ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ವನೌಷಧಿ

ಅವರೆ

image_
1

ಅವರೆಯು ಗುರು, ಒಗರು, ರೂಕ್ಷವಾಗಿದ್ದು ಮಧುರವೂ ಶೀತವೀರ್ಯಯುಕ್ತವೂ ಆಗಿರುತ್ತದೆ. ಇದು ರುಚಿಕರವಾದರೂ ತೃಷೆ, ದಾಹ, ಉಷ್ಣ ವಾಯುಗಳನ್ನು ಕೆರಳಿಸಿ ವಿಷ್ಟಂಭವನ್ನುಂಟು ಮಾಡುತ್ತದೆ; ಇದು ಸ್ತನ್ಯಜನಕವಾಗಿದ್ದು ವಿಷಪರಿಹಾರಕವೂ, ಕಫಘ್ನವೂ ಮತ್ತು ಶೋಭಘ್ನವೂ ಆಗಿರುತ್ತದೆ; ಒಣಗಿದ ಅವರೆಗಿಂತ ಹಸಿಯ ಅವರೆಯು ಶ್ರೇಷ್ಠ. ಹಸಿಯ ಅವರೆಯು ಮಧುಮೇಹ ನಿವಾರಕವಾಗಿರುತ್ತದೆಂದು ಅನುಭವದಿಂದ ತಿಳಿಯಲಾಗಿದೆ. ಆದರೆ ಒಣಗಿದುದೂ ಬೇಯಿಸಿದುದೂ ತದ್ವಿರುದ್ಧವಾಗಿದ್ದು ಜಡವೂ, ಅಗ್ನಿಮಾಂದ್ಯವೂ ಆಗಿರುತ್ತದೆ. ಹಸಿಯ ಅವರೆಕಾಳು ಬಲ್ಯಪೂ, ಕಾಂತಿದಾಯಕವೂ, ವೀರ್ಯವೃದ್ಧಿಕಾರಕವೂ ಆದರೆ ಒಣಗಿದುದೂ, ಬೇಯಿಸಿದುದೂ ಇದಕ್ಕೆ ತೀರ ವಿರುದ್ಧವಾಗಿ ವಾತಕಾರಕವೂ, ವೀರ್ಯನಾಶಕವೂ ಆಗಿದ್ದು ಮದಕಾರಕವಾಗಿರುತ್ತದೆ, ಆದುದರಿಂದ ಅವರೆಯ ಬೇಳೆಯನ್ನು ಸ್ವಲ್ಪ ಹುರಿದು ಉಪಯೋಗಿಸುವುದು ಒಳ್ಳೆಯದು.

ಕನ್ನಡ, ಸಂಸ್ಕೃತ, ಹಿಂದಿ, ತಮಿಳು, ತೆಲುಗು,ಇಂಗ್ಲೀಷ್

ಅವರೆ, ಉದ್ಧಾಲಕ, ನಿಶ್ಪಾವ್, ಆಕಾರ ತಾಮರೈ, ಅಂತರದಾಮರ, ಲೆಟಿನ್-Pistia

-,ರಾಜಶಿಂಬಿ,ಭಟ್ವಾಸ್, -,-,Stratiotes

-, ವಲ್ಲಕ ,-,-,-,-