ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಔಷಧಿ ಸಸ್ಯಗಳು

ನಸಗುನ್ನಿ

image_
ಡಾ. ಯಶಸ್ವಿನಿ ಶರ್ಮ
9535228694
1

ಸಾಮಾನ್ಯವಾಗಿ ಇದನ್ನು ತುರುಚಿ ಅವರೆ ಅಥವಾ ’ವೆಲ್ಪೆಟ್ ಬೀನ್ಸ್’ ಎಂದೂ, ಸಂಸ್ಕೃತದಲ್ಲಿ ’ಕಪಿಕಚ್ಚು’ ಎಂದು ಕರೆಯುತ್ತಾರೆ. ’ಲೆಗ್ಯೂಮಿನೇಸಿ’ ಕುಟುಂಬಕ್ಕೆ ಸೇರಿದ ಈ ಸಸ್ಯವನ್ನು ’ಮುಕ್ಯುನಾ ಪ್ರುರಿಯನ್ಸ್’ ಎನ್ನುತ್ತಾರೆ. ನಸಗುನ್ನಿಕಾಯಿ ಸಸಾರಜನಕ ಭರಿತವಾಗಿದ್ದು, ಸಾರಜನಕವನ್ನು ಭೂಮಿಯಲ್ಲಿ ಹಿಡಿದಿಡಲು ಸಹಾಯ ಮಾಡುತ್ತದೆ. ಭೂಮಿಯ ಮೇಲೆ ಹರಡಿಕೊಂಡು ಬೆಳೆಯುವ ನಸಗುನ್ನಿಯನ್ನು ಹೆಚ್ಚಾಗಿ ಹಸಿರು ಗೊಬ್ಬರವಾಗಿ ಬೆಳೆಯುತ್ತಾರೆ. ನಸಗುನ್ನಿ ಕಾಯಲ್ಲಿ ’ಎಲ್-ಡೋಪಾ’ ಎಂಬ ಅಂಶವಿದ್ದು, ಪಾರ್ಕಿನ್ಸನ್ ಕಾಯಿಲೆ ಹಾಗೂ ರಕ್ತದೊತ್ತಡ ನಿವಾರಿಸಲು ಬಳಸುತ್ತಾರೆ. ಅಲ್ಲದೇ ಇದನ್ನು ವೀರ್ಯವರ್ಧನೆಯಲ್ಲಿ, ನರದೌರ್ಬಲ್ಯ, ಹಾಗೂ ಅಧಿಕ ರಕ್ತಸ್ರಾವ ನಿವಾರಣೆಗಾಗಿ ಬಹು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ

3

ಎಲ್ಲಾ ಮಣ್ಣಿನಲ್ಲಿ ಇದನ್ನು ಬೆಳೆಯಬಹುದಲ್ಲದೇ, ಒಣಪ್ರದೇಶದಲ್ಲೂ ಕೂಡ ಹುಲುಸಾಗಿ ಬೆಳೆಯಬಲ್ಲದು. ಹಸಿರು ಗೊಬ್ಬರಕ್ಕಾದರೆ ೨-೩ ತಿಂಗಳೊಳಗೆ ಮಣ್ಣಿನೊಂದಿಗೆ ರಂಟೆ ಹೊಡೆಯಬೇಕು. ಬೀಜಕ್ಕಾದರೆ ಜೂನ್ನಲ್ಲಿ ಬಿತ್ತನೆ ಮಾಡಿದರೆ ಡಿಸೆಂಬರ್ನಲ್ಲಿ ಕೊಯ್ಲು ಮಾಡಬಹುದು. ನೀರಾವರಿಯಿದ್ದಲ್ಲಿ ವರ್ಷಪೂರ್ತಿ ಇದನ್ನು ಬೆಳೆಯಬಹುದು. ಹೆಕ್ಟೇರಿಗೆ ೧೦ ಟನ್ ಕೊಟ್ಟಿಗೆ ಗೊಬ್ಬರ ಬೆರೆಸಿ ಭೂಮಿಯನ್ನು ಸಿದ್ಧಪಡಿಸಿ ೬೦ ಸೆಂ.ಮೀ ಅಂತರದ ಸಾಲುಗಳಲ್ಲಿ ೪೫ ಸೆಂ.ಮೀ.ಗೆ ೨ ಬೀಜಗಳನ್ನು ಊರಬೇಕು. ಒಂದು ಹೆಕ್ಟೇರಿಗೆ ಸುಮಾರು ೫೦ ಕೆ.ಜಿ. ಬೀಜ ಬೇಕಾಗುತ್ತದೆ. ಇದು ಬಳ್ಳಿಯಾಗಿ ಹರಡಿಕೊಂಡು ಬೆಳೆಯುವುದರಿಂದ ವಾಣಿಜ್ಯವಾಗಿ ಬೆಳೆಯುವಾಗ ೧.೫-೨.೦ಮೀ. ಎತ್ತರದ ಚಪ್ಪರ ಹಾಕಿ ಹಬ್ಬಿಸಿದರೆ ಅಧಿಕ ಇಳುವರಿ ಪಡೆಯಬಹುದು. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ೪ -೫ ಸಲ ನೀರು ಹಾಯಿಸಿ ಹೆಕ್ಟೇರಿಗೆ ೫೦ ಕೆ.ಜಿ. ಸಾರಜನಕ ಮತ್ತು ೨೦ ಕೆ.ಜಿ. ಪೊಟ್ಯಾಷ್ಯುಕ್ತ ಗೊಬ್ಬರ ನೀಡಿದಲ್ಲಿ ಒಳ್ಳೆಯ ಬೆಳೆ ತೆಗೆಯಲು ಸಾಧ್ಯ

5

ಕಾಯಿ ಬಲಿತಂತೆ ೬-೭ ದಿನಗಳ ಅಂತರದಲ್ಲಿ ಕೊಯ್ಲು ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು. ಕಾಯಿಗಳು ಬಿಸಿಲಿಗೆ ಒಡೆದುಕೊಳ್ಳುತ್ತವೆ. ಇವನ್ನು ತೂರಿ ಸ್ವಚ್ಛವಾಗಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಶೇಖರಿಸಿಡಬೇಕು. ಮಳೆಯಾಶ್ರಿತ ಬೆಳೆಯಲ್ಲಿ ಹೆಕ್ಟೇರಿಗೆ ೧೫೦೦ ೧೭೦೦ ಕೆ.ಜಿ. ಇಳುವರಿ ನೀಡಿದರೆ, ನೀರಾವರಿಯಲ್ಲಿ ೩೦೦೦ ೪೦೦೦ ಕೆ.ಜಿ. ಬೀಜ ಸಿಗುತ್ತದೆ. ಚಪ್ಪರಕ್ಕೆ ಹಬ್ಬಿಸಿದರೆ ಪ್ರತಿ ಹೆಕ್ಟೇರಿಗೆ ಸುಮಾರು ೫೦೦೦ ಕೆ.ಜಿ. ಬೀಜದ ಇಳುವರಿ ತೆಗೆಯಬಹುದು

7