ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಕಬ್ಬಿನ ಇಳುವರಿ ಹೆಚ್ಚಿಸಲು ಮೊದಲ ಸೂತ್ರ

ರಘುವೀರ
೮೯೫೧೫೨೬೮೦೩
1

ಕಬ್ಬು ನಮ್ಮ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ದೇಶಾದ್ಯಂತ ೭.೫ ಮಿಲಿಯನ್ ರೈತರು ಬೆಳೆಯುತ್ತಾರೆ. ಬದಲಾದ ಹವಾಮಾನ ಮತ್ತು ಕಾಲಕ್ಕೆ ಅನುಗುಣವಾಗಿ ಬೇಸಾಯಕ್ರಮ, ಪೀಡೆ ನಿರ್ವಹಣೆ ಕ್ರಮವನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಕಬ್ಬಿನ ಇಳುವರಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಆದ್ದರಿಂದ ಕಬ್ಬಿನ ಇಳುವರಿಯನ್ನು ಹೆಚ್ಚಿಸಲು ರೈತರು ಕೆಳಗೆ ಉಲ್ಲೇಖಿಸಿರುವ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳುವುದು

 • ಜೋಡು ಸಾಲು ನಾಟಿ ಮಾಡುವುದು
 • ಹನಿ ನೀರಾವರಿ ಪದ್ದತಿ
 • ಸತು, ಕಬ್ಬಿಣದ ಕೊರತೆಯ ನಿರ್ವಹಣೆ
 • ಜೋಡು ಸಾಲು ನಾಟಿ ಮಾಡುವುದು (Paired row planting)

  ಭೂಮಿಯನ್ನು ಎರಡರಿಂದ ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ ನಾಟಿಗೆ ಸಿದ್ದಪಡಿಸಿ ೬೦ ಅಥವಾ ೯೦ ಸೆಂ.ಮೀ. (೨-೩ ಅಡಿ) ಸಾಲುಗಳನ್ನು ಮಾಡಿ, ಎರಡು ಸಾಲು ನಾಟಿ ಮಾಡಿ ಒಂದು ಸಾಲು ಹುಸಿ ಬಿಡಬೇಕು. ಅಂದರೆ ಎರಡು ಜೋಡು ಸಾಲುಗಳ ಮಧ್ಯದ ಅಂತರ ೧೫೦-೧೮೦ ಸೆಂ.ಮೀ. ಬಿಡಬೇಕು. ಅದರಲ್ಲಿ ಅಂತರ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಬಹುದು

  ಉಪಯೋಗಗಳು

 • ಇಳುವರಿ ಪ್ರತಿ ಎಕರೆಗೆ ೪೫ ರಿಂದ ೮೦ ಟನ್ಗಳವರೆಗೆ ಹೆಚ್ಚುತ್ತದೆ
 • ಅಂತರ ಬೆಳೆಯಾಗಿ ಸೋಯಾಬಿನ್, ಉಳ್ಳಾಗಡ್ಡಿ, ಬೆಳ್ಳುಳ್ಳಿ, ಮತ್ತು ಕೊತ್ತಂಬರಿಗಳನ್ನು ಬೆಳೆಯಬಹುದು. ಆದರೆ ನೀವು ಬೆಳೆಯುವ ಅಂತರ ಬೆಳೆಗಳು ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯದ್ದಾಗಿರಬಾರದು
 • ಈ ನಾಟಿ ಪದ್ದತಿಯಲ್ಲಿ ಶೇಕಡ ೪೦ರಷ್ಟು ನೀರನ್ನು ಉಳಿತಾಯ ಮಾಡಬಹುದು
 • ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳುವುದು ಸೂಕ್ತ, ಏಕೆಂದರೆ ಶೇಕಡಾ ೫೦ರಷ್ಟು ಪೈಪ್ಗಳನ್ನು ಉಳಿಸಬಹುದು
 • ಕಬ್ಬಿಗೆ ಸರಿಯಾದ ಬೆಳಕು ಮತ್ತು ಗಾಳಿ ಸಿಗುವುದರಿಂದ ಹೆಚ್ಚಿನ ಕವಲುಗಳು ಬರುತ್ತವೆ, ಇದರಿಂದ ಸಾಗುವಳಿ ಹಾಗೂ ಸಿಂಪರಣೆಗೆ ಅನುಕೂಲಕರ. (ಸೂಚನೆ: ಪೂರ್ವ-ಪಶ್ಚಿಮಾಭಿಮುಖವಾಗಿ ಬೆಳೆಯುವುದರಿಂದ ಹೆಚ್ಚು ಗಾಳಿ ಮತ್ತು ಬೆಳಕು ಲಭಿಸುತ್ತದೆ)
 • ರವದಿಯನ್ನು ಸಾಲುಗಳ ಮಧ್ಯೆ ಹಾಕುವುದರಿಂದ ತೇವಾಂಶ ಆವಿ ಯಾಗದಂತೆ ತಡೆಯಬಹುದು ಮತ್ತು ಹಾಕಿದ ರವದಿಯನ್ನು ನೀರಿನಿಂದ ತೊಯ್ಯಿಸಿ ಪ್ರತಿ ಎಕರೆಗೆ ೧ಕಿ.ಲೊ. (ಸೆಲ್ಲುಲೋಮೊನಾಸ್) ಸೂಕ್ಷ್ಮಾಣು ಜೀವಿಯನ್ನು ಹಾಕುವುದರಿಂದ ರವದಿ ಕೊಳೆತು ಗೊಬ್ಬರವಾಗುತ್ತದೆ
 •