ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಮೌಲ್ಯವರ್ಧನೆ

ಹಲಸಿನ ಬೀಜದ ಖಾರದಾನಿ

ಡಾ. ಅಕ್ಕಮಹಾದೇವಿ ಡಿ. ಅಗಸಿಮನಿ
9448933679

ಬೇಕಾದ ಸಾಮಗ್ರಿಗಳು:

  • ಹಲಸಿನ ಬೀಜದ ಪೇಸ್ಟ್ - ೧ ಲೋಟ
  • ಬೇಯಿಸಿದ ಆಲೂಗೆಡ್ಡೆ ತುರಿ - ೧ ಲೋಟ
  • ಕೆಂಪು ಖಾರದ ಪುಡಿ- ರುಚಿಗೆ ತಕ್ಕಷ್ಟು
  • ಅರಿಶಿಣ-೧/೪ ಚಮಚ
  • ಬೆಳ್ಳುಳ್ಳಿ ಪೇಸ್ಟ್-೧ ಟೀ ಚಮಚ
  • ಪುಟಾಣಿ (ಹುರಿಗಡಲೆ) ಹಿಟ್ಟು
  • ಉಪ್ಪು ರುಚಿಗೆ ತಕ್ಕಷ್ಟು
  • ಮಾಡುವ ವಿಧಾನ :

  • ಬೇಯಿಸಿದ ಹಲಸಿನ ಬೀಜದ ಪೇಸ್ಟ್, ಬೇಯಿಸಿದ ಆಲೂಗಡ್ಡೆ ತುರಿ, ಉಪ್ಪು, ಖಾರ, ಅರಿಶಿಣ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರಣ ಮಾಡಬೇಕು, ಈ ಮಿಶ್ರಣ ಚಕ್ಕುಲಿ ಹದಕ್ಕೆ ಬರುವವರೆಗೂ ಪುಟಾಣಿ (ಹುರಿಗಡಲೆ) ಹಿಟ್ಟನ್ನು ಸೇರಿಸುತ್ತಾ ನಾದಬೇಕು. ನಂತರ ಸೆಂಡಿಗೆ ಮಾಡುವ ಸಾಣಿಗೆ (ಜಾಲರಿ) ಗೆ ಹಾಕಿ ನೇರವಾಗಿ ಕಾಯಿಸಿದ ಎಣ್ಣೆಯಲ್ಲಿ ಒತ್ತಬೇಕು. ನಂತರ ಹೊಂಬಣ್ಣ ಬರುವವರೆಗೆ ಕರಿದು ಹೊರ ತೆಗೆಯಬೇಕು.
  •