ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಕೆಂಪು ಎಲೆಕೋಸು

ಗಜಾನನ ಗುಂಡೆವಾಡಿ
೭೦೬೫೧೫೭೬೯೩
1

ಕೆಂಪು ಎಲೆಕೋಸು ಬ್ರಾಸಿಕೇಸೀ ಕುಟುಂಬದ (ಬ್ರಾಸೀಕಾ ಆಲರೇಸಿಯಾ ತಳಿ ಕ್ಯಾಪಿಟೇಟಾ ರುಬ್ರಾ) ಒಂದು ವಿಶಿಷ್ಟ ತರಕಾರಿ ಬೆಳೆಯಾಗಿ ಜನಪ್ರಿಯಗೊಂಡಿದೆ. ಈ ತರಕಾರಿಯೂ ಚಳಿಗಾಲದಲ್ಲಿ ಬೆಳೆಯಬಲ್ಲ ಬೆಳೆಯಾಗಿದ್ದು, ಹೇರಳ ಪ್ರಮಾಣದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಗ್ಲುಕೋಸಿನೋಲೇಟ ಮತ್ತು ಆಂಥೋಸೈನಿಡಿನ್ಗಳನ್ನು ಹೊಂದಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಅನುಕೂಲವಾಗಿರುತ್ತದೆ. ಆರೋಗ್ಯದ ಪ್ರಯೋಜನಗಳು: ೧. ಈ ತರಕಾರಿಯು ಹೇರಳವಾಗಿ ಗ್ಲುಕೋಸಿನೋಲೆಟ್ಗಳನ್ನು ಹೊಂದಿರುವುದರಿಂದ ಕೊಲನ್, ಗುದನಾಳ ಮತ್ತು ಥೈರಾಯ್ಡ್ ಕ್ಯಾನ್ಸರ್ನಿಂದ ಮನುಷ್ಯನನ್ನು ರಕ್ಷಿಸುತ್ತದೆ. ೨. ಕೆಂಪು ಎಲೆ ಕೋಸು ಆಂಥೋಸಿಯಾನಿನ್ಸ್ ಹೊಂದಿರುವುದರಿಂದ ಇದು ಉತ್ಕರ್ಷಣ ನಿರೋಧಕವಾಗಿ (ಆಂಟೀಯಾಕ್ಸಿಡಂಟ್)ಕಾರ್ಯ ನಿರ್ವಹಿಸುತ್ತದೆ. ೩. ಇದು ಮಧುಮೇಹವನ್ನು ನಿವಾರಿಸಲು ಅನುಕೂಲಕರವಾಗಿದೆ. ೪. ನಿಯಮಿತ ಸೇವನೆ ಮಾಡುವುದರಿಂದ ಮನುಷ್ಯನ ವಯೋಮಿತಿ ವೃದ್ದಿಯಾಗುತ್ತದೆ.

ಬಿತ್ತನೆ ಕಾಲ: ಈ ಬೆಳೆಯನ್ನು ಜೂನ್-ಜುಲೈ ಅಥವಾ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಬಹುದು. ಬೇಸಿಗೆ ಕಾಲದಲ್ಲಿ ಬೆಳೆದರೆ ಗಡ್ಡೆಯು ತನ್ನ ಗುಣಮಟ್ಟ ಹಾಗೂ ಸುವಾಸನೆಯನ್ನು ಕಳೆದುಕೊಳ್ಳುತ್ತದೆ. ಬಿತ್ತನೆ ಮಾಡಲು ಬೇಕಾಗುವ ಬೀಜದ ಪ್ರಮಾಣ ಪ್ರತಿ ಹೆಕ್ಟೇರ್ಗೆ ೮೦೦-೧೦೦೦ ಗ್ರಾಂ.ಸಸಿ ಮಡಿ ತಯಾರಿಕೆ ಮತ್ತು ನಾಟಿ ಮಾಡುವುದು: ಕೆಂಪು ಎಲೆಕೋಸು ಸಸಿ ತಯಾರಿಸಲು ೮೦೦-೧೦೦೦ ಗ್ರಾಂ ಬೀಜವನ್ನು ೭.೫ ಮೀ. ಘಿ ೧.೨ ಮೀ. ಘಿ ೧೦ ಸೇ.ಮೀ. ಸಸಿಮಡಿಯನ್ನು ತಯಾರಿಸಿ ಬೀಜವನ್ನು ಬಿತ್ತನೆ ಮಾಡಬೇಕು. ಸಸಿ ಮಡಿಯಲ್ಲಿ ೨೦-೨೫ ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ಪ್ರತಿ ಸಸಿಮಡಿಗೆ ೧೫-೨೦ ಗ್ರಾಂ ರಂಜಕ ಮತ್ತು ೪೫-೬೦ ಗ್ರಾಂ ಪೊಟ್ಯಾಷ್ ರಸಾಯನಿಕ ಗೊಬ್ಬರವನ್ನು ಮಿಶ್ರಣ ಮಾಡಬೇಕು. ನಾಟಿ ಮಾಡಿದ ಒಂದು ತಿಂಗಳ ನಂತರ ಬೆಳೆದ ಸಸಿಗಳನ್ನು ಮುಖ್ಯ ಭೂಮಿಗೆ ವರ್ಗಾಯಿಸಬೇಕು

4

ಕೊಯ್ಲು: ಎಲೆಕೋಸು ಗೆಡ್ಡೆಯು ದೃಢ ಮತ್ತು ಕೋಮಲವಾಗಿರುವ ಸಮಯದಲ್ಲಿ ಕಟಾವು ಮಾಡಬೇಕು. ಗೆಡ್ಡೆಯ ಕಟಾವನ್ನು ವಿಳಂಬ ಮಾಡುವುದರಿಂದ ಗೆಡ್ಡೆಯು ಬಿರುಕು ಬಿಟ್ಟು, ವಿಭಜನೆಗೊಳ್ಳುತ್ತದೆ. ಕೊಯ್ಲು ಮಾಡುವಾಗ ಗೆಡ್ಡೆಯನ್ನು ಕೈಯಲ್ಲಿ ಹಿಡಿದು ಸಸ್ಯವನ್ನು ಬಾಗಿಸಿ ಕೆಲವು ಹೊದಿಕೆ ಎಲೆಗಳ ಸಮೇತ ಗೆಡ್ಡೆಯನ್ನು ಕತ್ತರಿಸಬೇಕು. ಕತ್ತರಿಸಿದ ಗೆಡ್ಡೆಯನ್ನು ತಂಪಾದ ಮರದ ಕೆಳಗೆ ಶೇಖರಿಸಿಡಬೇಕು, ಅಥವಾ ಪ್ಲಾಸ್ಟಿಕ್ಕಿನಿಂದ ನೇಯಲಾಗಿರುವ ಚೀಲದಲ್ಲಿ ತುಂಬಿ ಮಾರಾಟ ಮಾಡಲು ಕಳುಹಿಸಬೇಕು.