂಭಿಕ ಸಮೀಕ್ಷೆಯಿಂದ ತಿಳಿದು ಬಂದಿರುವುದೇನೆಂದರೆ ಪೇರು ಬೆಳೆಯುವ ತೋಟಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಈ ಕೀಟಕಂಡು ಬಂದಿದ್ದು, ಅರ್ಧ ಮಾಗಿದ ಹಣ್ಣುಗಳಿಗೆ ತೀವ್ರವಾಗಿ ಬಾಧಿಸುತ್ತಿದೆ. ಈ ಕೀಟದ ಬಾಧೆಯನ್ನು ಹತ್ತಿಕ್ಕಲು ರೈತರು ಆದಷ್ಟು ಬೇಗನೆ ಹತೋಟಿ ಕ್ರಮ ಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಶೇ.೯೦ಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ

ಸಮಗ್ರ ನಿರ್ವಹಣಾ ಕ್ರಮಗಳು

  • ಬೇಸಿಗೆ ಸಮಯದಲ್ಲಿ ಗಿಡಗಳ ಸುತ್ತಲೂ ಆಳವಾಗಿ ಉಳುಮೆ ಮಾಡುವುದರಿಂದ ಕೀಟದ ಕೋಶಗಳು ಮಣ್ಣಿನ ಮೇಲ್ಪದರದಲ್ಲಿ ಬಂದು ಸೂರ್ಯನ ಕಿರಣಗಳಿಂದ ಸಾಯುತ್ತವೆ
  • ಹಣ್ಣುಗಳು ಪೂರ್ತಿ ಮಾಗುವುದಕ್ಕಿಂತ ಸ್ವಲ್ಪ ಮುಂಚೆ ಹರಿಯಬೇಕು
  • ಪೂರ್ತಿ ಮಾಗಿದ ಹಣ್ಣುಗಳನ್ನು ಗಿಡಗಳಲ್ಲಿ ಅಥವಾ ನೆಲದ ಮೇಲೆ ಬಿಡಬಾರದು ಏಕೆಂದರೆ ಈ ಹಣ್ಣುಗಳಲ್ಲಿ ಇರುವಂತಹ ಮರಿ ಹುಳುಗಳು ತಮ್ಮ ವಂಶವನ್ನು ವೃದ್ಧಿಸುತ್ತವೆ. ಆದ್ದರಿಂದ ಅಂತಹ ಎಲ್ಲ ಕೆಳಗೆ ಬಿದ್ದ ಮತ್ತು ಕೀಟ ಬಾಧೆಗೆ ಒಳಗಾದ ಹಣ್ಣುಗಳನ್ನು ಆರಿಸಿ ೫೦ ಸೆಂ.ಮೀ.ಕ್ಕಿಂತ ಹೆಚ್ಚು ಆಳದ ಗುಂಡಿ ತೋಡಿ ಅದರಲ್ಲಿ ಹಾಕಿ ಮುಚ್ಚಿ ನಾಶಪಡಿಸಬೇಕು
  • ಕೀಟದ ಬಾಧೆಗೆ ಒಳಗಾದ ತೋಟದಲ್ಲಿ ಹಣ್ಣುಗಳನ್ನು ಹರಿದ ನಂತರ ಮೇಲಿಂದ ಮೇಲೆ ಉಳುಮೆ ಮಾಡಬೇಕು
  • 8
  • ಮಾಗಿದ ಬಾಳೆ ಹಣ್ಣುಗಳನ್ನು ಶೇ. ೧೦ರಷ್ಟು ಬೆಲ್ಲ ಮತ್ತು ಶೇ. ೧ ಮೆಲಾಥಿಯಾನ್ ಅಥವಾ ಕಾರ್ಬೊಫುರಾನ್ ೩ ಜಿ ಅಥವಾ ಸ್ಪೈನೋಸ್ಯಾಡ ೪೫ ಎಸ್.ಸಿ. ಯ ಮಿಶ್ರಣದ ದ್ರಾವಣದಲ್ಲಿ ಅದ್ದಿ ಪೇರಲ ಗಿಡಗಳಲ್ಲಿ ಅಲ್ಲಲ್ಲಿ ಕಟ್ಟುವುದರಿಂದ ಈ ಕೀಟದ ಹಾವಳಿಯನ್ನು ಹತೋಟಿಗೆ ತರಬಹುದು
