ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ವನೌಷಧಿ-ತೆಂಗಿನಕಾಯಿ

-

ಇದು ಗುರುವೂ, ಸ್ನಿಗ್ಧವೂ, ಮಧುರವೂ, ಶೀತವೀರ್ಯವೂ, ವಿಪಾಕದಲ್ಲಿ ಮಧುರವೂ, ವಾತಪಿತ್ತಶಾಮಕವೂ, ಅನುಲೋಮನವೂ, ಸಂಕೋಚಕವೂ, ಹೃದ್ಯವೂ, ಬಸ್ತಿಶೋಧಕವೂ, ಬಲ್ಯವೂ, ಪೌಷ್ಟಿಕವೂ, ಕಫಕಾರಕವೂ, ಶೂಲ ಪ್ರಶಮನವೂ ಮತ್ತು ಶೋಥ, ತೃಷಾ, ದಾಹ, ರಕ್ತದೋಷ, ಕ್ಷತಕ್ಷಯ, ಜ್ವರಾದಿಗಳ ನಿವಾರಕವೂ ಆಗಿದೆ. ತೆಂಗಿನ ಎಳೆನೀರಿನ(ಎಳೆಯಕಾಯಿ) ಜಲವು ದಾಹಶಾಮಕವೂ, ಕಾಂತಿದಾಯಕವೂ, ರೇಚಕವೂ, ಶೀತಲವೂ, ಅಗ್ನಿದೀಪಕವೂ, ರಕ್ತಶೋಧಕವೂ, ಹಿಕ್ಕಾನಿವಾರಕವೂ, ತೂಷ್ಣಾನಿಗ್ರಹಣವೂ, ಪೈತ್ತಿಕವಿಕಾರ, ಮೂತ್ರಕೃಚ್ಛ್ರ, ಮೂತ್ರಗತವರ್ಣವಿಕಾರ, ವಮನ, ಮೂರ್ಛಾ, ಪಿತ್ತಜ್ವರ, ವಿಷಮಜ್ವರ ಮೊದಲಾದವುಗಳಲ್ಲಿ ಬಹಳ ಪ್ರಯೋಜನಕಾರಿಯೂ ಆಗಿದೆ. ತೆಂಗಿನ ಬೇರು, ಗರಿ, ಕಾಯಿ, ಎಳೆನೀರು, ಎಳೆಯಹೀಚು, ಹೊಂಬಾಳೆ, ಚಿಪ್ಪು,ಸಿಪ್ಪೆ ಹೀಗೆ ಪ್ರತಿಯೊಂದೂ ಔಷಧೋಪಯುಕ್ತ ದ್ರವ್ಯಗಳಾಗಿವೆಯಲ್ಲದೆ ಗೃಹೋಪಯುಕ್ತವಾದ ವಸ್ತುಗಳೂ ಆಗಿವೆ, ಆದುದರಿಂದಲೇ ಇದನ್ನು ‘ಕಲ್ಪವೃಕ್ಷ’ ಎಂದು ಕರೆದರು. ತೆಂಗಿನಮರ ಒಂದರ ವಿವಿಧ ಭಾಗಗಳ ಔಷಧೋಪಯುಕ್ತತೆಯ ವಿಚಾರವಾಗಿ ಒಂದೊಂದು ಗ್ರಂಥವನ್ನೇ ಬರೆಯಬಹುದು; ಆದರೆ ಇಲ್ಲೆಲ್ಲ ಕೊಟ್ಟಿರುವುದು ಸೂಕ್ಷ್ಮಾತಿ ಸೂಕ್ಷ್ಮ ಪರಿಚಯಗಳನ್ನು ಮಾತ್ರವೆಂಬುದನ್ನು ಮರೆಯಬಾರದು.

ಕನ್ನಡ/ಸಂಸ್ಕೃತ/ಹಿಂದಿ/ತಮಿಳು/ತೆಲುಗು/ಇಂಗ್ಲೀಷ್

ತೆಂಗು/ನಾರಿಕೇಲ, ಲಾಂಗಲೀ,/ನರಿಯಲ್, ಗಿರೀ/ತೇಂಗಾಯೀ/ಟೆಂಕಾಯಿಚೆಟ್ಟು/Coconut Palm