ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಬೀಜ ಪ್ರಪಂಚ

ಬೆಂಡೆ

image_
ಡಾ. ಕೆ. ಎಸ್. ಶೇಷಗಿರಿ
9741769213
1

ಬೆಂಡೆ ಪ್ರಮುಖವಾಗಿ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಬೆಳೆಯುತ್ತಿರುವ ಜನಪ್ರಿಯ ತರಕಾರಿಬೆಳೆ. ಮಾಲ್ವೇಸಿಯೇ ಕುಟುಂಬಕ್ಕೆ ಸೇರಿದ ಈ ಬೆಳೆಯನ್ನು ವೈಜ್ಞಾನಿಕವಾಗಿ ’ಅಬೆಲ್ಮಸ್ಕಸ್ ಎಸ್ಕ್ಯುಲೆಂಟಸ್’ ಎಂದು ಕರೆಯುತ್ತಾರೆ. ಅಮೇರಿಕದಲ್ಲಿ ’ ಓಕ್ರಾ ’ಎಂದೇ ಕರೆಯಲಾಗುವ ಬೆಂಡೆಯ ಇತರೆ ಹೆಸರುಗಳು ’ಬೆಂಡಿ, ಲೇಡೀಸ್ ಫಿಂಗರ್’ ಎಂಬುದಾಗಿವೆ. ಇದರ ಮೂಲ ಸ್ಥಾನದ ಬಗ್ಗೆ ವಿವಾದಗಳಿವೆ. ಬೆಂಡೆ ಒಂದು ಬಹುವಾರ್ಷಿಕ ಬೆಳೆಯಾಗಿದ್ದು ಇದನ್ನು ವಾರ್ಷಿಕ ಬೆಳೆಯಾಗಿ ಕೃಷಿ ಮಾಡಲಾಗುತ್ತಿದೆ. ಪ್ರತಿ ೧೦೦ ಗ್ರಾಂ. ಬೆಂಡೆಯ ಸೇವನೆಯಿಂದ ದೇಹಕ್ಕೆ ೩೩ ಕ್ಯಾಲೊರಿ ಶಕ್ತಿ, ೭.೪೫ಗ್ರಾಂ.ಶರ್ಕರಪಿಷ್ಟ, ೭.೪೮ಗ್ರಾಂ.ಸಕ್ಕರೆ, ೩.೨ಗ್ರಾಂ. ನಾರು, ೦.೧೯ಗ್ರಾಂ.ಕೊಬ್ಬು, ೧.೯೮ಗ್ರಾಂ.ಸಸಾರಜನಕ ದೊರೆಯುತ್ತದೆ. ಜೊತೆಗೆ ೨೯೯ಮಿ.ಗ್ರಾಂ. ಪೊಟಾಸಿಯಮ್, ೮೨ಮಿ.ಗ್ರಾಂ. ಸುಣ್ಣ, ೬೧ಮಿ.ಗ್ರಾಂ.ರಂಜಕ, ೫೭ಮಿ.ಗ್ರಾಂ.ಮೆಗ್ನೀಸಿಯಮ್ ಅಂಶಗಳೂ ದೊರೆಯುತ್ತವೆ. ನಿತ್ಯದ ಆಹಾರದಲ್ಲಿ ಬೆಂಡೆಯ ಬಳಕೆಯಿಂದ ಹಲವಾರು ಆರೋಗ್ಯ ಲಾಭಗಳಿದ್ದು ಪ್ರಮುಖವಾಗಿ, ರಕ್ತದಲ್ಲಿನ ಕೋಲೆಸ್ಟಿರಾಲ್ ಅಂಶದ ನಿಯಂತ್ರಣ, ನಾರಿನಂಶದಿಂದಾಗಿ ಸುಲಭವಾಗಿ ಆಹಾರ ಪಚನವಾಗುವಿಕೆ, ಅಧಿಕ ಸುಣ್ಣದಂಶದಿಂದಾಗಿ ಮೂಳೆಗಳ ಬೆಳವಣಿಗೆಗೆ ಇದು ಸಹಕಾರಿ. ಬೆಂಡೆಯ ಸೇವನೆಯಿಂದ ಕಣ್ಣಿನ ದೃಷ್ಟಿಯ ಹೆಚ್ಚಳ ಹಾಗು ದೇಹದ ರೋಗನಿರೋದಕ ಶಕ್ತಿಯ ವೃಧ್ಧಿಯಾಗುತ್ತದೆ.