ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಪಂಜರದಲ್ಲಿ ಕುರುಡಿ ಮೀನು ಕೃಷಿ (Asian seabass Lates calcarifer)

ಶ್ರೀನಿವಾಸ್, ಹೆಚ್. ಹುಲಕೋಟಿ
೮೭೬೨೦ ೨೧೫೯೯
1234

ಪಂಜರಗಳ ನಿರ್ಮಾಣ ಮತ್ತು ಅನುಸ್ಥಾಪನೆ: ಪಂಜರದ ಅಳತೆ ೨.೫ ಘಿ ೨.೫ ಘಿ ೨ ಮೀ. ಅಥವಾ ೪ ಘಿ ೨.೫ ಘಿ ೨.೫ ಅಥವಾ ೬ ಘಿ ೨.೫ ಘಿ ೨.೫ ಈ ಅಳತೆಯ ಪಂಜರ ನಿರ್ಮಾಣಕ್ಕೆ, ಮೊದಲು ಜಿ.ಆಯ್. ಪೈಪ್ಗಳಿಂದ ಚೌಕಟ್ಟು ನಿರ್ಮಿಸಿಕೊಂಡು ಹೊರಗಡೆಯಿಂದ ನೆಟ್ಲಾನ್ ಮೂಲವಸ್ತುವಿನಿಂದ ತಯಾರಿಸಿದ ದೊಡ್ಡ ಕಣ್ಣಿನ (೩೦ ಮಿ.ಮಿ.) ಬಲೆಯನ್ನು ಪಂಜರದ ಮೇಲಿನ ಭಾಗವನ್ನು ಬಿಟ್ಟು ಚೌಕಟ್ಟಿನ ಉಳಿದ ನಾಲ್ಕೂ ಮಗ್ಗುಲುಗಳು ಮತ್ತು ತಳ ಭಾಗಕ್ಕೆ ಭದ್ರವಾಗಿ ಕಟ್ಟಿ ಪೆಟ್ಟಿಗೆ ರೂಪ ಕೊಟ್ಟು, ಅದರ ಒಳಗಡೆ ನೈಲಾನ್ ಬಲೆ ಹಾಕಬೇಕು. ಇದರಿಂದ ದೊಡ್ಡ ಮೀನುಗಳಾಗಲಿ ಅಥವಾ ಬೇರೆ ಯಾವುದೇ ಭಕ್ಷಕ ಮೀನುಗಳು ಒಳಗೆ ಬರದಂತೆ ಸಂಪೂರ್ಣ ರಕ್ಷಣೆ ದೊರೆಯುತ್ತದೆ ಮತ್ತು ಪಂಜರದ ಆಯತಾಕಾರವನ್ನು ಕಾಪಾಡುವಲ್ಲಿ ಸಹಾಯವಾಗುತ್ತದೆ. ನಂತರ ಪಿ.ವ್ಹಿ.ಸಿ. ಪೈಪಗಳು ಅಥವಾ ಖಾಲಿ ಡ್ರಮ್/ಡಬ್ಬಗಳನ್ನು ಕಟ್ಟಿದಲ್ಲಿ ಪಂಜರವು ತೇಲುವಂತೆ ಮಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ. ಪಂಜರದ ಕಾಲುಗಳ ಎತ್ತರ ಎರಡರಿಂದ ಮೂರು ಅಡಿ ಬಿಟ್ಟಿರಲಾಗುತ್ತದೆ. ಇದರಿಂದ ಪಂಜರದ ಕೆಳ ಭಾಗ ಕೆಸರಲ್ಲಿ ಅಥವಾ ನೀರಿನ ಕೆಳ ಭಾಗದಲ್ಲಿ ಕೂರದೇ ಅಂತರ ಕಾಯ್ದುಕೊಂಡು ಸರಿಯಾದ ನೀರಿನ ಹರಿವಿಗೆ ಮತ್ತು ತಿಂದುಳಿದ ಆಹಾರ ಮತ್ತು ಮೀನಿನ ಹಿಕ್ಕೆಗಳು ನೀರಿನೊಟ್ಟಿಗೆ ಹರಿದು