ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಸೌತೆಕಾಯಿ ನಂಜು (ಮೊಸಾಯಿಕ್) ರೋಗ

ಡಾ. ಹೆಚ್. ನಾರಾಯಣಸ್ವಾಮಿ
೯೪೪೮೧೫೯೩೭೫
1

ಮೊಸಾಯಿಕ್ ರೋಗವು ವಿವಿಧ ತರಕಾರಿ, ಅಲಂಕಾರಿಕ ಮತ್ತು ಇತರೆ ಸಸ್ಯಗಳಲ್ಲಿ (೧೯೧ ಬಗೆಯ ಸಸ್ಯಗಳು) ಕಂಡುಬರುತ್ತದೆ. ಇದು ನಂಜಾಣು ರೋಗಾಣುವಿನಿಂದ ಉಂಟಾಗುವುದು. ಕುಂಬಳ ಜಾತಿಯ ತರಕಾರಿಗಳಾದ ಸೌತೆಕಾಯಿ, ಮಿಡಿಸೌತೆ, ಕುಂಬಳಕಾಯಿ, ಸೋರೆಕಾಯಿ, ಹೀರೇಕಾಯಿ, ತುಪ್ಪದ ಹೀರೆಕಾಯಿ ಬೆಳೆಗಳಲ್ಲಿ ಹೆಚ್ಚು ಹಾನಿಯನ್ನುಂಟು ಮಾಡುವುದು. ಈ ರೋಗಕ್ಕೆ ತುತ್ತಾದ ಬೆಳೆಯ ಇಳುವರಿಯು ಗಣನೀಯವಾಗಿ ಕುಂಠಿತಗೊಳ್ಳುತ್ತದೆ.

3

ರೋಗವನ್ನು ಗುರುತಿಸುವಿಕೆ:

 • ಸೌತೆಕಾಯಿ ಬಳ್ಳಿಗಳು ಈ ಮೊಸಾಯಿಕ್ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತವೆ.
 • ಎಲೆಗಳ ಆಕಾರದಲ್ಲಿ ವ್ಯತ್ಯಾಸಗೊಂಡು, ವಿಕೃತ ಹಾಗೂ ಸುಕ್ಕುಗಟ್ಟಿದಂತ್ತಾಗುತ್ತವೆ.
 • ಎಲೆಗಳ ಅಂಚುಗಳು ಕೆಳಭಾಗಕ್ಕೆ ತಿರುಗಿ ಸುರುಳಿಯಾಗುತ್ತವೆ.
 • ಕಾಂಡದ ಗೆಣ್ಣುಗಳ ಗಾತ್ರ ಕಡಿಮೆಯಾಗಿ ಗಿಡ ಕುಬ್ಜವಾಗುತ್ತದೆ.
 • ಎಲೆಗಳ ಚಿಗುರು ಮತ್ತು ಹೂಗಳು ಉದುರುತ್ತವೆ
 • ಬೆಳವಣಿಗೆ ಕುಂಠಿತಗೊಂಡು ಕೆಲವೇ ಕೆಲವು ಹೂ ಮತ್ತು ಹಣ್ಣುಗಳನ್ನು ಮಾತ್ರ ಉತ್ಪಾದಿಸುವಲ್ಲಿ ಸಶಕ್ತವಾಗಿರುತ್ತದೆ
 • ಹಳೆಯ ಎಲೆಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ
 • ಸೌತೆಕಾಯಿಗಳು ತಿಳಿಹಸಿರು ಮತ್ತು ಗಾಢ ಹಸಿರು ಬಣ್ಣದ ಮಿಶ್ರಣ ಹೊಂದಿದ್ದು, ಅಂಕುಡೊಂಕಾಗಿರುತ್ತವೆ
 • ಗಾತ್ರ ಸಣ್ಣದಾಗಿರುತ್ತದೆ ತಿನ್ನಲು ಸಹ ಕಹಿಯಾಗಿರುತ್ತವೆ
 • ಸೌತೆಕಾಯಿ ಕಾಯಿಲೆಗೆ ಕಾರಣವಾದ ವೈರಸ್ ರೋಗಾಣುವು ಸಸ್ಯಹೇನುಗಳು ಮತ್ತು ಜೀರುಂಡೆ ಕೀಟಗಳಿಂದ ಹರಡುತ್ತದೆ
 • ತೋಟದ ಸುತ್ತಲೂ ಇರುವ ದೀರ್ಘಕಾಲಿಕ ಕಳೆಗಳು ಈ ವೈರಸ್ ಖಾಯಿಲೆಗೆ ಮುಖ್ಯ ಅತಿಥಿ ಸಸ್ಯಗಳಾಗಿವೆ
 • 16

  ಹತೋಟಿ ಕ್ರಮಗಳು

 • ಸೋಂಕು ಹೊಂದಿರುವ ಒಂದೆರಡು ಗಿಡಗಳಿದ್ದಲ್ಲಿ ಗುರುತಿಸಿ ಕಿತ್ತು ಹಾಕುವುದು
 • ಮೊಸಾಯಿಕ್ ರೋಗಪೀಡಿತ ದೀರ್ಘಕಾಲಿಕ ಕಳೆಗಳಿದ್ದಲ್ಲಿ ನಾಶಪಡಿಸುವುದು
 • ರೋಗ ಹರಡುವ ಸಸ್ಯಹೇನುಗಳನ್ನು ಅಂತರ್ವ್ಯಾಪಿ ಕೀಟನಾಶಕಗಳಾದ ೨.೦ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಅಥವಾ ೧ ಗ್ರಾಂ. ಅಸಿಫೇಟ್ ೭೫ ಎಸ್. ಪಿ. ಅಥವಾ ೦.೫ ಮಿ. ಲೀ. ಇಮಿಡಾಕ್ಲೋಫ್ರಿಡ್ ಸಿಂಪರಣೆಯಿಂದ ರೋಗದ ಹರಡುವಿಕೆಯನ್ನು ನಿಯಂತ್ರಿಸಬಹುದು
 •