ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಔಷಧಿ ಸಸ್ಯಗಳು

ಸರ್ಪಗಂಧ

image_
ಡಾ. ಯಶಸ್ವಿನಿ ಶರ್ಮ
9535228694
1

ಸರ್ಪಗಂಧವು ಸ್ಥಳೀಯ ಔಷಧಿ ಸಸ್ಯವಾಗಿದ್ದು, ನಶಿಸಿ ಹೋಗುತ್ತಿರುವ ಸಸ್ಯಗಳ ಪಟ್ಟಿಯಲ್ಲಿ ಸೇರಿದೆ. ’ರಾವುಲ್ಫಿಯಾ ಸರ್ಪೆಂಟಿನಾ’ ಎಂದು ವೈಜ್ಞಾನಿಕವಾಗಿ ಗುರುತಿಸಲ್ಪಡುವ ಈ ಸಸ್ಯ ’ಅಪೋಸೈನೇಸೀ’ ಕುಟುಂಬಕ್ಕೆ ಸೇರಿದೆ. ಇದರ ಬೇರು ತುಂಬಾ ಆಳವಾಗಿ ಹೋಗುವುದರಿಂದ ಮತ್ತು ಅದನ್ನು ಹಾವು ಕಡಿತದ ಚಿಕಿತ್ಸೆಯಲ್ಲಿ ಬಳಸುವುದರಿಂದ ಇದನ್ನು ’ಗರುಡ ಪಾತಾಳ’ ಎಂದು ಕರೆಯುತ್ತಾರೆ. ಸರ್ಪಗಂಧಕ್ಕೆ ಆಕಸ್ಮಿಕವಾಗಿ ಉಂಟಾಗುವ ಮಾನಸಿಕ ರೋಗವನ್ನು ಕಡಿಮೆ ಮಾಡುವ ಗುಣವಿರುವುದರಿಂದ ಇದನ್ನು ಮರಳು ಮದ್ದು ಅಥವಾ ಪಾಗಲ್ ಕಾ ದವಾ ಎಂದೂ ಕರೆಯುತ್ತಾರೆ. ಸೋರಿಯಾಸಿಸ್ ನಿವಾರಣೆಯಲ್ಲಿ ಸಹ ಬಳಸುತ್ತಾರೆ. ಇದೊಂದು ಬಹುವಾರ್ಷಿಕ, ೬೦ ರಿಂದ ೯೦ ಸೆಂ.ಮೀ. ಎತ್ತರಕ್ಕೆ ಬೆಳೆಯುವ ಸಸ್ಯವಾಗಿದ್ದು, ಆಕರ್ಷಕ ಕೆಂಪು ಮಿಶ್ರಿತ ಬಿಳಿ ಹೂಗಳನ್ನು ಬಿಡುತ್ತವೆ ಹಾಗೂ ಹೊಳಪಾಗಿರುವ ಚಿಕ್ಕ ಕಪ್ಪು ಬಣ್ಣದ ಹಣ್ಣುಗಳನ್ನು ಬಿಡುತ್ತವೆ. ಇದರ ಬೇರನ್ನು ಹಾಗೂ ಬೇರಿನ ತೊಗಟೆಯನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಒಣಗಿದ ಬೇರಿನಲ್ಲಿ ಸುಮಾರು ಶೇ. ೧.೭ ರಿಂದ ೩ ರಷ್ಟು ಸಸ್ಯಕ್ಷಾರವಿರುತ್ತದೆ

  • ಗಳಗಂಡ, ಗಂಟಲುಊತ ಹಾಗೂ ಅತಿಯಾದ ಬೆವರಿನ ಚಿಕಿತ್ಸೆಯಲ್ಲಿಯೂ ಸರ್ಪಗಂಧ ಬಳಕೆಯಲ್ಲಿದೆ
  • ಅಲೋಪತಿ ಔಷಧಿಗಳಲ್ಲಿ ಇದನ್ನು ನಿದ್ರಾಜನಕವಾಗಿ ಹಾಗೂ ಉಪಶಮನ ಕಾರಕವಾಗಿ ಉಪಯೋಗಿಸುತ್ತಾರೆ
  • ದೇಶೀಯ ಉತ್ಪಾದನೆ/ಲಭ್ಯತೆ ೩೦ ಟನ್, ಬೇಡಿಕೆ ೬೫೦ ಟನ್ ಅಂತರರಾಷ್ಟ್ರೀಯ ಬೇಡಿಕೆ ೨೦,೦೦೦ ಅನ್ ಆದರೆ ಉತ್ಪಾದನೆ ೧೫೦ ಟನ್ ಇದೆ

    ವಂಶಾಭಿವೃದ್ಧಿ ಬೇರಿನ ತುಂಡು/ಬೀಜ

    ಅಂತರ: ೪೫ ಘಿ ೩೦ ಸೆಂ.ಮೀ., ಹೆಕ್ಟೇರಿಗೆ ೫ ಕೆ.ಜಿ. ಬೀಜ ಬೇಕು/೧೦೦ ಕೆ.ಜಿ. ಬೇರಿನ ತುಂಡು ಮಣ್ಣು: ಫಲವತ್ತಾದ ೪.೬ ರಿಂದ ೬.೨ ರಸಸಾರವಿರುವ ಮೆಕ್ಕಲು/ಜೇಡಿ/ ಜಂಬಿಟ್ಟಿಗೆ ಮಣ್ಣು ಸೂಕ್ತ. ಗೊಬ್ಬರ ಪ್ರತಿ ಹೆಕ್ಟೇರಿಗೆ ೨೫-೩೦ ಟನ್ ಕೊಟ್ಟಿಗೆ ಗೊಬ್ಬರ, ೬೦ ಕೆ.ಜಿ. ರಂಜಕ.ನಾಟಿ ಮಾಡಿದ ೧೮ ತಿಂಗಳಿಗೆ ಬೇರಿನ ಕೊಯ್ಲು ಮಾಡಬಹುದು. ಪ್ರತಿ ಹೆಕ್ಟೇರಿಗೆ ೨೨೦೦ ಕೆ.ಜಿ. ಒಣ ಬೇರು. ಪ್ರತಿ ಕೆ.ಜಿ. ಒಣ ಬೇರಿಗೆ ೧೫೦೦ ರೂಗಳಿವೆಎರಡು ವರ್ಷಕ್ಕೆ ೧೫ ರಿಂದ ೨೦ ಲಕ್ಷ ಲಾಭ ಪಡೆಯಬಹುದು