ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಹತ್ತಿಯಲ್ಲಿ ಮೆಗ್ನೇಷಿಯಂ ಕೊರತೆ

ಹೆಚ್. ಎಂ. ಸಣ್ಣಗೌಡ್ರ
9964204571
1

ಕೊರತೆಯ ಚಿಹ್ನೆಗಳು: 1. ಕೆಳಗಿನ ಎಲೆಗಳು ಕೆಂಪು ಅಥವಾ ಕಪ್ಪು ಮಿಶ್ರಿತ ಕೆಂಪು ಅಥವಾ ನೇರಳೆ ಬಣ್ಣಕ್ಕೆ ತಿರುಗುವುದು (ಹತ್ತಿ ಮತ್ತು ಮೆಕ್ಕೇಜೋಳ) 2. ಎಲೆಗಳು ತೆಳುವಾಗುವುದು ಮತ್ತು ಮೇಲ್ಭಾಗಕ್ಕೆ ಮುದುರಿಕೊಳ್ಳುತ್ತವೆ. 3. ಎಳೆ ಎಲೆಗಳು ಒಣಗಿ ಉದುರುತ್ತವೆ. 4. ಬಾಳೆಯಲ್ಲಿ ಎಲೆಗಳು ಕಾಂಡಕ್ಕೆ ಅಂಟಿಕೊಂಡಿರದೆ ಹೊರ ಚಾಚಿರುತ್ತವೆ. ನಿವಾರಣೆ: ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮೆಗ್ನೇಷಿಯಂ ಸಲ್ಫೇಟ್ ಬಳಸುವುದು, ಆಮ್ಲ ಮಣ್ಣಿಗೆ ಡೊಲಾಮೈಟಿಕ್ ಸುಣ್ಣ ಬೆರೆಸುವುದು, ಶೇ. ೦.೫-೧.೦ರಷ್ಟು ಮೆಗ್ನೇಷಿಯಂ ಸಲ್ಫೇಟ್ ಸಿಂಪರಣೆ ಮಾಡುವುದು, ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ಬಳಸುವುದು.