ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಮಿಡಿತ-ತುಡಿತ

image_
ರಘು ಸಂವೇದನ್
9902191549

ನಾನು ನೇಗಿಲ ಮಿಡಿತ ಮಾಸಪತ್ರಿಕೆಯನ್ನು ನಿರಂತರವಾಗಿ ಓದಿಕೊಂಡು ಬಂದಿರುತ್ತೇನೆ. ಈ ಪತ್ರಿಕೆಯಲ್ಲಿ ಬರುವ ಅನೇಕ ರೈತರ ಸಮಗ್ರ ಕೃಷಿ ಪದ್ಧತಿಯನ್ನು ನೋಡಿ ನಾನು ಯಾಕೆ ಅಳವಡಿಸಿಕೊಳ್ಳಬಾರದೆಂದು ತಿಳಿದು ನಾನು ಸಹ ಜೇನು ಸಾಕಣೆ, ಮೀನು ಸಾಕಣೆ, ಕುರಿ ಸಾಕಣೆ, ಕೋಳಿ ಸಾಕಣೆ, ಹೈನುಗಾರಿಕೆ, ವಿವಿಧ ತೋಟಗಾರಿಕೆ ಬೆಳೆಗಳನ್ನು ಸಮಗ್ರ ಕೃಷಿ ಪದ್ಧತಿ ಅಡಿಯಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಇದರಿಂದ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ರಾಜ್ಯಮಟ್ಟ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ನನ್ನ ಎರಡು ಎಕರೆ ಜಮೀನಿನಲ್ಲಿ ಪ್ರತಿವರ್ಷವೂ ಸಮಗ್ರ ಕೃಷಿಯಿಂದ ೪-೫ ಲಕ್ಷ ನಿವ್ವಳ ಲಾಭ ಪಡೆಯುತ್ತಿದ್ದೇನೆ. ಅಲ್ಲದೆ ನಾನು ಆರ್ಥಿಕವಾಗಿ ಸದೃಢನಾಗಿದ್ದೇನೆ. ನಾನು ಅಷ್ಟಕ್ಕೇ ಸೀಮಿತವಾಗದೆ ನನ್ನ ನೆರೆಯ ರೈತರಿಗೆ ಮಾರ್ಗದರ್ಶನ ಹಾಗೂ ನನ್ನ ಅನುಭವವನ್ನು ಹಂಚಿಕೊಂಡು ಅವರೂ ಸಹ ನನ್ನಂತೆ ಬೆಳೆಯಲೂ ಪ್ರೇರೇಪಿಸಿದ್ದೇನೆ. ವಿಶೇಷವಾಗಿ ನೇಗಿಲ ಪತ್ರಿಕೆಯು ಕಾಲಕಾಲಕ್ಕೆ ರೈತರಿಗೆ ಅವಶ್ಯ ಮಾಹಿತಿಯನ್ನು ನೀಡುತ್ತಿದ್ದು, ರೈತರಿಗೆ ಹೆಚ್ಚು ಅನುಕೂಲವಾಗಿದೆ. ಅಲ್ಲದೆ ಕೀಟ ಹಾಗೂ ಪೀಡೆಗಳ ನಿರ್ವಹಣೆಯ ಚಿತ್ರ ಸಮೇತ ಮಾಹಿತಿ ನೀಡುತ್ತಿದ್ದೀರಿ. ಇದು ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ನಿಮ್ಮ ಪತ್ರಿಕೆ ಹೀಗೆ ನಿರಂತರವಾಗಿ ಪ್ರಕಟವಾಗಲಿ. ಶ್ರೀ ದುರ್ಗಪ್ಪ ಅಂಗಡಿ, ಶಿಕಾರಿಪುರ(ತಾ), ಶಿವಮೊಗ್ಗ ಜಿಲ್ಲೆ

ನಿಮ್ಮ ನೇಗಿಲ ಮಿಡಿತ ಪತ್ರಿಕೆಯಲ್ಲಿ ನಮ್ಮ ಪಂಜರ ಮೀನು ಕೃಷಿ ತಂತ್ರಜ್ಞಾನದ ಬಗ್ಗೆ ಛಾಯಾಚಿತ್ರ ಸಮೇತ ಪ್ರಕಟಗೊಂಡಿತ್ತು. ತದನಂತರ ನಮ್ಮ ಪಂಜರ ಮೀನು ಕೃಷಿ ತಂತ್ರಜ್ಞಾನದ ಮಾಹಿತಿ ಜನರಿಗೆ ತಲುಪಲು ಸಹಾಯಕವಾಯಿತು. ಈಗ ನಮ್ಮ ಈ ಸಾಧನೆಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದಾರೆ. ತಮಗೆ ಧನ್ಯವಾದಗಳು.ಇಂತಿ,ಪಂಜರ ಮೀನು ಕೃಷಿಕರು

ನಮಸ್ಕಾರ! ಅಚಾನಕ್ಕಾಗಿ ೨೦೧೭ರ ಆಗಸ್ಟ್ ತಿಂಗಳ ಸಂಚಿಕೆ ನೋಡಿದೆ. ಪತ್ರಿಕೆಯ ಮುದ್ರಣ, ಬಳಸಲಾದ ಕಾಗದ(ನ್ಯೂಸ್ ಪ್ರಿಂಟ್), ಉಪಯುಕ್ತ ಲೇಖನಗಳು ನನಗಿಷ್ಟವಾಯ್ತು. ಎಲ್ಲವನ್ನೂ ತುಲನೆ ಮಾಡಿದಾಗ ರೈತನಾಗಿ ನಾನೇಕೆ ’ನೇಗಿಲ ಮಿಡಿತ ಪತ್ರಿಕೆ’ ಚಂದಾದಾರನಾಗಬಾರದೆನಿಸಿತು ಹಂಪಿ ಹನುಮಂತಯ್ಯ, ಸಾವಯವ ಕೃಷಿಕ, ಗಂಗಾವತಿ, ಕೊಪ್ಪಳ

4