ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಬಾಳೆಯಲ್ಲಿ ಪೊಟ್ಯಾಷಿಯಂ ಕೊರತೆ

ಹೆಚ್. ಎಂ. ಸಣ್ಣಗೌಡ
9964204571
1

ಪೋಟ್ಯಾಷಿಯಂ ಕೊರತೆಯ ಚಿಹ್ನೆಗಳು

 • ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಮೊದಲು ಸಸ್ಯದ ಕೆಳಭಾಗದ ಎಲೆಗಳ ಅಂಚುಗಳು ಹಳದಿಯಾಗುತ್ತದೆ
 • ಕೋರತೆ ತೀವ್ರಗೊಂಡಾಗ ಪೂರ್ತಿ ಎಲೆ ಹಳದಿಯಾಗಿ ಒಣಗಿಹೋಗುತ್ತದೆ

  ಕೆಲವು ಬೆಳೆಗಳಲ್ಲಿ ಕಾಂಡ ಗಟ್ಟಿಯಾಗಿ ಬೆಳೆಯದೆ ಬೆಳೆಯು ನೆಲಕ್ಕೆ ಉರುಳಿ ಬೀಳುತ್ತದೆ

  ತೆನೆ/ಗೊನೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ

  ಹಣ್ಣುಗಳಲ್ಲಿ ಯೋಗ್ಯ ಬಣ್ಣ ರುಚಿ ಮತ್ತು ಪರಿಮಳ ಇರುವುದಿಲ್ಲ ಮತ್ತು ಸಂಗ್ರಹಣ ಶಕ್ತಿ ಕಡಿಮೆಯಾಗುತ್ತದೆ

  ನಿವಾರಣೆ

  ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಪೊಟ್ಯಾಷ್ಯುಕ್ತ ಗೊಬ್ಬರಗಳನ್ನು ಒದಗಿಸುವುದು

  ಪೊಟ್ಯಾಷ್ಯುಕ್ತ ನೀರಿನಲ್ಲಿ ಕರಗುವ ಗೊಬ್ಬರಗಳ (೧೩:೦೦:೪೫, ೦೦:೩೨:೫೪, ೧೯:೧೯:೧೯) ಸಿಂಪರಣೆ