ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ವನೌಷಧಿ

ನಾರುಂಬಾಳೆ (ನಾರುಂಬೇಳೆ)

-
1

ಇದು ತೀವ್ರ ಘಾಟುಳ್ಳದ್ದೂ ಒಗರೂ, ಉಷ್ಣವೂ, ವಿರೇಚನವೂ, ಲಘುವೂ, ಖಾರವೂ, ಕಹಿಯೂ ಆಗಿದ್ದು, ಕಫ, ರಕ್ತಪಿತ್ತ, ಶ್ವಾಸ, ಕಾಸ, ಅರುಚಿ, ಜ್ವರ, ವಿಸ್ಪೋಟಕ, ಪ್ರಮೇಹ, ರಕ್ತವಿಕಾರ, ಯೋನಿರೋಗ, ಕ್ರಿಮಿ, ಪಾಂಡು, ಶೋಭೆ ಮತ್ತು ಮೂತ್ರನಾಳದಲ್ಲಿಯ ಕಲ್ಲುಗಳನ್ನು ನಿವಾರಣೆ ಮಾಡುತ್ತದೆ. ಇದರ ಸೊಪ್ಪಿನ ಪಲ್ಯ ಮತ್ತು ಹುಳಿಯನ್ನೂ ಮಾಡಿ ತಿನ್ನುವ ರೂಢಿಯುಂಟು. ಔಷಧಕ್ಕಾಗಿ ಇದರ ಸ್ವರಸವನ್ನು ಬಳಸುವ ಕ್ರಮವಿದೆ. ಇದು ವಿರೇಚಕವಾಗಿರುವುದರಿಂದ ಆಗಾಗ ಇದನ್ನು ಅಡಿಗೆಯಲ್ಲಿ ಉಪಯೋಗಿಸುವುದರಿಂದ ಮಲಬದ್ಧತೆಯು ನಿವಾರಣೆಯಾಗುತ್ತದೆ. ಇದು ಶೂಲಹರವೂ, ಹೌದು; ಆದುದರಿಂದ ಕಿವಿಶೂಲೆಯಲ್ಲಿ ಇದರ ರಸವನ್ನು ಕಿವಿಯಲ್ಲಿ ಮೂರು ನಾಲ್ಕು ತೊಟ್ಟು ಹಾಕುವುದರಿಂದ ಅದು ಪರಿಹಾರವಾಗುತ್ತದೆ

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ನಾರುಂಬಾಳೆ/ಸುವರ್ಚಲಾ/ಹುಲ್ ಹುಲ್/ವೇಳೈವಾಮಿಂಟ/Wild Mustard

-/ಸೂರ್ಯ ಭಕ್ತಾ/ಕಾನ ಟೀ/-/ಸೂರ್ಯ ಕಾಂತಿಪು/-

-/ರವಿಪ್ರೀತಾ/-/-/-/-