ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಕೃಷಿಯೊಂದು ಕಲೆ

ಬಿ. ಎಮ್. ಚಿತ್ತಾಪೂರ
೯೪೪೮೮೨೧೭೫೫

ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿ ಬರುತ್ತಿರುವುದು ಪ್ಲಾಸ್ಟಿಕ್ ಭೂ ಹೊದಿಕೆ. ಡ್ರಿಪ್ ನೀರಾವರಿಯಲ್ಲಿ ಆರ್ಥಿಕ ಬೆಳೆಗಳಾದ ಕಲ್ಲಂಗಡಿ, ಕರಬೂಜ, ಉಳ್ಳಾಗಡ್ಡಿ ಮತ್ತು ಪರದೆ ಮನೆಗಳಲ್ಲಿ ಮೆಣಸಿನಕಾಯಿ, ಟೊಮಾಟೊ ಬೀಜೋತ್ಪಾದನೆ ಇತ್ಯಾದಿಗಳಲ್ಲಿ ಬಳಸಲಾಗುತ್ತಿದೆ. ಇದರಿಂದ ೧ ರಿಂದ ೧ ೧/೨ ಇಂಚು ನೀರಿನ ಸಾಮರ್ಥ್ಯದ ಕೊಳವೆ ಬಾವಿಯ ನೀರು ಬಳಸಿ ಬೆಳೆ ಉತ್ಪಾದನೆಯಲ್ಲದೆ ಗುಣಾತ್ಮಕ ಉತ್ಪಾದನೆ ಕೂಡ ಸಾಧ್ಯವಾಗುತ್ತದೆ. ಬೀದರಿನ ಅಭಿಮನ್ಯುರವರು ಅಳವಡಿಸಿಕೊಂಡಿರುವ ವಿಭಿನ್ನ ಮತ್ತು ವಿಶೇಷ ಪದ್ಧತಿಯನ್ನು ಉದಾಹರಿಸಬಹುದು. ಇವರು ಕರಬೂಜ ಬೇಸಾಯದಲ್ಲಿ ಏರುಮಡಿ ಮಾಡಿ ಮಧ್ಯದಲ್ಲಿ ಡ್ರಿಪ್ ಪೈಪ್ ಅಳವಡಿಸಿ ಮೇಲೆ ಪ್ಲಾಸ್ಟಿಕ್ ಹೊದಿಸಿ, ಹೊದಿಕೆಯಲ್ಲಿ ರಂಧ್ರ ಕೊರೆದು ಆ ರಂಧ್ರದಲ್ಲಿ ಕರಬೂಜಿನ ಸಸಿಯನ್ನು ನಾಟಿ ಮಾಡುವರು. ೨೧ ದಿನಗಳ ನಂತರ ಸಸಿ ನಾಟಿಗಳ ಮೇಲೆ ಇನ್ನೊಂದು ಪ್ಯಾಕೇಜ್ ಪ್ಲಾಸ್ಟಿಕ್ (ಸ್ಪಂಜಿನಂತ) ಶೀಟನ್ನು ಸಡಿಲವಾಗಿ ಹೊದಿಸಿ ಪಕ್ಕದ ಬದಿಗಳನ್ನು ಮಣ್ಣಿನಲ್ಲಿ ಸೇರಿಸಲಾಗುವುದು. ಒಳಗೆ ಸಸಿಗಳು ಬೆಳೆದಂತೆ ಮೇಲಿನ ಹೊದಿಕೆ ಬಲೂನಿನಂತೆ ಉಬ್ಬುತ್ತದೆ. ಹದಿನೈದು ದಿನಗಳ ಅಂತರದಲ್ಲಿ ಒಳಗಡೆ ಸಸಿ ಬಳ್ಳಿ ಹರಡಿಕೊಂಡಂತೆ ಮೇಲಿನ ಹೊದಿಕೆಯನ್ನು ತೆಗೆಯಲಾಗುತ್ತದೆ. ಇದರಿಂದಾಗಿ ಅವರೆ ಹೇಳುವಂತೆ ಏಕಕಾಲದಲ್ಲಿ ಬಳ್ಳಿಯಲ್ಲಿನ ಹೂಗಳು ಬಂದು ಸಮ ಗಾತ್ರದ ಮತ್ತು ಏಕ ಕಾಲದಲ್ಲಿ ಮಾಗುವಂತೆ ಕಾಯಿಗಳು ಬೆಳವಣಿಗೆಯಾಗುವುದು ಮತ್ತು ಹೂ ಮತ್ತು ಕಾಯಿಗಳಿಗೆ ಕೀಟದ ಬಾಧೆ ಸಹಿತ ಇರುವುದಿಲ್ಲ. ಹೀಗೆ ಬೆಳೆಯ ಮೇಲೆ ಪ್ಲಾಸ್ಟಿಕ್ ಹೊದಿಕೆ ವಿಚಾರ ಹೊಸದು