ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಆಪ್ ಲೋಕ-ಅರೆಕಾನಟ್ ಐಪಿಎಂ(Arecanut IPM)

image_
ರಘು ಸಂವೇಧನ್
9902191549
1

ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು ಇವರು ಅಡಿಕೆ ಬೆಳೆ ಬಗ್ಗೆ ಒಂದು ಆಪ್ ಅಭಿವೃದ್ಧಿಪಡಿಸಿದ್ದು ಗೂಗಲ್ ಪ್ಲೇಸ್ಟೋರ್ನಲ್ಲಿ “Arecanut IPM” ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆಪ್ನಲ್ಲಿ ಅಡಿಕೆ ಬೆಳೆಯಲ್ಲಿ ಅಳವಡಿಸಿಕೊಳ್ಳಬೇಕಾದ ಬೇಸಾಯ ಪದ್ಧತಿಗಳು ಅಂದರೆ ತಳಿಗಳ ಆಯ್ಕೆ, ಬೇಸಾಯ ಸಾಮಗ್ರಿ, ಭೂಮಿ ಸಿದ್ಧಗೊಳಿಸುವುದು, ಕೊಯ್ಲು ಮತ್ತು ಇಳುವರಿ, ಬೇಸಾಯ ಕ್ರಮಗಳು, ಅಂತರ ಬೇಸಾಯ, ಹೊದಿಕೆ/ಮುಚ್ಚು ಬೆಳೆಗಳು ಮತ್ತು ಸಂಸ್ಕರಣೆ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಇದು ಒಂದು ಭಾಗವಾದರೆ ಇನ್ನೊಂದು ಭಾಗದಲ್ಲಿ ಸಸ್ಯ ಸಂರಕ್ಷಣೆಗೆ ಅಳವಡಿಸಿಕೊಳ್ಳಬೇಕಾದ ಕ್ರಮಗಳು ಅಂದರೆ ಅಡಿಕೆಗೆ ಬಾಧಿಸುವಂತ ತಿಗಣೆಗಳು, ಶಲ್ಕ ಕೀಟಗಳು, ಗೊಣ್ಣೆಹುಳು, ಬಸವನಹುಳು, ನುಸಿ, ಹೊಂಬಾಳೆ ತಿನ್ನುವ ಹುಳುಗಳ ನಿಯಂತ್ರಣ ಮತ್ತು ಅಡಿಕೆಗೆ ಬರುವಂತಹ ಕೊಳೆ, ಸುಳಿಕೊಳೆ, ಎಲೆಚುಕ್ಕೆ ರೋಗ, ಅಣಬೆ ರೋಗ, ಹಳದಿ ಎಲೆ ರೋಗ, ಹಿಡಿಮುಂಡಿಗೆ ರೋಗ ಇವುಗಳ ನಿಯಂತ್ರಣಕ್ಕೆ ಅಳವಡಿಸಿಕೊಳ್ಳಬೇಕಾದ ಕ್ರಮಗಳನ್ನು ತಿಳಿಸಲಾಗಿದೆ. ಇದು ರೈತ ಸ್ನೇಹಿ ಕಿರುತಂತ್ರಾಂಶ ಆಗಿದ್ದು, ಸುಲಭವಾಗಿ ಇನ್ಸ್ಟಾಲ್ ಮಾಡಿಕೊಳ್ಳಬಹುದು

Download link: https://play.google.com/store/apps/details?id=com.kfs.arecanut&hl=en