  • 10
  • ಮೋಹಕ ಬಲೆಗಳು: ಕಡಿಮೆ ಬಲೆಯ ಮೋಹಕ ಬಲೆಗಳಿಂದ ಕೀಟವನ್ನು ಹತೋಟಿಗೆ ತರಬಹುದು ಈ ಬಲೆಗಳಲ್ಲಿ ಶೇ. ೦.೧ ರ ಮಿಥಾಯಲ್ ಯುಜಿನಾಲ್ ಎಂಬ ರಾಸಾಯನಿಕವನ್ನು ಹಾಕುವುದರಿಂದ ತುಂಬಾ ಸುಲಭವಾಗಿ ನೊಣಗಳನ್ನು ಆಕರ್ಷಿಸಿ ಹತೋಟಿಗೆ ತರಬಹುದು. ಪ್ರತಿ ಹೆಕ್ಟೇರಿಗೆ ಇಂತಹ ೧೨ ಬಲೆಗಳು ಬೇಕಾಗುತ್ತವೆ. ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ಈ ಬಲೆಗಳನ್ನು ತಯಾರಿಸಬಹುದು. ಒಂದು ಲೀಟರ್ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದುಕೊಂಡು ಬಾಟಲಿಯ ಕುತ್ತಿಗೆಯ ಭಾಗದಲ್ಲಿ ೭ ಮಿ.ಮೀ. ಅಳತೆಯ ಹಲವು ರಂಧ್ರಗಳನ್ನು ಮಾಡಬೇಕು. ನಂತರ ೧ ಮಿ.ಲೀ. ಮಿಥೈಲ್ಯುಜಿನಾಲ್ ಮತ್ತು ೨.೦ ಮಿ.ಲೀ. ಮಿಲಾಥಿಯನ್ ೫೦ ಇ.ಸಿ.ಪ್ರತಿ ಲೀಟರ್ ನೀರಿನಲ್ಲಿ ಬೆರೆಸಬೇಕು. ಈ ದ್ರಾವಣವನ್ನು ಪ್ರತಿ ಬಾಟಲಿಗೆ ೧೦೦ ಮಿ.ಲೀ. ಹಾಕಿ ಅವುಗಳನ್ನು ಗಿಡಗಳಿಗೆ ಅಲ್ಲಲ್ಲಿ ತೂಗು ಹಾಕಬೇಕು. ಪ್ರತಿ ಹೆಕ್ಟೇರ್ಗೆ ೧೦-೧೨ ಬಲೆಗಳು ಬೇಕಾಗುತ್ತವೆ. ಹಣ್ಣು ನೊಣವು ಈ ದ್ರಾವಣದ ವಾಸನೆಗೆ ಆಕರ್ಷಿಸಲ್ಪಟ್ಟು ಪ್ಲಾಸ್ಟಿಕ್ ಬಾಟಲ್ ಒಳಗೆ ಹೋಗಿ ದ್ರಾವಣವನ್ನು ಕುಡಿದು ಸಾಯುತ್ತವೆ. ಈ ದ್ರಾವಣವನ್ನು ವಾರಕ್ಕೆ ಎರಡು ಬಾರಿ ಬದಲಾಯಿಸಬೇಕು
  • ಕೀಟದ ಬಾಧೆಯು ತೀವ್ರವಾಗಿದ್ದಲ್ಲಿ ೨ ಮಿ.ಲೀ. ಪ್ರೊಫೆನೋಫಾಸ್ ೫೦ ಇ.ಸಿ. ಅಥವಾ ೪ ಗ್ರಾಂ ಕಾರ್ಬಾರಿಲ್, ೫೦ ಡಬ್ಲ್ಯೂ ಪಿ. ಯನ್ನು ೧೦ ಗ್ರಾಂ ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಹೂವಾಡುವ ಸಮಯದಿಂದ ಪ್ರತಿ ೧೫ ದಿನಗಳಿಗೊಮ್ಮೆ ಸಿಂಪರಣೆ ಮಾಡಬೇಕು
  •