ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಕೀಟ ಪೀಡೆಗಳ ಜಾಲ ಪತ್ತೆಗೆ ಪರಿಸರ ಸ್ನೇಹಿ ಮೋಹಕ ಬಲೆಗಳು

ಮಂಜುನಾಥ. ಹೆಚ್.ಎ.
೯೬೮೬೨೯೪೪೯೩
1

ಸರಳ ಹಾಗೂ ಶೀಘ್ರವಾಗಿ ಬೆಳೆಗಳಲ್ಲಿ ಕೀಟಗಳ ಚಟುವಟಿಕೆಯ ಪತ್ತೆಗೆ ಮೋಹಕ ಬಲೆಗಳು ಪ್ರಕೃತಿಯಲ್ಲಿ ಗಂಡು/ ಹೆಣ್ಣು ಕೀಟವು ಅದೇ ಜಾತಿಯ ಹೆಣ್ಣು/ ಗಂಡು ಕೀಟವನ್ನು ಆಕರ್ಷಿಸಲು ರಾಸಾಯನಿಕ ವಸ್ತುಗಳನ್ನು ಬಿಡುತ್ತವೆ. ಇದನ್ನು ಮೋಹಕ ವಸ್ತು ಅಥವಾ ಲಿಂಗಾಕರ್ಷಕ ವಸ್ತು (ಸೆಕ್ಸ್ ಫೆರೋಮೋನ್) ಎಂದು ಕರೆಯುತ್ತಾರೆ. ಬಹುತೇಕ ಜಾತಿಯ ಕೀಟಗಳಲ್ಲಿ ಅದರಲ್ಲೂ ಪತಂಗಗಳಲ್ಲಿ ಹೆಣ್ಣು ಕೀಟಗಳು, ಗಂಡು ಕೀಟಗಳನ್ನು ಆಕರ್ಷಿಸಿ ಕೊಡಲು ರಾಸಾಯನಿಕ ವಸ್ತುವನ್ನು ಬಿಡುತ್ತವೆ. ಇಂತಹ ರಾಸಾಯನಿಕ ವಸ್ತುಗಳನ್ನು ಪ್ರಯೋಗ ಶಾಲೆಗಳಲ್ಲಿ ಕೃತಕವಾಗಿ ತಯಾರಿಸಿ, ಇವುಗಳನ್ನು ಆಮಿಶ (ಲೂರ್)ಗಳನ್ನಾಗಿ ಕೊಡಲಾಗುತ್ತದೆ. ಇದೊಂದು ಸಮಗ್ರ ಕೀಟ ನಿಯಂತ್ರಣಾ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ಮುಖ್ಯ ಕ್ರಮ. ಆಯಾ ಜಾತಿಯ ಕೀಟಗಳಿಗನುಗುಣವಾಗಿ ಈ ಆಮಿಶಗಳನ್ನು ಮೋಹಕ ಬಲೆಗಳಲ್ಲಿ ಸಿಲುಕಿಸಿ, ಹೊಲದಲ್ಲಿ ಬಳಸಿದಾಗ ಆಮಿಶದಲ್ಲಿರುವ ರಾಸಾಯನಿಕ ವಸ್ತುವು ಗಾಳಿಯಲ್ಲಿ ಆವಿಯಾಗಿ ಪಸರಿಸಿ ಆಯಾ ಜಾತಿಯ ಗಂಡು ಪತಂಗಗಳನ್ನು ಒಂದು ನಿರ್ದಿಷ್ಟ ಕಾಲದವರೆಗೆ (೨ ರಿಂದ ೪ ವಾರಗಳು) ಆಕರ್ಷಿಸಿ ಸೆರೆಹಿಡಿಯುತ್ತವೆ.