ಹೋಗುತ್ತವೆ. ಇಲ್ಲವಾದಲ್ಲಿ ತಿಂದುಳಿದ ಆಹಾರ, ಮೀನಿನ ಹಿಕ್ಕೆ ಮತ್ತು ಕೆಳಗಿರುವ ಕೆಸರು ಸೇರಿ ನೀರಿನ ಕಲುಷಿತಕ್ಕೆ ದಾರಿಯಾಗುವುದಲ್ಲದೇ ಕರಗಿದ ಆಮ್ಲಜನಕದ ಕೊರತೆಯಾಗಿ ಮೀನುಗಳ ಸಾವಿಗೆ ದಾರಿಯಾಗುತ್ತದೆ ಮತ್ತು ರೋಗ ರುಜಿನಗಳು ಸಹ ಹುಟ್ಟಿಕೊಳ್ಳುತ್ತವೆ. ಪಂಜರಗಳಿಗೆ ನೀರಿನ ಒಳಹರಿವು ಅಧಿಕವಾದಾಗ ಅಥವಾ ಅಧಿಕವಿದ್ದಾಗ ನೀರಿನ ಹರಿವಿನೊಟ್ಟಿಗೆ ಪಂಜರಗಳು ಕೊಚ್ಚಿಕೊಂಡು ಹೋಗದಿರಲು ಮರಳಿನ ಚೀಲಗಳನ್ನು ಆಸರೆಯಾಗಿ ಪಂಜರದ ಕೆಳಭಾಗದಲ್ಲಿ ಲಂಗರುಗಳಾಗಿ ಕಟ್ಟಿ ಹಿಡಿದಿಡಲಾಗುತ್ತದೆ. ನೀರಿನ ಹರಿವಿಗೆ ತಕ್ಕಂತೆ ಮರಳಿನ ಚೀಲದ ತೂಕವನ್ನು ಹೊಂದಾಣಿಕೆ ಮಾಡಬೇಕು. ಇದಕ್ಕೆ ಕಟ್ಟಿದ ಹಗ್ಗದ ಉದ್ದ ನೀರಿನ ಮಟ್ಟ ಇಳಿಮುಖವಾದಾಗಲೂ ಪಂಜರ ತೇಲುವಷ್ಟಿರಬೇಕು. ನೀರಿನ ಮಟ್ಟ ಪಂಜರದ ಎತ್ತರಕ್ಕಿಂತ ಜಾಸ್ತಿ ಇರಬೇಕು. ಎಲ್ಲಾ ಕಾಲದಲ್ಲೂ ಪಂಜರ ತೇಲುವಷ್ಟು ಆಳದ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಹರಿಯುವ ನೀರಿನ ಅಲೆಗಳಿಗೆ ಸಮನಾಂತರವಾಗಿ ಪಂಜರಗಳನ್ನು ಇಡಬೇಕು. ಇನ್ನು ಅಲೆಗಳ ಅಬ್ಬರವಿಲ್ಲದ ನೀರಿನ ಹರಿವಿನ ವೇಗ ತುಂಬಾ ಕಡಿಮೆ ಇದ್ದಲ್ಲಿ ಅಡ್ಡವಾಗಿ ಇಡಬೇಕು. ಆಗಾಗ ಪಂಜರವನ್ನು ಒಳಗು ಮತ್ತು ಹೊರಗು ಸ್ವಚ್ಚಗೊಳಿಸುತ್ತಿರಬೇಕು ಇದರಿಂದ ಪಂಜರಕ್ಕೆ ಮೃದ್ವಂಗಿಗಳು ಅಂಟಿಕೊಳ್ಳುವುದು ತಪ್ಪಿ ಪಂಜರದಲ್ಲಿ ನೀರಿನ ಹರಿವಿಗೆ ದಾರಿ ಮಾಡಿಕೊಟ್ಟು ಕರಗಿದ ಆಮ್ಲಜನಕದ ಕೊರತೆಯಾಗುವುದಿಲ್ಲ ಮತ್ತು ತಿಂದುಳಿದ ಆಹಾರ ಮತ್ತು ಮೀನಿನ ಹಿಕ್ಕೆಗಳಿಂದ ನೀರು ಕಲುಷಿತವಾಗದೇ ಸ್ವಚ್ಚವಾಗಿರುತ್ತದೆ. ಇಲ್ಲವಾದಲ್ಲಿ ರೋಗ ರುಜಿನಗಳಿಗೆ ದಾರಿಯಾಗುತ್ತದೆ.

