ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಮಣ್ಣ ಮಡಿಲಲ್ಲಿ

ವಿಶಿಷ್ಠ ಹೂ ಕುಟುಂಬ

image_
ಸಂಪಾದಕರು
1

ಹೊಳೆಹೊನ್ನೂರಿನ ಈ ವಿಶಿಷ್ಠ ಹೂ ಕುಟುಂಬದ ಯಜಮಾನ ಕೆ.ಸಿ.ಚಂದ್ರು. ಇವರು ಉತ್ತಮ ಶಿಕ್ಷಣ ಹಾಗೂ ಕೈ ಬೀಸಿ ಕರೆಯುತ್ತಿದ್ದ ಶಿಕ್ಷಕ ಹುದ್ದೆಗಳಿದ್ದರೂ ಕೃಷಿಯನ್ನು ಆಯ್ಕೆ ಮಾಡಿಕೊಂಡು ಬಡ್ಡಿ ಕಟ್ಟದೆ ಕೃಷಿ ಮಾಡಿದ ಹೆಗ್ಗಳಿಕೆ ಇವರದು. ಉತ್ತಮ ಮಧ್ಯಮ ವರ್ಗದ ಜೀವನ ನಡೆಸುತ್ತಿರುವ ಇವರಿಗೆ ನಾಲ್ಕು ಎಕರೆ ಫಸಲಿಗೆ ಬಂದ ಅಡಿಕೆ ಒಂದು ಎಕರೆ ತೆಂಗಿನ ತೋಟವೇ ಆದಾಯದ ಮೂಲ. ಇನ್ನುಳಿದ ೬ಳಿ ಎಕರೆ ಬತ್ತ ಬೆಳೆಯಲು ಗುತ್ತಿಗೆ ಕೊಡುತ್ತಿದ್ದರು. ಕಳೆದ ಮೂರು ವರ್ಷದ ಹಿಂದೆ ಇದನ್ನು ಅಡಿಕೆ ತೋಟವಾಗಿಸುವ ಚಿಂತನೆ ಮಾಡಿ ಭದ್ರಾ ನದಿ ನೀರನ್ನು ತಮ್ಮ ಹೊಲಕ್ಕೆ ತಂದರು. ತೋಟ ಕಟ್ಟಿ ನಿರ್ವಹಣೆ ಮಾಡುವ ವೆಚ್ಚ ಭರಿಸಲು ಹೂ ಕುಟುಂಬ ಕಟ್ಟಿದರು. ತೋಟ ಕಟ್ಟಿದ ನಂತರ ೧೮ ಜನಕ್ಕೆ ಅರ್ಧ ಅಥವಾ ಕಾಲು ಎಕರೆಯಂತೆ ಜಮೀನನ್ನು ಗುತ್ತಿಗೆ ಕೊಟ್ಟರು. ತೋಟದಲ್ಲಿ ಅಂತರ ಬೆಳೆಯಾಗಿ ಎಷ್ಟು ವರ್ಷವಾದರೂ ಗುತ್ತಿಗೆದಾರರು ಬೆಳೆದುಕೊಳ್ಳಬಹುದು. ಒಮ್ಮೆ ಅರ್ಧಎಕರೆಗೆ ೨೫೦೦೦ ರೂ. ಪಾವತಿಸಿದರೆ ಆಯಿತು. ಅಬ್ಬಾ ಇದರಿಂದ ಆದ ಉದ್ಯೋಗ ಸೃಷ್ಠಿ ಅಗಾಧ. ಹದಿನೆಂಟು ಜನ ಸಣ್ಣ ಹಿಡುವಳಿದಾರರು ಭೂರಹಿತರ ಕುಟುಂಬಗಳು ಇದರಲ್ಲಿ ತೊಡಗಿಕೊಂಡವು. ಅಲ್ಲದೆ ಇವರನ್ನಾಶ್ರಯಿಸಿದ ೧೦೦ ರಿಂದ ೧೫೦ ಕೂಲಿ ಆಳುಗಳಿಗೆ ಜೀವನ ಕೊಟ್ಟಿದೆ ಈ ಹೂ ಬೆಳೆ. ಇಲ್ಲಿ ಪ್ರಮುಖವಾಗಿ ಬೆಳೆಯುವ ಹೂ ಸೇವಂತಿಗೆ. ಸ್ವಲ್ಪ ಭಾಗ ಕಾಕಡ ಹೂ ಇದೆ. ಎಲೆ ಮರೆಯ ಕಾಯಂತೆ ಹಲವು ಕುಟುಂಬಗಳ ಉದ್ಯೋಗಕ್ಕೆ ದಾರಿಯಾದ ಈ ಹೂ ಕುಟುಂಬದ ಯಜಮಾನರನ್ನು ಸದಸ್ಯರು ಅಭಿಮಾನದಿಂದ ಸ್ಮರಿಸುತ್ತಾರೆ.

