ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಜಡೆಯಪ್ಪ ಹೂ ಕುಟುಂಬದ ಇನ್ನೊಬ್ಬ ಸದಸ್ಯ -ಕಾಕಡ ಬೆಳೆ

1

ನಾನು ನನ್ನ ಹೆಂಡತಿ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದೇವೆ. ಅದರ ಜೊತೆಗೆ ಹೂವು ಬೆಳೆಯುತ್ತಿದ್ದೇವೆ. ಬೆಳಿಗ್ಗೆ ಸಂಜೆ ಹೂವಿನ ಕೆಲಸ ಮಾಡಿ, ಕೂಲಿಗೆ ಹೋಗುತ್ತೇವೆ. ಹೂ ಬೆಳೆಯುವ ಜಮೀನಿನ ಮಾಲೀಕರು ನಮ್ಮಿಂದ ಹಣ ಏನು ಪಡೆಯುತ್ತಿಲ್ಲ, ಬದಲಿಗೆ ಅವರ ಜಮೀನಿನಲ್ಲಿ ಕೆಲಸ ಇದ್ದಾಗ ಕೆಲಸ ಮಾಡುತ್ತಿದ್ದೇವೆ. ನಾವು ಕಾಕಡ ಹೂವನ್ನು ೨ ವರ್ಷದಿಂದ ಬೆಳೆಯುತ್ತಿದ್ದೇವೆ. ಕಾಕಡ ಹೂವು ಬೆಳೆಗೆ ರೋಗ ಅಥವಾ ಇತರೆ ನಿರ್ವಹಣೆ ಖರ್ಚು ಕಮ್ಮಿ ಆದರೆ ಹೂ ಬಂದಾಗ ಒಮ್ಮೆಗೆ ಬಿಡಿಸಬೇಕು, ಆಗ ಸ್ವಲ್ಪ ಜಾಸ್ತಿ ಜನ ಬೇಕು. ಹೂವನ್ನು ಇಲ್ಲೆ ಜಮೀನಿನಲ್ಲಿ ಮಾರಾಟ ಮಾಡುತ್ತೇವೆ, ಬೆಲೆ ಮಾರುಕಟ್ಟೆ ಏರು-ಇಳಿತದ ಮೇಲೆ ಅವಲಂಬಿತವಾಗಿರುವುದರಿಂದ, ಇಷ್ಟೆ ಬೆಲೆ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ನಾನು ನನ್ನ ಹೆಂಡತಿ ಇಬ್ಬರೇ ನಿರ್ವಹಣೆ ಮಾಡುವುದರಿಂದ ಕೂಲಿಯವರಿಗೆ ಕೊಡುವ ಖರ್ಚು ಮಿಕ್ಕುವುದರಿಂದ ನಮಗೆ ಸ್ವಲ್ಪ ಹಣ ಅದರಿಂದ ಉಳಿಯುತ್ತಿದೆ. ನಮಗೆ ಯಾವುದೇ ಆಸ್ತಿ ಇಲ್ಲ. ನಾವು ಕೂಲಿ ಮಾಡಿಯೇ ಜೀವನ ಮಾಡಬೇಕು, ಕೂಲಿ ಹಣ ಹೊಟ್ಟೆಗೆ ಆದರೆ, ಹೂವಿನಿಂದ ಬಂದ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗವಾಗುತ್ತಿದೆ.