67

ಸಾಕಣೆಗೆ ಸೂಕ್ತ ಜಾಗ: ಪಂಜರದ ಯಶಸ್ವಿ ಅನುಸ್ಥಾಪನೆಗೆ ಜಾಗದ ಆಯ್ಕೆ ಬಹು ಮುಖ್ಯವಾದ ಅಂಶವಾಗಿರುತ್ತದೆ. ದೋಣಿಗಳ ಮತ್ತು ಹಡಗುಗಳ ಸಂಚಾರ ಮತ್ತು ಅವುಗಳಿಂದ ಸೋರುವ ತೈಲ ಮುಕ್ತ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಸುತ್ತ ಮುತ್ತ ಯಾವುದೇ ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆಯಾಗುತ್ತಿರಬಾರದು. ಕಲುಷಿತ ವಾತಾವರಣ ಮುಕ್ತವಾಗಿರಬೇಕು. ಅಬ್ಬರದ ಅಲೆಗಳಿರುವ ಜಾಗವನ್ನು ಆಯ್ಕೆ ಮಾಡಬಾರದು. ನೀರಿನ ಆಳ ಕಡಿಮೆ ಎಂದರು ೩-೫ ಮೀಟರ್ ಇರಬೇಕು ಮತ್ತು ಮರಳು ಮಿಶ್ರಿತ ಜೇಡಿ ಮಣ್ಣಿನಿಂದ ಕೂಡಿದ ಜಾಗ ಸೂಕ್ತವಾಗಿರುತ್ತದೆ. ಕೆಸರಿನಿಂದ ಕೂಡಿದ ಮತ್ತು ರಾಡಿ ಇರುವ ಅಥವಾ ರಾಡಿಯಾಗುವ ಜಾಗಗಳನ್ನು ಆಯ್ಕೆ ಮಾಡಬಾರದು. ನೀರಿನ ಒಳ ಹರಿವು ನಿರಂತರವಾಗಿದ್ದಲ್ಲಿ ಕರಗಿದ ಆಮ್ಲಜನಕ ಯೆಥೇಚ್ಚವಾಗಿ ದೊರಕುವುದಲ್ಲದೆ ಯಾವುದೇ ತ್ಯಾಜ್ಯ ಪಂಜರದಲ್ಲಿ ಉಳಿಯಲು ಬಿಡುವದಿಲ್ಲ. ಅಲೆಗಳ ಅಬ್ಬರ ಜಾಸ್ತೀ ಇದ್ದಲ್ಲಿ ಪಂಜರವನ್ನು ನಿಲ್ಲಿಸುವುದು ಕಷ್ಟವಾಗುತ್ತದೆ, ಕೊಚ್ಚಿಕೊಂಡು ಹೋಗುವ ಸನ್ನಿವೇಶಗಳು ಜಾಸ್ತಿ. ನೀರಿನ ಹರಿವು ಮೀನಿನ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ ಯಾಕೆಂದರೆ ಈಜಲು ಹೆಚ್ಚು ಶಕ್ತಿಯ ವ್ಯಯವಾಗಿ ಒತ್ತಡದ ವಾತಾವರಣ ನಿರ್ಮಾಣವಾಗುತ್ತದೆ. ನೀರಿನ ಪ್ರವಾಹದ ವೇಗ ೫೦ ಸೆಂ.ಮೀ./ಸೆಕೆಂಡಿಗೆ ೧೦೦ ಸೆಂ.ಮೀ./ಸೆಕೆಂಡಿಗೆ ದಾಟಬಾರದು ಮತ್ತು ೧೦ ಸೆಂ.ಮೀ./ಸೆಕೆಂಡಿಗಿಂತ ಕಡಿಮೆ ಕೂಡ ಇರಬಾರದು. ಆಯ್ಕೆ ಮಾಡಿಕೊಂಡ ಜಾಗಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇರಬೇಕು. ಇಷ್ಟೆಲ್ಲಾ ಲಾಭಗಳ ಮಧ್ಯ ಮೀನು ಮರಿ ತರುವುದು ಅದಕ್ಕೆ ಒದಗಿಸುವ ಆಹಾರ ಹೊಂದಿಸುವುದು ಕಳ್ಳಕಾಕರ ಭಯ ಇದ್ದೇ ಇದೆ. ಆದರೆ ಸರ್ಕಾರ ಈ ತಂತ್ರಜ್ಞಾನ ಗುರುತಿಸಿದಲ್ಲಿ ವಿಮೆ ಮಾಡಿಸಲು ಹಾಗೂ ಹಣಕಾಸಿನ ನೆರವಿಗೆ ಅನುಕೂಲವಾಗುತ್ತದೆ ಎಂಬುದು ಕೃಷಿಕರ ಅಭಿಮತ.