34

ಕೃಷ್ಣ ಹೂ ಕುಟುಂಬದ ಸದಸ್ಯರಲ್ಲಿ ಒಬ್ಬರು. ಇವರು ಕಳೆದ ೧೮ ವರ್ಷಗಳಿಂದ ಪುಷ್ಪ ಕೃಷಿ ಮಾಡುತ್ತಿದ್ದಾರೆ. ಹಾಲಿ ಅರ್ಧ ಎಕರೆಯಲ್ಲಿ ಸೇವಂತಿಗೆ ಬೆಳೆಯುತ್ತಿದ್ದಾರೆ. ಈ ಬೆಳೆ ನಮಗೆ ಬದುಕು ಕಟ್ಟಿಕೊಟ್ಟಿದೆ. ನಮಗೆ ಸ್ವಂತ ಜಮೀನಿಲ್ಲ ಬರೀ ಗುತ್ತಿಗೆ ಪಡೆದೆ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ. ಒಂದು ಎಕರೆ ಮಾಡಬಹುದಲ್ಲಾ ಆದಾಯ ಜಾಸ್ತಿ ಬರುತ್ತೆ ಅಂದ್ರೆ ಮೇಂಟೆನ್ ಮಾಡಕೆ ಆಗಲ್ಲ ಸಾರ್. ಬಾರಿ ಖರ್ಚು ಸೂಕ್ಷ್ಮ ಬೆಳೆ ಮಕ್ಕಳಂತೆ ನೋಡಿಕೊಳ್ಳಬೇಕು, ಕೂಲಿ ಆಳುಗಳು ಹೆಚ್ಚು ಬೇಕು. ಹಾಗಾಗಿ ಳಿ ಎಕರೆ ನಿರ್ವಹಣೆಯೇ ಸೂಕ್ತ ಅಂತಾರೆ. ಮೊದಲು ಕಾಕಡಾ ಬೆಳೆಯುತ್ತಿದ್ದ ಇವರು ಹೂ ಎತ್ತಲು ಕೂಲಿ ಆಳುಗಳು ಹೆಚ್ಚು ಬೇಕಾದ್ದರಿಂದ ಸೇವಂತಿಗೆ ಬೆಳೆ ಪ್ರಾರಂಭಿಸಿದೆ ಎನ್ನುತ್ತಾರೆ ಕೃಷ್ಣ. ಇವರ ಅರ್ಧ ಎಕರೆಗೆ ಒಂದು ಲಕ್ಷದವರೆಗೆ ಖರ್ಚು ಬರುತ್ತೆ. ನಂತರ ಹೂ ಬಿಡಲು ಪ್ರಾರಂಭಿಸಿದರೆ ಕೊಯ್ಲುಗೆ ನಿತ್ಯ ಕೂಲಿ ಆಳು ಬೇಕು. ಬೆಳಗ್ಗೆ ೭ರಿಂದ ೧೦ ರವರೆಗೆ ಕೆಲಸ. ದಿನಕ್ಕೆ ಒಬ್ಬರಿಗೆ ೮೦ ರೂ. ಹಾಗೂ ಬೆಳಿಗ್ಗೆಯ ತಿಂಡಿ. ಪ್ರತಿ ವಾರ ಔಷಧಿ ಖರ್ಚು ಸರಾಸರಿ ೨೦೦೦ ರೂ. ತಿಂಗಳಿಗೊಮ್ಮೆ ೧೦೦೦ದಿಂದ ೧೫೦೦ ರೂ. ಗೊಬ್ಬರ/ಪೋಷಕಾಂಶಗಳಿಗೆ ವೆಚ್ಚ. ಅಬ್ಬಬ್ಬಾ ಇವರು ಹೇಳುವ ಖರ್ಚು ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಒಮ್ಮೆ ಸೇವಂತಿಗೆ ಅಂಟು ಹಚ್ಚಿದರೆ ಮೊದಲ ಕಟಾವು ೩ಳಿ ತಿಂಗಳ ನಂತರ ಬರುತ್ತೆ. ಒಂದೂವರೆ ತಿಂಗಳು ಹೂ ಬರುತ್ತೆ. ನಂತರ ಪ್ರೂನಿಂಗ್ ಮಾಡಿದರೆ ೨ಳಿ ತಿಂಗಳ ನಂತರ ಮತ್ತೆ ಒಂದೆರಡು ತಿಂಗಳು ಹೂ ಬಿಡುತ್ತದೆ. ದಿನವೂ ಒಂದರಿಂದ ಒಂದೂವರೆ ಟನ್ ಹೂ ಕೊಯ್ಲು ಮಾಡುವ ಇವರು ಹೂ ಬೆಲೆ ಕೇಳಿದರೆ ಕೆ.