ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಮೌಲ್ಯವರ್ಧನೆ

ಹಲಸಿನ ಬೀಜದ ಗುಲಾಬ್ ಜಾಮೂನ್

ಡಾ. ಅಕ್ಕಮಹಾದೇವಿ ಡಿ. ಅಗಸಿಮನಿ
9448933679
123

ಬೇಯಿಸಿದ ಹಲಸಿನ ಬೀಜದ , ಪೇಸ್ಟ್-೨ ಲೋಟ, ಮೈದಾ ಹಿಟ್ಟು - ೧ ಲೋಟ, ಖೋವಾ - ೧ ಲೋಟ, ಸಕ್ಕರೆ-೧ ೧/೨ಲೋಟ, ಏಲಕ್ಕಿ - ೧ ಟೀ ಚಮಚ, ಹಾಲಿನ ಪೌಡರ್- ೧ ಲೋಟ, ಅಡುಗೆ ಸೋಡಾ – ಚಿಟಿಕೆ, ಎಣ್ಣೆ

ಮಾಡುವ ವಿಧಾನ : ಹಲಸಿನ ಬೀಜದ ಪೇಸ್ಟಿಗೆ, ಮೈದಾ ಹಿಟ್ಟು, ಖೋವಾ, ಹಾಲಿನ ಪೌಡರ್, ಸೋಡಾ ಹಾಕಿ ಸರಿಯಾಗಿ ಮಿಶ್ರಣ ಮಾಡಬೇಕು. ನಂತರ ಸಣ್ಣ ಸಣ್ಣ ಉಂಡೆ ಮಾಡಿ ಎಣ್ಣೆ ಸರಿಯಾಗಿ ಬಿಸಿಯಾದ ಮೇಲೆ ಮಂದ ಉರಿಯಲ್ಲಿ ಕರಿಯಬೇಕು. ಇನ್ನೊಂದೆಡೆ ಸಕ್ಕರೆಗೆ ನೀರನ್ನು ಸೇರಿಸಿ ಒಂದೆಳೆ ಪಾಕ ಬರುವವರೆಗೂ ಕುದಿಸಬೇಕು. ಕರಿದ ಉಂಡೆಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ನೆನೆಯಲು ಬಿಡಬೇಕು. ಸ್ವಲ್ಪ ಹೊತ್ತು ನೆನೆದ ಮೇಲೆ ಜಾಮೂನ್ ತಿನ್ನಲು ಸಿದ್ಧವಾಗುತ್ತದೆ