ಮೋಹಕ ಬಲೆಗಳನ್ನು ಬಳಸುವ ವಿಧಾನ: ಇಂತಹ ಮೋಹಕ ಬಲೆಗಳನ್ನು ಒಂದು ಎಕರೆಗೆ ಕನಿಷ್ಠ ಎರಡರಂತೆ ಪ್ರತಿ ಜಾತಿಯ ಕೀಟಗಳ ಪತ್ತೆಗಾಗಿ ಹಾಗೂ ಹೆಚ್ಚು ಬಲೆಗಳನ್ನು ಹೆಚ್ಚು ಹೆಚ್ಚು ಪತಂಗಗಳನ್ನು ಸೆರೆ ಹಿಡಿಯಲು ಅಳವಡಿಸಿ, ಮೋಹಕ ಬಲೆಯ ಆಮಿಶವನ್ನು ಪ್ರತಿ ಎರಡು ವಾರಗಳಿಗೊಮ್ಮೆ ಬದಲಿಸಿ, ಈ ಆಮಿಶವನ್ನು ಒಂದೊಂದು ಪ್ಯಾಕೆಟ್ನಲ್ಲೂ ಒಂದೊಂದರಂತೆ ಹಾಕಿ ಪ್ಯಾಕ್ ಮಾಡಲಾಗಿರುತ್ತದೆ ಹಾಗೂ ಇದನ್ನು ಉಪಯೋಗಿಸದೆ ಇದ್ದಾಗ, ತಂಪಾದ ವಾತಾವರಣದಲ್ಲಿ (ರೆಫ್ರಿಜರೇಷನ್ ವಾತಾವರಣ) ದಾಸ್ತಾನು ಇಡಬೇಕು. ಈ ವಸ್ತುಗಳು ಹೆಲಿಕೋವರ್ಪ ಆರ್ಮಿಜೆರ (ಇದು ಹತ್ತಿ, ತೊಗರಿ, ಕಡಲೆ, ಟೊಮೊಟೊ, ಬೆಂಡೆ, ಸೂಂiiಕಾಂತಿ, ಶೇಂಗಾ, ಮೆಣಸಿನಕಾಯಿ, ಜೋಳ, ಮುಸುಕಿನ ಜೋಳ) ಇತ್ಯಾದಿ ಬೆಳೆಗಳ ಮೇಲೆ ದಾಳಿ ಮಾಡುವ ಕೀಟ. ಸ್ಪೋಡೋಪ್ಟೆರ ಲಿಟುರ (ಇದು ತಂಬಾಕು, ಶೇಂಗಾ, ಸೂರ್ಯಕಾಂತಿ, ಹತ್ತಿ, ಕೋಸು, ಬೀಟ್ರೋಟ್, ಹೂಕೋಸು ಇತ್ಯಾದಿ ಬೆಳೆಗಳ ಮೇಲೆ ದಾಳಿ ಮಾಡುವ ಕೀಟ) ಪೆಕ್ಟಿನೋಪೋರ ಗಾಸಿಪಿಯೆಲ್ಲಾ (ದತ್ತ), ಈರಿಯಾಸ್ ವಿಟ್ಟೆಲ್ಲಾ (ಹತ್ತಿ), ಲೂಸಿನೋಡಸ್ ಆರ್ಬೋನಾಲಿಸ್ (ಬದನೆ), ಪ್ಲೂಟೆಲ್ಲಾ ಜೈರೋಸ್ಟೆಲ್ಲಾ (ಕೋಸು) ಹಾಗೂ ಸಿರ್ಫೊಫೇಗ ಇನ್ಸರ್ಟುಲಾಸ್ (ಭತ್ತ)ಗಳ ಪತ್ತೆಗಾಗಿ ದೊರೆಯುತ್ತದೆ.

ಉಪಯೋಗಗಳು: ಇದು ಉಪಯುಕ್ತ ಕೀಟಗಳು, ಇತರ ಜೀವಿಗಳು ಹಾಗೂ ಪರಿಸರದ ಮೇಲೆ ಯಾವುದೇ ಹಾನಿಕಾರಕ ಪರಿಣಾಮವನ್ನು ಬೀರುವುದಿಲ್ಲ. ಕೀಟಗಳ ಶೀಘ್ರ ಪತ್ತೆಗೆ ಸಹಾಯಕಾರಿ (ಪತಂಗದ ಹಂತದಲ್ಲಿರುವಾಗಲೇ). ನಿಖರವಾದ ಸಿಂಪರಣೆಯ ಸಮಯ ಸೂಚಕ. ಕೀಟನಾಶಕಗಳ ಬಳಕೆಯನ್ನು ಕಡಿಮೆಗೊಳಿಸುತ್ತದೆ. ಸರಳ ಹಾಗೂ ಕಡಿಮೆ ಖರ್ಚಿನಲ್ಲಿ ಕೀಟಗಳ ಚಟುವಟಿಕೆಯನ್ನು ಪತ್ತೆ ಮಾಡುವ ಉಪಕರಣ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ೧. ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾನಿಲಯಗಳು, ೨. ಬಯೋ ಪೆಸ್ಟ್ ಮ್ಯಾನೇಜ್ಮೆಂಟ್ ಪ್ರೈ.ಲಿ.ಬೆಂಗಳೂರು, ೩. ಪೆಸ್ಟ್ ಕಂಟ್ರೋಲ್ ಇಂಡಿಯಾ, ಬೆಂಗಳೂರು

5678