ಜಿ.ಗೆ ೧೦ ರಿಂದ ೧೦೦ ರೂ. ಅಂತ ಹೇಳ್ತಾರೆ. ಸರ್ ಕೆ.ಜಿ.ಗೆ ಕನಿಷ್ಠ ೫೦ ರಿಂದ ೬೦ ರೂಪಾಯಿ ಸಿಕ್ಕರೆ ಲಾಭ ಬರುತ್ತೆ. ಕೆಲವೊಮ್ಮೆ ಕೇವಲ ೧೦ ರೂ. ಸಿಗುತ್ತೆ. ಬೆಳೆ ನನಗೆ ಕೈ ಹಿಡಿದಿದೆ. ಈ ೧೮ ವರ್ಷದಲ್ಲಿ ೨-೩ ಬಾರಿ ಮಾತ್ರ ನಷ್ಟವಾಗಿದೆ ಅಂತಾರೆ ಕೃಷ್ಣ. ಇವರು ಚಿತ್ರದುರ್ಗ ಕಡೆಯಿಂದ ಅಂಟು ತರುತ್ತಾರೆ. ನೀರಾವರಿ ಹಾಗೂ ಮಳೆ ಹೆಚ್ಚು ಇರುವಲ್ಲಿಯ ಅಂಟು ಚೆನ್ನಾಗಿ ಬರುವುದಿಲ್ಲ. ಬೆಳೆ ನಿರ್ವಹಣೆ ರೋಗ ಕೀಟ ನಿರ್ವಹಣೆಯನ್ನು ಅನುಭವ ಹಾಗೂ ಕೀಟ ಔಷಧ ಮಾರಾಟಗಾರರನ್ನು ಆಧರಿಸಿ ಮಾಡುತ್ತಾರೆ. ಕೃಷ್ಣರವರೇ ೧೮ ವರ್ಷದ ತಮ್ಮ ಅನುಭವದಲ್ಲಿ ಯಾರಾದರೂ ಹೂ ಬೆಳೆಯೋರಿದ್ರೆ ನಿಮ್ಮ ಸಲಹೆ ಏನು? ಅಂದ್ರೆ, ಸಾರ್ ನಿಯತ್ತಿಂದ ಕೆಲಸ ಮಾಡಿದ್ರೆ ಈ ಬೆಳೆ ಕೈ ಬಿಡಲ್ಲ. ಇದು ಸೂಕ್ಷ್ಮ ಬೆಳೆ ಆದಾಯ ಇದೆ ಅಂತ ಬಹಳ ಬೆಳೆದ್ರೆ ಕಷ್ಟ. ಬೆಲೆ ಬಿದ್ದು ಹೋಗುತ್ತೆ ಅಂತಾರೆ. ತಾವು ಬೆಳೆದ ಹೂವನ್ನು ಶಿವಮೊಗ್ಗ ಮಾರುಕಟ್ಟೆಗೆ ತಾವೇ ಮಾರಾಟ ಮಾಡ್ತಾರೆ. ಜೊತೆಗೆ ಇನ್ನುಳಿದ ರೈತರಿಗೂ ಮಾರುಕಟ್ಟೆ ಮಾಡಲು ನೆರವಾಗುತ್ತಾರೆ. ಇದರಿಂದ ಅಲ್ಪ ಸ್ವಲ್ಪ ಕಮಿಶನ್ ಸಹ ಇದೆ ಅಂತಾರೆ ಕೃಷ್ಣ.

67

ಕೃಷ್ಣ ಹಲವು ದೃಷ್ಠಿಯಿಂದ ವಿಶಿಷ್ಠ ವ್ಯಕ್ತಿ ಅಂತ ನನಗೆ ಅನಿಸಿದೆ. ಕೃಷಿ ಲಾಭದಾಯಕ ಅಲ್ಲ ಅನ್ನುವವರ ಮಧ್ಯ ಜಮೀನೇ ಇಲ್ಲದೆ ಗುತ್ತಿಗೆ ಜಮೀನಿನಲ್ಲಿ ಕೃಷಿ ಮಾಡಿ ೧೮ ವರ್ಷದ ಬದುಕಿನಲ್ಲಿ ಸರ್ ಹೂ ನನ್ನ ಕೈ ಹಿಡಿದಿದೆ ಅನ್ನುವ ಅವರ ಆತ್ಮಸ್ಥೈರ್ಯದ ಮಾತು ಈ ಮಣ್ಣ ಮಡಿಲಲ್ಲಿ ಸಾಧಕರಿಗೆ ಅವಕಾಶಗಳಿವೆ ಎನ್ನುವುದಕ್ಕೆ ಪುಷ್ಠಿ ನೀಡೀತು.