ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಕೃಷಿ ಅವಲಂಬಿತ ಪರ್ಯಾಯ ಬೆಳೆ ಯೋಜನೆ ಚಿತ್ರದುರ್ಗ ಜಿಲ್ಲೆ

ರುದ್ರಗೌಡ ಫ. ಚನ್ನಗೌಡ
೯೪೪೯೦೬೯೨೭೪
1

ಈ ಭಾಗದಲ್ಲಿ ಮಳೆಯು ಅನಿಶ್ಚತತೆಯಿಂದ ಕೂಡಿದೆ. ಮಳೆಯು ನಿರೀಕ್ಷಿತ ಸಮಯಕ್ಕೆ ಆರಂಭವಾಗಲಿಕ್ಕಿಲ್ಲ. ಒಂದೊಮ್ಮೆ ಆರಂಭವಾದರೂ ಮಧ್ಯದಲ್ಲಿ ಹಲವು ದಿನಗಳವರೆಗೆ ಮಳೆಯು ಬಾರದೇ ಇರುಬಹುದು. ಕೆಲವು ಬಾರಿ ನಿರೀಕ್ಷೆಗಿಂತ ಹೆಚ್ಚು ದಿನಗಳವರೆಗೆ ಮಳೆಗಾಲವು ಮುಂದುವರೆಯಬಹುದು. ಈ ಬಗೆಯ ಸಾಧ್ಯಾಸಾಧ್ಯತೆಗಳಿರುವುದರಿಂದ ಯಾವುದೇ ಹಂಗಾಮಿನಲ್ಲಿ ಎದುರಾಗುವ ಹವಾಮಾನಕ್ಕನುಗುಣವಾಗಿ ಕೃಷಿ ಪದ್ಧತಿಗಳ ಬದಲಾವಣೆಗಳನ್ನು ಮಾಡಿಕೊಂಡು ಸಾಧ್ಯವಾದಷ್ಟು ಅಧಿಕ ಇಳುವರಿಯನ್ನು ಪಡೆಯುವುದರಲ್ಲಿಯೇ ಕೃಷಿಕನ ಜಾಣ್ಮೆಯಡಗಿದೆ. ಹವಾಮಾನಕ್ಕನುಗುಣವಾಗಿ ಕೃಷಿ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು

3

ಚಿತ್ರದುರ್ಗ ಜಿಲ್ಲೆಯ ಪ್ರಧಾನ ಬೆಳೆಗಳು: ಮುಂಗಾರಿನಲ್ಲಿ ಜೋಳ, ರಾಗಿ, ನೆಲಗಡಲೆ ಮತ್ತು ಹತ್ತಿ ಈ ಜಿಲ್ಲೆಯ ಪ್ರಮುಖ ಬೆಳೆಗಳು. ಜೊತೆಗೆ ಶೇ.೧೨-೧೫ರಷ್ಟು ಪ್ರದೇಶದಲ್ಲಿ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಯಲಾಗುತ್ತದೆ. ಕಪ್ಪು ಭೂಮಿಯಲ್ಲಿ ಹತ್ತಿ ಮತ್ತು ಹಿಂಗಾರು ಜೋಳಗಳನ್ನು ಬೆಳೆಯಲಾಗುತ್ತದೆ. ವಾಡಿಕೆ ಮುಂಗಾರು ಪ್ರಾರಂಭವಾಗಿ ಅನಂತರ ಅನಾವೃಷ್ಟಿ ತಲೆದೋರಿದರೆ ಮರು ಬಿತ್ತನೆಗೆ ಸೂಕ್ತ ತಳಿ ಮತ್ತು ಬೀಜದ ಪ್ರಮಾಣವನ್ನು ಶಿಫಾರಸ್ಸು ಮಾಡುವುದು

5