ಸುಮಾರು ೬-೬೧/೨ ಅಡಿ ಎತ್ತರಕ್ಕೆ ಬೆಳೆಯುವ ಬೆಂಡೆಗಿಡ ೧೦-೨೦ಸೆ. ಮೀ. ಉದ್ದದ , ೫-೭ ಹಾಲೆಗಳ ದೊಡ್ಡಗಾತ್ರದ ಎಲೆಗಳನ್ನು ಹೊಂದಿರುತ್ತದೆ. ಹೂವುಗಳು ೪-೮ ಸೆ. ಮೀ. ವ್ಯಾಸ ಹೊಂದಿದ್ದು ಬಿಳಿ/ಹಳದಿ ವರ್ಣದ್ದಾಗಿರುತ್ತವೆ. ಕಾಯಿಗಳು ೧೮ಸೆ. ಮೀ.ವರೆಗೂ ಉದ್ದವಾಗಿದ್ದು ಪಂಚ ಕೋನಾಕೃತಿಯಲ್ಲಿದ್ದು ಹಲವಾರು ಬೀಜಗಳನ್ನು ಹೊಂದಿರುತ್ತವೆ. ಈ ಬೆಳೆ ಅಧಿಕ ಉಷ್ಣತೆ ಸಹಿಸುವ ಹಾಗು ಬರನಿರೋಧಕ ಶಕ್ತಿ ಹೊಂದಿದೆ. ಸ್ವಕೀಯ ಪರಾಗಸ್ಪರ್ಷದಿಂದ ಕಾಯಿಕಚ್ಚುವ ಗುಣದ ಬೆಂಡೆಯನ್ನು ಬೀಜದಿಂದ ಅಭಿವೃದ್ದಿಮಾಡುತ್ತಾರೆ. ಬೀಜಕ್ಕಾಗಿ ಮೊದಲ ಎರೆಡು ಕೊಯ್ಲಿನ ಕಾಯಿಗಳನ್ನು ಬಿಟ್ಟು ನಂತರದ ಕೊಯ್ಲಿನ ಬಲಿತ ಕಾಯಿಗಳನ್ನು ಬಳಸಬಹುದು. ಕಾಯಿಗಳನ್ನು ೧-೨ದಿನ ಬಿಸಿಲಿನಲ್ಲಿ ಒಣಗಿಸಿ ಬೀಜಗಳನ್ನು ಬೇರ್ಪಡಿಸಬೇಕು. ಬೀಜಗಳಲ್ಲಿರುವ ಟೊಳ್ಳು ಬೀಜಗಳನ್ನು ನಿರಿನಲ್ಲಿ ಮುಳಗಿಸುವುದರಿಂದ ಬೇರ್ಪಡಿಸಬಹುದು. ಅರಿಸಿದ ಬಿಜಗಳನ್ನು ಶೇ.೮ರಷ್ಟು ತೇವಾಂಶ ಇರುವಂತೆ ಒಣಗಿಸಿ ನಂತರ ಬಿತ್ತನೆಗೆ ಬಳಸಬೆಕು. ಉತ್ತಮ ಮೊಳಕೆ ಬರುವಂತೆ ಮಾಡಲು ಬೆಂಡೆ ಬೀಜಗಳನ್ನು ಶೇ.೨ರ ಕಾರ್ಬೆಂಡೈಜಿಮ್ ದ್ರಾವಣದಲ್ಲಿ ಆರು ಗಂಟೆಗಳಕಾಲ ನೆನಸಿ ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಸಿದ್ದಗೊಳಿಸಿದ ಭೂಮಿಯಲ್ಲಿ ೬೦ಸೆ.ಮೀ. ಅಂತರದ ಸಾಲಿನಲ್ಲಿ ೩೦ ಸೆ. ಮೀ. ಅಂತರದಲ್ಲಿ ಬಿತ್ತನೆ ಮಾಡಲು ಪ್ರತಿ ಎಕರೆ ಪ್ರದೇಶಕ್ಕೆ ಸುಮಾರು ೬೦೦ಗ್ರಾಂ. ಉಪಚರಿಸಿದ ಬಿತ್ತನೆ ಬೀಜ ಬೇಕಾಗುತ್ತದೆ